ಧ್ಯಾನ ಚೆಂದ

ದೇವರನ್ನು ಏಕಾಗ್ರತೆಯಿಂದ ಮನಸ್ಸಿನಲ್ಲಿ ನೆನೆದು ಜಪಿಸುವುದು ಧ್ಯಾನ. ಯಜ್ಞ ಯಾಗಗಳನ್ನು ಮಾಡುವಾಗ...
ಧ್ಯಾನ ಚೆಂದ
Updated on: 

ದೇವರನ್ನು ಏಕಾಗ್ರತೆಯಿಂದ ಮನಸ್ಸಿನಲ್ಲಿ ನೆನೆದು ಜಪಿಸುವುದು ಧ್ಯಾನ. ಯಜ್ಞ ಯಾಗಗಳನ್ನು ಮಾಡುವಾಗ ನಾಲಗೆಯಲ್ಲಿ ಶಬ್ದ ಮಾಡುತ್ತಾ ಹೇಳುವ ಮಂತ್ರ ಫಲ ಕೊಡುತ್ತದೆ. ಆದರೆ ನಾಲಗೆಯಲ್ಲಿ ಶಬ್ದ ಮಾಡದೆ, ಮನಸ್ಸಿನಲ್ಲಿ ಹೇಳುತ್ತಾ ಹೋಗುವುದು ಉತ್ಕೃಷ್ಟ ಫಲ ಕೊಡುತ್ತದೆ...

ಇಂದು ಎಲ್ಲೆಡೆ ಸ್ಪರ್ಧೆ ಇದೆ. ವಿದ್ಯಾಭ್ಯಾಸದಲ್ಲಂತೂ ಅದು ಹೆಚ್ಚು. ಮಕ್ಕಳು ಈ ಸ್ಪರ್ಧೆ ಕಡೆಗೆ ಗಮನ ಹರಿಸುತ್ತಾರೆಯೇ ವಿನಾ ವ್ಯಕ್ತಿತ್ವ ಅವರಿಗೆ ಮುಖ್ಯವಾಗುತ್ತಲೇ ಇಲ್ಲ. ಶಾಲೆಯಲ್ಲೂ ಇದರ ಬಗ್ಗೆ ಗಮನ ಕೊಡುವುದಿಲ್ಲ.
ಮಕ್ಕಳಿಗೆ ನಾವು 'ನೀನು ದಡ್ಡ, ನಿನ್ನಿಂದ ಯಾವುದೇ ಕೆಲಸ ಮಾಡಲು ಸಾಧ್ಯ ಇಲ್ಲ' ಎಂದು ಹೇಳಿದರೆ ಅವನು ದಡ್ಡನೇ ಆಗುತ್ತಾನೆ. ಒಳ್ಳೆಯ ಮಾತಿನಲ್ಲಿ ಚೆನ್ನಾಗಿ ಕಲಿಯಲು ಹೇಳಿದರೆ ಅವರು ಅದನ್ನೇ ಮಾಡುತ್ತಾರೆ. ಧ್ಯಾನ ಮಾಡುವುದರಿಂದ ವಿದ್ಯೆಯಲ್ಲಿ ಏಕಾಗ್ರತೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದರೆ ಮಕ್ಕಳು ಧ್ಯಾನ ಮಾಡುತ್ತಾರೆ. ಇದರಿಂದಾಗಿ ಧ್ಯಾನದ ಪ್ರಯೋಜನ ಪಡೆಯಲು ಸಾಧ್ಯ.

ರಾಮಧ್ಯಾನ
ಹನುಮಂತ ರಾಮ ಭಕ್ತ. ಅವನು ಯಾವುದೇ ಕೆಲಸವನ್ನು ಮನಸ್ಸು ಕೊಟ್ಟು ಮಾಡುತ್ತಿದ್ದ. ರಾಮನ ಧ್ಯಾನದಲ್ಲಿ ಆತ ಸದಾ ನಿರತ. ಇದರಿಂದ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಕಂಡನು. ಇಂಥ ಧ್ಯಾನವನ್ನು ಮಕ್ಕಳಿಗೂ ಹೇಳಿಕೊಡಬೇಕು. ಇದರಿಂದ ಅವು ಅಡ್ಡದಾರಿ ಹಿಡಿಯುವುದ ತಪ್ಪುತ್ತದೆ.

