ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ 
ವಿದೇಶ

ಇತಿಹಾಸದಲ್ಲೇ ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!

ಲೇಬರ್ ಏಷ್ಯನ್ಸ್ ಸೊಸೈಟಿ ಆಯೋಜಿಸಿದ್ದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ಲಂಡನ್: ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಾದ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ಹನುಮಾನ್ ಚಾಲೀಸಾವನ್ನು ಪಠಿಸಲಾಗಿದೆ. ಬ್ರಿಟಿಷ್ ಸಂಸತ್ತು ಈ ಅಪರೂಪದ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನವೆಂಬರ್ 9 ರಂದು ಲೇಬರ್ ಏಷ್ಯನ್ಸ್ ಸೊಸೈಟಿ ಆಯೋಜಿಸಿದ್ದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ವೆಸ್ಟ್‌ಮಿನಿಸ್ಟರ್ ಅರಮನೆಯ ಚೋಲ್ಮೊಂಡೆಲಿ ಕೊಠಡಿ ಮತ್ತು ಟೆರೇಸ್‌ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸದರು, ಸಮುದಾಯದ ಮುಖಂಡರು ಮತ್ತು ಬ್ರಿಟಿಷ್ ಏಷ್ಯನ್ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

‘ಹಿಯರ್ ಅಂಡ್ ನೌ 365’ (Here & Now 365) ಸಂಸ್ಥೆಯ ಸಂಸ್ಥಾಪಕ ಮನೀಶ್ ತಿವಾರಿ ಅವರು ಆಚರಣೆಯ ನೇತೃತ್ವ ವಹಿಸಿದ್ದರೆ, ಲೇಬರ್ ಏಷ್ಯನ್ಸ್ ಸೊಸೈಟಿಯ ಪೋಷಕರಾದ ಲಾರ್ಡ್ ಉದಯ್ ನಾಗರಾಜು (Lord Uday Nagaraju) ಅವರು ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು.

ತಬಲಾ ಮತ್ತು ಹಾರ್ಮೋನಿಯಂ ವಾದ್ಯಗಳೊಂದಿಗೆ ಹನುಮಾನ್ ಚಾಲೀಸಾವನ್ನು ಅತ್ಯಂತ ಭಕ್ತಿಯಿಂದ ಹಾಡಲಾಯಿತು. ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದವರು ಮಾತ್ರವಲ್ಲದೆ, ಹಲವಾರು ಬ್ರಿಟಿಷ್ ಸಂಸತ್ ಸದಸ್ಯರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕರ್ನಾಟಕದಲ್ಲಿ 15,600 ಕೋಟಿ ರೂ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ರಾಷ್ಟ್ರ ರಾಜಧಾನಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ: 494ರ ಗಡಿ ತಲುಪಿದ AQI; ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ..!

ʻಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಮೋದಿ ಹೋಗಲ್ಲʼ: AI ವಿಡಿಯೋ ಮೂಲಕ ಕಾಂಗ್ರೆಸ್‌ಗೆ BJP ಟಾಂಗ್‌

ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

BJP ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಗೆ ಬ್ರೇಕ್; 2022ರ ಹಿಂದಿನ ಸ್ಥಿತಿಗೆ ತರಲು 'ಕೈ' ಸರ್ಕಾರ ಮುಂದು..!