ಡೊನಾಲ್ಡ್ ಟ್ರಂಪ್ online desk
ವಿದೇಶ

'ತುಂಬಾ ಲೇಟ್ ಆಯಿತು': ಇರಾನ್​ ಮಾತುಕತೆ ಪ್ರಸ್ತಾಪಕ್ಕೆ ಟ್ರಂಪ್ ತಿರುಗೇಟು

'ಅವರ ವಾಯುಪಡೆ, ನೌಕಾಪಡೆ ಮತ್ತು ನಾಯಕತ್ವ ಕಳೆದು ಹೋಗಿದೆ. ಅವರು ಮಾತನಾಡಲು ಬಯಸುತ್ತಾರೆ. ಆದರೆ ಈಗಾಗಲೇ 'ತುಂಬಾ ತಡವಾಗಿದೆ' ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಜೊತೆ ಮಾತುಕತೆ ಪುನರಾರಂಭಿಸಲು 'ತುಂಬಾ ತಡವಾಯಿತು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

ಈಗಾಗಲೇ ಇರಾನ್ ತನ್ನ ನಾಯಕತ್ವ ಕಳೆದುಕೊಂಡಿದ್ದು, ಅದರ ವಾಯು ಪಡೆ, ನೌಕಾಪಡೆಗಳು ನಾಶವಾಗಿವೆ ಎಂದು ಟ್ರಂಪ್​ ತಿಳಿಸಿದ್ದಾರೆ.

'ಅವರ ವಾಯುಪಡೆ, ನೌಕಾಪಡೆ ಮತ್ತು ನಾಯಕತ್ವ ಕಳೆದು ಹೋಗಿದೆ. ಅವರು ಮಾತನಾಡಲು ಬಯಸುತ್ತಾರೆ. ಆದರೆ ಈಗಾಗಲೇ 'ತುಂಬಾ ತಡವಾಗಿದೆ' ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕ ದಿವಂಗತ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ANIಗೆ ನೀಡಿದ ಸಂದರ್ಶನದಲ್ಲಿ "ಇರಾನ್ ಮಾತುಕತೆಗೆ ಸಿದ್ಧವಾಗಿದೆ. ಆದರೆ ಘನತೆಯಿಂದ ಕೂಡಿರಬೇಕು" ಎಂದು ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಪ್ರತಿಕ್ರಿಯೆ ಹೊರ ಬಿದ್ದಿದೆ.

ಏತನ್ಮಧ್ಯೆ, ಇರಾನ್‌ನಲ್ಲಿ ಹಿರಿಯ ಕಮಾಂಡರ್‌ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇತ್ತೀಚೆಗೆ ನಡೆಸಲಾದ ಕಾರ್ಯಾಚರಣೆಯ ಫಲಿತಾಂಶದ ಕುರಿತು ಇಸ್ರೇಲ್ ಸೇನೆಯು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಇದಕ್ಕೂ ಮೊದಲು, ಇರಾನ್ ವಿರುದ್ಧದ ಅಮೆರಿಕದ ದಾಳಿಗಳ ಕುರಿತು ಟ್ರಂಪ್, ಅಮೆರಿಕ ಸಂಸತ್, ಕಾಂಗ್ರೆಸ್‌ಗೆ ಅಧಿಕೃತ ಪತ್ರವನ್ನು ಕಳುಹಿಸಿದ್ದು, ಅದರಲ್ಲಿ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಟ್ರಂಪ್ ತಮ್ಮ ಪತ್ರದಲ್ಲಿ, ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು, ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯದ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಿತ್ರರಾಷ್ಟ್ರಗಳು ಸೇರಿದಂತೆ ಪ್ರಾದೇಶಿಕ ಮಿತ್ರರಾಷ್ಟ್ರಗಳ ಸಾಮೂಹಿಕ ಸ್ವರಕ್ಷಣೆಗಾಗಿ ಫೆಬ್ರವರಿ 28 ರಂದು ತಮ್ಮ ನಿರ್ದೇಶನದ ಮೇರೆಗೆ ದಾಳಿಗಳನ್ನು ನಡೆಸಲಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನನ್ನ ನಿರ್ದೇಶನದ ಮೇರೆಗೆ ಫೆಬ್ರವರಿ 28, 2026 ರಂದು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇರಾನ್‌ನೊಳಗಿನ ಹಲವಾರು ಗುರಿಗಳ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನದ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿದವು. ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳು ತನ್ನ ತಾಯ್ನಾಡನ್ನು ರಕ್ಷಿಸಲು, ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ವಾಣಿಜ್ಯದ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ದೇಶದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸಲು ಮತ್ತು ಇಸ್ರೇಲ್ ಸೇರಿದಂತೆ ನಮ್ಮ ಪ್ರಾದೇಶಿಕ ಮಿತ್ರರಾಷ್ಟ್ರಗಳ ಸಾಮೂಹಿಕ ಸ್ವರಕ್ಷಣೆಗಾಗಿ ಈ ದಾಳಿಗಳನ್ನು ಕೈಗೊಳ್ಳಲಾಗಿದೆ ಎಂದು ಟ್ರಂಪ್ ಪತ್ರದಲ್ಲ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಲ್ಲಿ ಭಾಗಿಯಾಗದಂತೆ ಯುರೋಪಿಯನ್ ದೇಶಗಳಿಗೆ ಇರಾನ್ ಎಚ್ಚರಿಕೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್​ಗಾಗಿ ಬೇಡಿಕೆ ಇಟ್ಟ IPL ಫ್ರಾಂಚೈಸಿಗಳು!

'ಅವರು ಒಬ್ಬ ಅನುಭವಿ ವ್ಯಕ್ತಿ ಎಂದು ಭಾವಿಸಿದ್ದೆ': ಕುಮಾರಸ್ವಾಮಿಗೆ ಡಿ.ಕೆ ಶಿವಕುಮಾರ್ ಟಾಂಗ್

ಸುನ್ನಿ ದೇಶಗಳ ಮೇಲೆ ಇರಾನ್ ಭೀಕರ ದಾಳಿ ಮಧ್ಯೆ ಒಮಾನ್, ಕುವೈತ್, ಕತಾರ್ ಮುಖ್ಯಸ್ಥರಿಗೆ ಮೋದಿ ಕರೆ, ತೀವ್ರ ಕಳವಳ!

IPL 2026: RCB ಅಭಿಮಾನಿಗಳಿಗೆ ಗುಡ್ ನ್ಯೂಸ್! ಅನುಮಾನಕ್ಕೆ ತೆರೆ

SCROLL FOR NEXT