ಏಕಾಗ್ರತೆ ಇರಲಿ...
ಧ್ಯಾನ ಮಾಡುವ ಕ್ರಮ, ವಿಧಾನವನ್ನು ತಿಳಿದು ಮುಂದುವರಿಯಬೇಕು. ದೇವರನ್ನು ಏಕಾಗ್ರತೆಯಿಂದ ಮನಸ್ಸಿನಲ್ಲಿ ನೆನೆದು ಜಪಿಸುವುದು ಧ್ಯಾನ. ಯಜ್ಞ ಯಾಗಗಳನ್ನು ಮಾಡುವಾಗ ನಾಲಗೆಯಲ್ಲಿ ಶಬ್ದ ಮಾಡುತ್ತಾ ಹೇಳುವ ಮಂತ್ರ ಫಲ ಕೊಡುತ್ತದೆ. ಆದರೆ ನಾಲಗೆಯಲ್ಲಿ ಶಬ್ದ ಮಾಡದೆ, ಮನಸ್ಸಿನಲ್ಲಿ ಹೇಳುತ್ತಾ ಹೋಗುವುದು ಉತ್ಕೃಷ್ಟ ಫಲ ಕೊಡುತ್ತದೆ.
ಧ್ಯಾನಿಸುವವರಿಗೆ ಕೆಟ್ಟ ಆಲೋಚನೆಗಳು ಬರುವುದಿಲ್ಲ. ಮನಸ್ಸಿಗೆ ನೋವು, ಸಮಸ್ಯೆಗಳು ಬಂದಾಗ ಆದಷ್ಟು ಧ್ಯಾನ ಮಾಡಬೇಕು. ಧ್ಯಾನ ಮಾನಸಿಕ ಶಾಂತಿಯನ್ನು, ಒಳ್ಳೆಯ ಆರೋಗ್ಯವನ್ನು ದಯಪಾಲಿಸುತ್ತದೆ. ಧ್ಯಾನಿಸುವವರು ಸಣ್ಣ ಚಾಪೆಯ ಮೇಲೆ ಕೂರಬೇಕು. ಪ್ರಶಾಂತ ಪ್ರದೇಶವಾಗಿರಬೇಕು. ದೇಹ ನೇರಭಂಗಿಯಲ್ಲಿರಬೇಕು. ನಂತರ ವಿಘ್ನೇಶ್ವರನನ್ನು ನೆನೆದು ಕಣ್ಣುಗಳನ್ನು ಮುಚ್ಚಿ, ಮನಸ್ಸನ್ನು ಕಣ್ಣುಗಳ ಮಧ್ಯ ತರಬೇಕು. ನಂತರ ಶಾಂತಿ ಮಂತ್ರವನ್ನು ಬಾಯಿ ತೆರೆಯದೆ ಮನಸ್ಸಿನಲ್ಲಿಯೇ ಹೇಳುತ್ತಿರಬೇಕು.
ವೇದದಲ್ಲಿ ಧ್ಯಾನದ ಬಗ್ಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಕಣ್ಣುಗಳನ್ನು ಮುಚ್ಚಿ ನಾಲಗೆಯನ್ನು ಅಲುಗಾಡಿಸದೆ ಮನಸ್ಸಿನಲ್ಲಿ ಜಪ ಮಾಡುವುದು ಎಲ್ಲಕ್ಕಿಂತ ಹೆಚ್ಚು ಫಲ ಕೊಡುತ್ತದೆ.
ಏಕಾಗ್ರತೆಯಿಂದ ಒಂದು ವಿಷಯವನ್ನು ಬಹಳ ಚಿಂತಿಸುವುದು ಧ್ಯಾನ. ಧ್ಯಾನಕ್ಕೆ ಕುಳಿತಾಗ ಹತ್ತು ಬಾರಿ ದೀರ್ಘ ಉಸಿರಾಡಬೇಕು. ನಂತರ ಎರಡೂ ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಕಣ್ಣಿನ ಮಧ್ಯಕ್ಕೆ ತರಬೇಕು. ನಂತರ ನಾಲಗೆಯನ್ನು ಅಲುಗಾಡಿಸದೆ ಶಾಂತಿಃ ಶಾಂತಿಃ ಎಂದು ಅರ್ಧ ಗಂಟೆ ಸಮಯ ಏಕಾಗ್ರತೆಯಿಂದಿರಲು ಪ್ರಯತ್ನಿಸಬೇಕು.
ಧ್ಯಾನಿಸುತ್ತಾ ಹೋದಹಾಗೂ ನಮ್ಮ ಮನಸ್ಸು ಅಂತರ್ಮುಖಿಯಾಗುತ್ತದೆ. ನಾವು ಮಾಡಿದ ಪಾಪ ಅಂದರೆ ಬೇರೆ ಜನ್ಮದಿಂದ ಬಂದಂಥ ಪಾಪ ಇರಬಹುದು. ಇದು ಧ್ಯಾನದ ಪರಿಣಾಮದಿಂದ ಹೊರ ಹೋಗುತ್ತದೆ. ನಾವು ಆಳಕ್ಕೆ ಹೋದಂತೆ ಕೆಟ್ಟದ್ದನ್ನು ಮಾಡಲೇಬಾರದು ಎಂದು ಮನಸ್ಸು ಹೇಳುತ್ತದೆ. ಇಂತಹ ಸಮಯದಲ್ಲಿ ಮನಸ್ಸಿನ ಹಿಡಿತ ನಮ್ಮನ್ನು ಮೀರುತ್ತದೆ.
ಧ್ಯಾನ ಮಾಡುವುದು ಹೀಗೆಯೇ ಎಂಬ ನಿಯಮ ಇಲ್ಲ. ಯಾವುದೇ ಸಮಯ ಅಂತ ಇಲ್ಲ. ಇದೊಂದು ಅಂತರ ಮನಸ್ಸಿನ ಕೆಲಸವಾಗಿರುವುದರಿಂದ ಯಾವ ಸಮಯದಲ್ಲಿಯೂ ಮಾಡಬಹುದು. ಧ್ಯಾನ ಮಾಡುವಾಗ ನಮಗೆ ನಮ್ಮ ದೇಹದ ಪರಿವೆಯೇ ಇರುವುದಿಲ್ಲ. ಇದರಿಂದ ಮನಸ್ಸಿನ ನೋವು ಆಯಾಸ ದೂರ ಹೋಗುತ್ತದೆ. ಇದು ಏಕಾಗ್ರತೆ ಹೆಚ್ಚಿಸುವ ಖರ್ಚಿಲ್ಲದ ಮದ್ದಾಗಿದೆ.

- ಮೂಲ್ಕಿ ಹರಿಶ್ಚಂದ್ರ ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com