ಬಲೂಚಿಸ್ತಾನದಲ್ಲಿ ಭೀಕರ ಗುಂಡಿನ ಕಾಳಗ (ಸಂಗ್ರಹ ಚಿತ್ರ) 
ವಿದೇಶ

ಬಲೂಚಿಸ್ತಾನದಲ್ಲಿ ಭೀಕರ ಗುಂಡಿನ ಕಾಳಗ: TTE ಸಂಘಟನೆಯ 35 ಉಗ್ರರ ಹತ್ಯೆ, ಪಾಕ್ ಸೇನೆಯಲ್ಲೂ ಸಾವು-ನೋವು

ಮೇ 13ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 35 ಉಗ್ರರು ಸಾವನ್ನಪ್ಪಿದ್ದಾರೆ.

ಕ್ವೆಟ್ಟಾ: ಪಾಕಿಸ್ತಾನ ಭದ್ರತಾ ಪಡೆಗಳು ಮತ್ತು ತೆಹ್ರೀಕ್ ಇ ತಾಲಿಬಾನ್ ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಕನಿಷ್ಠ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಬಲೂಚಿಸ್ತಾನದಲ್ಲಿ ಮಂಗ್ಲಾ ಜರ್ಗೂನ್ ಘರ್ ಪ್ರದೇಶದಲ್ಲಿ ನಡೆಯುತ್ತಿರುವ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ 35 ಉಗ್ರರನ್ನು ಹತ್ಯೆ ಮಾಡಿದ್ದು, ಮೂವರು ಉನ್ನತ ಮಟ್ಟದ ಉಗ್ರ ಕಮಾಂಡರ್‌ಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಈ ಬಗ್ಗೆ ಭಾನುವಾರ ರಾತ್ರಿ ಕ್ವೆಟ್ಟಾದಲ್ಲಿ ಮಾಧ್ಯಮಗಳಿಗೆ ಮಾತನಾಡಿದ್ದು, 'ಮೇ 13ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 35 ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಅಂತೆಯೇ “ಈ ಕಾರ್ಯಾಚರಣೆ ನಿಷೇಧಿತ Tehreek-e-Taliban Pakistan ಹಾಗೂ ಅದರ ಪ್ರತಿನಿಧಿ ಗುಂಪುಗಳ ವಿರುದ್ಧ ನಡೆಸಲಾಗಿದೆ. ಬಂಧಿಸಲಾದ ಮೂವರು ಕಮಾಂಡರ್‌ಗಳು ಉನ್ನತ ಮಟ್ಟದ ಪ್ರಮುಖ ವ್ಯಕ್ತಿಗಳಾಗಿದ್ದು, ಈ ಕಾರ್ಯಾಚರಣೆ ಪ್ರಾಂತ್ಯದಲ್ಲಿ ಹಿಂದೆ ಬಂಧಿಸಲಾದ ಉಗ್ರರಿಂದ ಸಂಗ್ರಹಿಸಲಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಲಾಗಿದೆ ಎಂದು ರಿಂಡ್ ತಿಳಿಸಿದ್ದಾರೆ.

“ಭದ್ರತಾ ಪಡೆಗಳು ಮಂಗ್ಲಾ ಜರ್ಗೂನ್ ಘರ್ ಪ್ರದೇಶದಲ್ಲಿದ್ದ ಹಲವು ಉಗ್ರರ ನೆಲೆಗಳನ್ನು ಸಹ ಧ್ವಂಸಗೊಳಿಸಿವೆ, ಈ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ ಉಗ್ರರಿಗೆ ನೆರವು ನೀಡುವವರು, ಮಾರ್ಗದರ್ಶಕರು ಹಾಗೂ ಆರ್ಥಿಕ ಬೆಂಬಲಿಗರನ್ನು ಬಂಧಿಸುವ ಉದ್ದೇಶದಿಂದ ವಿಶ್ವಾಸಾರ್ಹ ಮತ್ತು ಕಾರ್ಯಗತಗೊಳಿಸಬಹುದಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪ್ರಾಂತ್ಯದಲ್ಲಿ ಇನ್ನೂ ಹಲವು ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ಇತ್ತೀಚಿನ ಉಗ್ರವಿರೋಧಿ ಕಾರ್ಯಾಚರಣೆಯ ಕುರಿತು ಪಾಕಿಸ್ತಾನ ಸೇನೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪಾಕ್ ಸೇನೆಯಲ್ಲೂ ಸಾವು-ನೋವು

ಕಳೆದ ಬುಧವಾರ ಬರ್ಖಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಒಬ್ಬ ಮೇಜರ್ ಸೇರಿ ಐದು ಸೈನಿಕರು ಸಾವನ್ನಪ್ಪಿದ್ದರು ಎಂದು ಅಂತರ-ಸೇವೆಗಳ ಸಾರ್ವಜನಿಕ ಸಂಪರ್ಕ(Inter-Services Public Relations (ISPR) ತಿಳಿಸಿತ್ತು. ಅದೇ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಕೂಡ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

ಇರಾನ್‌ನ ಪರಿಷ್ಕೃತ 14 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಸಲ್ಲಿಸಿದ ಪಾಕಿಸ್ತಾನ; ಒಪ್ಪಿಕೊಳ್ಳುತ್ತಾರಾ ಟ್ರಂಪ್?

'ಅಮ್ಮ ಕ್ಯಾಂಟೀನ್‌' ಆಧುನೀಕರಿಸಲು ತಮಿಳುನಾಡು ಸಿಎಂ ವಿಜಯ್ ಆದೇಶ; ಅಚ್ಚರಿ ಮೂಡಿಸಿದ ದಳಪತಿ ನಡೆ

SCROLL FOR NEXT