ಡೊನಾಲ್ಡ್ ಟ್ರಂಪ್ 
ವಿದೇಶ

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್

ತಾನು ಮುರ್ಖ, ಗುಗ್ಗು ಅಥವಾ ಪೆದ್ದ ಅಲ್ಲ ಅಂತ ಟೀಕಾಕಾರಿಗೆ ಸಾಬೀತುಪಡಿಸಲು ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ನನ್ನ ವೈದ್ಯರಿಗೆ ಕೇಳಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಟೀಕಾಕಾರರ ಬಗ್ಗೆ ಒಂದು ರೀತಿಯ ಅಸಮಾಧಾನವಿದೆ. ಅವರು ಹೆಚ್ಚು ದ್ವೇಷಿಸುವ ಅವಮಾನದ ಪದವೆಂದರೆ "ಗುಗ್ಗು ಅಥವಾ ಮುರ್ಖ" ಎಂದು ಸ್ವತಃ ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ತಮ್ಮನ್ನು "ಅದ್ಭುತ ಕ್ರೂರ ಸರ್ವಾಧಿಕಾರಿ" ಎಂದು ಕರೆಯಿರಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

79 ವರ್ಷದ ಟ್ರಂಪ್ ಅವರು ಶುಕ್ರವಾರ ನ್ಯೂಯಾರ್ಕ್‌ನಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಾ, "ಮುರ್ಖ" ಎಂಬ ಅವಮಾನವನ್ನು ತಾವು ಹೆಚ್ಚು ದ್ವೇಷಿಸುವುದಾಗಿ ಹೇಳಿದ್ದಾರೆ. ಅಲ್ಲದೆ ತಾನು ಮುರ್ಖ, ಗುಗ್ಗು ಅಥವಾ ಪೆದ್ದ ಅಲ್ಲ ಅಂತ ಟೀಕಾಕಾರಿಗೆ ಸಾಬೀತುಪಡಿಸಲು ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ನನ್ನ ವೈದ್ಯರಿಗೆ ಕೇಳಿದ್ದೆ ಎಂದಿದ್ದಾರೆ.

"ನೀವು ಭೇಟಿಯಾಗಲಿರುವ ಅತ್ಯಂತ ಬುದ್ಧಿವಂತ ವ್ಯಕ್ತಿ ನಾನು" ಎಂದು ಟ್ರಂಪ್ ಜನಸಮೂಹಕ್ಕೆ ತಿಳಿಸಿದ್ದು, ಅದರ ನಂತರ "ನೀವು ಬುದ್ಧಿವಂತ ವ್ಯಕ್ತಿಯನ್ನು ಅಧ್ಯಕ್ಷರಾಗಿ ಹೊಂದಲು ಬಯಸುವುದಿಲ್ಲವೇ?" ಎಂದು ಪ್ರಶ್ನಿಸಿದರು.

ಟ್ರಂಪ್ ತಮ್ಮ 'ಮಾನಸಿಕ ಫಿಟ್‌ನೆಸ್'ಗೆ ಸಂಬಂಧಿಸಿದ ವಿವಾದದ ನಂತರ ತಮ್ಮ ವೈದ್ಯರೊಂದಿಗೆ ನಡೆಸಿದ ಸಂಭಾಷಣೆಯನ್ನು ಬಹಿರಂಗಪಡಿಸಿದರು. "ಅವರು ನನ್ನನ್ನು ಕೆಟ್ಟದಾಗಿ ಟೀಕಿಸಿದರು. ಅವರು ನನ್ನನ್ನು ಮುರ್ಖ ವ್ಯಕ್ತಿ" ಎಂದರು ಎಂದು ಟ್ರಂಪ್ ದೂರಿದರು.

"ನಾನು ಹೇಳಿದೆ, 'ಡಾಕ್ಟರ್, ನನ್ನನ್ನು ಅದ್ಭುತ ಕ್ರೂರ ಸರ್ವಾಧಿಕಾರಿ ಎಂದು ಕರೆದರೂ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ನನ್ನನ್ನು ಮೂರ್ಖ ಎಂದು ಮಾತ್ರ ಕರೆಯಬೇಡಿ'" ಎಂದು ಹೇಳಿರುವುದಾಗಿ ರಿಪಬ್ಲಿಕನ್ ನಾಯಕ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆನೇಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕ್ರಿಕೆಟ್ ಕ್ರೀಡಾಂಗಣದಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ

ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ- ಮೋದಿ ಭೇಟಿ; ವ್ಯಾಪಾರ, ಭದ್ರತೆ, ಇಂಧನದ ಬಗ್ಗೆ ಚರ್ಚೆ

ಲೇಹ್‌ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್ ತೆಗೆದ ಸೆಲ್ಫಿ ವೈರಲ್!

ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ, ಹಾಕಿಕೊಂಡು ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ ಎಚ್ಚರಿಕೆ

ನಿನ್ನ 'ರೇಟ್ ಎಷ್ಟು' ಡೇಟಿಂಗ್‌ಗೆ ಬರ್ತೀಯಾ: ಸ್ಟ್ರೀಟ್ ಫೋಟೋಗ್ರಾಫರ್ ಜನ್ಮ ಜಾಲಾಡಿದ 'Biggboss', ನಟಿ ತನಿಷಾ ಕುಪ್ಪಂಡ

SCROLL FOR NEXT