ಡೊನಾಲ್ಡ್ ಟ್ರಂಪ್  
ವಿದೇಶ

'ಇರಾನ್ ಬಳಿ ಪರಮಾಣು ಅಸ್ತ್ರವಿದ್ದಿದ್ದರೆ ಇಸ್ರೇಲ್ ಹಾಗೂ ಮಧ್ಯಪ್ರಾಚ್ಯವನ್ನು ನಾಶಪಡಿಸುತ್ತಿತ್ತು': ಡೊನಾಲ್ಡ್ ಟ್ರಂಪ್

ತಮ್ಮ ನಾಯಕತ್ವದಲ್ಲಿ ಇರಾನ್‌ಗೆ ಪರಮಾಣು ಅಸ್ತ್ರ ಹೊಂದಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದಕ್ಕೆ ತಮಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್: ಇರಾನ್‌ ಅಧಿಕಾರದಿಂದ ತಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ. ಡೆಮಾಕ್ರಾಟ್‌ಗಳು ಇರಾನ್‌ಗೆ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುವ ವಿಚಾರದಲ್ಲಿ ಸಹಾನುಭೂತಿ ತೋರಿಸಲಿದ್ದಾರೆ ಎಂದು ಇರಾನ್ ಭಾವಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತಮ್ಮ ನಾಯಕತ್ವದಲ್ಲಿ ಇರಾನ್‌ಗೆ ಪರಮಾಣು ಅಸ್ತ್ರ ಹೊಂದಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ವಿರುದ್ಧ ಯುದ್ಧ ಆರಂಭಿಸಿದ್ದಕ್ಕೆ ತಮಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಏಕೆಂದರೆ ಡೆಮಾಕ್ರಾಟ್‌ಗಳು ಮೂಲತಃ ಅವರಿಗೆ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುತ್ತಾರೆ ಎಂದು ಅವರು ಭಾವಿಸಿದ್ದಾರೆ. ಆದರೆ ಅವರಿಗೆ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಯಾವುದೇ ಪಶ್ಚಾತ್ತಾಪ ಇದೆಯೇ ಎಂದು ಕೇಳಿದಾಗ, ತಾವು ಮತ್ತೊಮ್ಮೆ ಅದೇ ಪರಿಸ್ಥಿತಿಯನ್ನು ಎದುರಿಸಿದರೂ ನಿಖರವಾಗಿ ಅದೇ ರೀತಿಯ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ.

ಇರಾನ್ ಬಳಿ ಪರಮಾಣು ಅಸ್ತ್ರವಿದ್ದಿದ್ದರೆ ಅದು ಇಸ್ರೇಲ್ ಹಾಗೂ ಮಧ್ಯಪ್ರಾಚ್ಯವನ್ನು ನಾಶಪಡಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.

ನಾನು ಪಶ್ಚಾತ್ತಾಪ ಎಂಬ ಪದವನ್ನು ನಂಬುವುದಿಲ್ಲ. ಆದರೂ ನೀವು ಕೆಲವೊಮ್ಮೆ ನಿಮ್ಮನ್ನೇ ಪ್ರಶ್ನಿಸಿಕೊಳ್ಳಬಹುದು. ಕೆಲವರು ನನ್ನನ್ನು ಈ ಬಗ್ಗೆ ಕೇಳಿದ್ದಾರೆ. ಮತ್ತೊಮ್ಮೆ ಇದೇ ಪರಿಸ್ಥಿತಿ ಎದುರಾದರೂ ನಾನು ಮಾಡಿದ್ದನ್ನೇ ನಿಖರವಾಗಿ ಮಾಡುತ್ತಿದ್ದೆ. ಅವರ ಪರಮಾಣು ಸಾಮರ್ಥ್ಯವನ್ನು ನಾಶಪಡಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಒಂದು ವೇಳೆ ನಾವು ಸಹಜ ಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಇರಾನ್ ಬಳಿ ಪರಮಾಣು ಅಸ್ತ್ರವಿದ್ದರೆ ಏನಾಗುತ್ತಿತ್ತು? ಅವರು ಅದನ್ನು ಬಳಸುತ್ತಿದ್ದರು. ಅವರು ಹುಚ್ಚರಂತೆ ವರ್ತಿಸುತ್ತಾರೆ. ನಾನು ಅವರೊಂದಿಗೆ ವ್ಯವಹರಿಸಿದ್ದೇನೆ. ಅವರು ಅದನ್ನು ಬಳಸುತ್ತಿದ್ದರು. ಅವರು ಇಸ್ರೇಲ್ ಅನ್ನು ನಾಶಪಡಿಸುತ್ತಿದ್ದರು. ಮಧ್ಯಪ್ರಾಚ್ಯವನ್ನು ನಾಶಪಡಿಸುತ್ತಿದ್ದರು. ನಮ್ಮ ಒಂದೆರಡು ನಗರಗಳ ಮೇಲೂ ದಾಳಿ ಆರಂಭಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಈ ನಡುವೆ, ಷೇರು ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು, ಇನ್ನಷ್ಟು ಏರಿಕೆಯಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ತೈಲ ಬೆಲೆಗಳು ಕೂಡ ಗರಿಷ್ಠ ಮಟ್ಟಕ್ಕೆ ಏರಿವೆ ಎಂದು ಅವರು ತಿಳಿಸಿದ್ದಾರೆ.

ಈಗ ಷೇರು ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಈ ಅವಧಿಯಲ್ಲಿ 81 ಬಾರಿ ಅದು ಗರಿಷ್ಠ ಮಟ್ಟ ತಲುಪಿದೆ. ಈ ಸಂಪೂರ್ಣ ಸಂಘರ್ಷದ ಅವಧಿಯಲ್ಲೂ ಇದು ಮುಂದುವರಿದಿದೆ. ಇದು ಹಿಂದೆಂದಿಗಿಂತಲೂ ಗರಿಷ್ಠ ಮಟ್ಟದಲ್ಲಿದೆ. ನಾನು ಅಧಿಕಾರಕ್ಕೆ ಬಂದಾಗ ಇದ್ದ ಮಟ್ಟಕ್ಕಿಂತಲೂ ಬಹಳ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡುವ ತಮ್ಮ ನಿರ್ಧಾರದಿಂದ ಇರಾನ್ ನಾಯಕತ್ವ ಅತ್ಯಂತ ಸಂತೋಷಪಡಲಿದೆ ಎಂದು ಟ್ರಂಪ್ ಹೇಳಿದ್ದರು.

ಅವರು ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಮಧ್ಯಂತರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಗೆಲ್ಲುತ್ತಿದೆ ಎಂದು ಟ್ರಂಪ್ ಹೇಳಿದ್ದು, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಭಾಗ ಸಾಗುವ ಈ ಕಾರ್ಯತಂತ್ರದ ಜಲಮಾರ್ಗ ಹಾಗೂ ತೈಲ ಬೆಲೆಗಳೊಂದಿಗೆ ಸಂಘರ್ಷವನ್ನು ಜೋಡಿಸಿದ್ದಾರೆ.

ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿ ಹಾಗೂ ವಿಸ್ತರಿಸುತ್ತಿರುವ ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video