ಸ್ವಿಫ್ಟ್ ಇನ್ ನ್ಯೂ ಲುಕ್

Updated on: 

ದಶಕಾರ್ಧದ ಹಿಂದೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಸ್ವಿಫ್ಟ್ ಈಗ ಸ್ಪೋರ್ಟಿ ಲುಕ್‌ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ನಿಯಮಿತ ಮಾದರಿಯ ಕಾರುಗಳು ಮಾರುಕಟ್ಟೆಗೆ ಬಂದಿದ್ದು, ಕಾರಿನ ಒಳ ಮತ್ತು ಹೊರ ವಿನ್ಯಾಸದಲ್ಲಿ ಕೆಲ ಬದಲಾವಣೆಗಳಾಗಿವೆ. ಆದರೆ, ಎಂಜಿನ್ ಹಾಗೂ ಕಾರ್ಯಕ್ಷಮತೆಗೆ ಸಂಬಂಧಿಸಿ ಯಾವುದೇ ಬದಲಾವಣೆಗಳಾಗಿಲ್ಲ.
ಕಾಂಪ್ಯಾಕ್ಟ್ ಸ್ವಿಫ್ಟ್ ಕಾರು ಮೊದಲೇ ಸ್ವಲ್ಪ ಸ್ಪೋರ್ಟಿ ಲುಕ್‌ನಲ್ಲಿ ಕಂಗೊಳಿಸುತ್ತಿತ್ತು. ಈಗ ಮತ್ತಷ್ಟು ಹೊಸ ರೂಪದೊಂದಿಗೆ ನಿಗದಿತ ಸಮಯ ಹಾಗೂ ನಿಯಮಿತ ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಲಿದೆ. ಹೊರ ವಿನ್ಯಾಸದಲ್ಲಿ ಫ್ರಂಟ್ ಮತ್ತು ರೇರ್ ಬಂಪರ್‌ನೊಂದಿಗೆ ರೂಫ್ ಸ್ಪೈಲರ್ ಸೇರ್ಪಡೆಯಾಗಿದೆ. ಬಿಳಿ, ನೀಲಿ ಹಾಗೂ ಕಪ್ಪು ಬಣ್ಣದ ಮಿಶ್ರಣದಲ್ಲಿ ಹೊರ ವಿನ್ಯಾಸ ರೂಪುಗೊಂಡಿದೆ. ಚಕ್ರಗಳಿಗೆ ಕಪ್ಪು ಬಣ್ಣದ ಕವರ್ ಹೊದಿಸಲಾಗಿದ್ದು, ಎರಡು ಕನ್ನಡಿಯನ್ನು ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೇ ನಾಲ್ಕು ಬಾಗಿಲಿನ ಮೇಲೆ ನೀಲಿ ಮತ್ತು ಕಪ್ಪು ಬಣ್ಣದ ಸ್ಟ್ರಿಪ್ಸ್ ಅನ್ನು ಲೇಪಿಸಲಾಗಿದ್ದು, ಕಾರಿನ ಚೆಂದವನ್ನು ಇನ್ನಷ್ಟು ಹೆಚ್ಚಿಸಿದೆ. ಒಳ ವಿನ್ಯಾಸಕ್ಕೆ ಸಂಬಂಧಿಸಿ ನೀಲಿ ಹಾಗೂ ಕಪ್ಪು ಬಣ್ಣದ ಲೆದರ್ ಸೀಟುಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಉತ್ತಮ ಮಾದರಿಯ ಮ್ಯೂಸಿಕ್ ಸಿಸ್ಟಮ್ ಸೇರ್ಪಡೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com