ಬಾಂಗ್ಲಾದೇಶದಲ್ಲಿ ಭುಗಿಲೆದ್ದ ರಾಜಕೀಯ ಹಿಂಸಾಚಾರ IANS
ವಿದೇಶ

ಸಕ್ರಿಯ ರಾಜಕಾರಣಕ್ಕೆ ಶೇಖ್ ಹಸೀನಾ ಮರಳುವ ಸುಳಿವು ನೀಡಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ: ನೂರಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ

ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ ಕಚ್ಚಾ ಬಾಂಬ್ (ಕಾಕ್‌ಟೇಲ್ ಬಾಂಬ್) ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಆ ಕುರಿತ ವರದಿ ಇಲ್ಲಿದೆ:

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ 100ಕ್ಕೂ ಹೆಚ್ಚು ಕಚ್ಚಾ ಬಾಂಬ್ (ಕಾಕ್‌ಟೇಲ್ ಬಾಂಬ್) ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಿಷೇಧಿತ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಕರೆ ನೀಡಿದ್ದ ದೇಶಾದ್ಯಂತ ಬಂದ್ ಹಿನ್ನೆಲೆಯಲ್ಲಿ ಈ ಹಿಂಸಾಚಾರ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:

ನೂರಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ

ಕಳೆದ ಮೂರು ದಿನಗಳಿಂದ ಢಾಕಾ ವಿಶ್ವವಿದ್ಯಾಲಯದ ಆವರಣ, ನ್ಯಾಯಾಲಯದ ಆವರಣ ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಸುತ್ತಮುತ್ತ ಸರಣಿ ಕಚ್ಚಾ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಢಾಕಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಬಾಂಬ್ ದಾಳಿಗಳು ನಡೆದಿವೆ. ಇದರೊಂದಿಗೆ, ಪ್ರತಿಭಟನಾಕಾರರು ಸಾರ್ವಜನಿಕ ಸಾರಿಗೆ ಬಸ್‌ಗಳು, ಸರ್ಕಾರಿ ವಾಹನಗಳು ಹಾಗೂ ಮೋಟಾರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಫರೀದ್‌ಪುರದಲ್ಲಿ ನಿಲ್ಲಿಸಿದ್ದ ಬಸ್‌ಗೆ ಬೆಂಕಿ ಹಚ್ಚಿದ ಪರಿಣಾಮ ಹೊಗೆಯಿಂದ ಉಸಿರುಗಟ್ಟಿ 60 ವರ್ಷದ ಬಸ್ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ.

ಹಿಂಸಾಚಾರಕ್ಕೆ ಕಾರಣವೇನು?

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸಕ್ರಿಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿ ಸಂಘಟನೆಯು 8 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಗೆ ಕರೆ ನೀಡಿತ್ತು. ಏತನ್ಮಧ್ಯೆ, ಹಿಂಸಾಚಾರವನ್ನು ನಿಯಂತ್ರಿಸಲು ಭದ್ರತಾ ಪಡೆಗಳು ದೇಶಾದ್ಯಂತ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಸಜೀವ ಬಾಂಬ್‌ಗಳನ್ನು ಹೊಂದಿದ್ದ ಹಲವು ಶಂಕಿತರು ಸೇರಿದಂತೆ ಕನಿಷ್ಠ 15ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮಾಲಿನ್ಯ ಹೆಚ್ಚಾದರೇನಂತೆ, ತಾನಾಗೇ ಕಡಿಮೆಯಾಗುತ್ತೆ", ದೀಪಾವಳಿ ಪಟಾಕಿಗಷ್ಟೇ ವಿರೋಧವೇಕೆ?: ಟೀಕಾಕಾರರಿಗೆ ಯೋಗಿ ಆದಿತ್ಯನಾಥ್ ತಿರುಗೇಟು

ಸಿಇಒ ಹನಿಟ್ರ್ಯಾಪ್ ಕೇಸ್: Nvidia ಷೇರು ಮೌಲ್ಯ ಭಾರಿ ಕುಸಿತ, ನೂರಾರು ಬಿಲಿಯನ್ ಡಾಲರ್ ನಷ್ಟ, 2ನೇ ಸ್ಥಾನಕ್ಕೂ ಕುತ್ತು!

‘INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ’: ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ?; JDU ತೀವ್ರ ಆಕ್ರೋಶ..!

ಬಾಕ್ಸ್ ಆಫೀಸ್‌ನಲ್ಲಿ 'Ramayana' ಅಬ್ಬರ; 6 ದಿನಕ್ಕೆ ₹849 ಕೋಟಿ ಕಲೆಕ್ಷನ್, ಜವಾನ್ ದಾಖಲೆ ಧೂಳಿಪಟ! ಕಾಂತಾರ ರೆಕಾರ್ಡ್`ಗೂ ಕುತ್ತು!

Air India ವಿಮಾನಕ್ಕೆ Hijack ಬೆದರಿಕೆ: ಶೌಚಾಲಯದ ಕನ್ನಡಿಯಲ್ಲಿ ಸಂದೇಶ ಪತ್ತೆ; Kolkata ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ..!