ಕೋಟಿ ಕುತ್ತು

ಕೋಟಿ ಕುತ್ತು
Updated on: 

ಕನ್ನಡದ ಕೋಟ್ಯಾಧಿಪತಿಯಲ್ಲಿ 'ಒಂದು ಪ್ರಶ್ನೆ ಬದುಕನ್ನೇ ಬದಲಿಸುತ್ತದೆ' ಅಂತಾರೆ. ಅದು ಬಿಡಿ, ರಿಯಾಲಿ ಶೋ. ಇಲ್ಲಿ ಕೇಳಿ ರಿಯಲ್ ಶೋ. 'ಒಂದು ಮೆಸೇಜು ನಿಮ್ಮ ಬದುಕನ್ನೇ ಬದಲಿಸುತ್ತದೆ!!!'
ಹಾಗಂದುಕೊಂಡು ಬಹುತೇಕ ಜನ ಗುಂಡಿಗೆ ಬೀಳ್ತಾರೆ. 'ನಿಮ್ಮ ಮೊಬೈಲಿನ ಈ ನಂಬರಿಗೆ 1,00,00,000 ರು. ಸ್ಪೆಷಲ್ ಬಹುಮಾನ ಬಂದಿದೆ' ಎಂಬ ಅನಾಮಿಕ ಸಂದೇಶಕ್ಕೆ ಕಣ್ಣರಳಿಸಿ, ಕೊನೆಗೆ ಕಣ್ಣೀರು ಸುರಿಸುತ್ತಾರೆ. ಇಂದು ಎಲ್ಲರ ಕೈಯಲ್ಲೂ ಮೊಬೈಲಿದೆ. ಬೇರೆ ಬೇರೆ ಕಂಪನಿಯ ಸಿಮ್‌ಕಾರ್ಡ್‌ಗಳಿವೆ. ಈ ನಡುವೆ ಕೆಲವು ಗುಂಪುಗಳು ನಿಮ್ಮ ಸಿಮ್‌ಕಾರ್ಡ್ ನಂಬರ್ ತಿಳಿದು, 'ಊಡುಗೊರೆ ಬಂದಿದೆ' ಎಂದು ಸುಳ್ಳು ಮಾಹಿತಿ ನೀಡಿ, ದಾರಿ ತಪ್ಪಿಸುತ್ತವೆ. ಇಂಥದ್ದೊಂದು ದೊಡ್ಡ ಜಾಲವೇ ಸೃಷ್ಟಿಯಾಗಿದೆ. ನಿಮ್ಮ ಸಿಮ್‌ಕಾರ್ಡ್ ಯಾವುದೇ ಇರಲಿ, ಅದರಲ್ಲೂ ವಿದೇಶಿ ಕಂಪನಿಯ ಸಿಮ್‌ಕಾರ್ಡ್‌ಗಳ ಬಗ್ಗೆ ಹುಷಾರಾಗಿರಿ.

ಗೊತ್ತಲ್ಲ, ಆ ಮೆಸೇಜು...
'ಕಂಗ್ರ್ಯಾಟ್ಸ್. ನೀವು ತುಂಬಾ ಲಕ್ಕಿ. ನಿಮ್ಮ ಈ ನಂಬರ್ ಕೋಟಿ ರು. ಗೆದ್ದಿದೆ'! ಕೋಟಿಯಂಥ ದೊಡ್ಡ ಮೊತ್ತ ಇಟ್ಟುಕೊಂಡು ನಮ್ಮಿಂದಲೇ ಮಾಹಿತಿ ತಿಳಿದುಕೊಳ್ಳುತ್ತಾರವರು. ಕೆಲವು ಮಂದಿ ಇದನ್ನು ನಿಜ ಎಂದು ನಂಬಿ, ಇ-ಮೇಲ್ ಮೂಲಕ ತಮ್ಮ ವಿಳಾಸ ಮತ್ತು ಫೋನ್ ನಂಬರ್‌ಗಳನ್ನು ನೀಡುತ್ತಾರೆ. ಇಷ್ಟು ಮಾಡಿಬಿಟ್ಟರೆ ಹೊಂಡಕ್ಕೆ ಬಿದ್ದಂತೆಯೇ ಲೆಕ್ಕ.ಉಡುಗೊರೆ ಬರುತ್ತೆ!
'ನಿಮಗೆ ಊಡುಗೊರೆ ಕೊಡಲು ಭಾರತಕ್ಕೆ ವಿಮಾನದಲ್ಲಿ ಬರುತ್ತಿದ್ದೇನೆ' ಎಂದು ಆ ಸುಳ್ಳು ಜಾಲ ಮಾಹಿತಿ ಕೊಡುತ್ತದೆ. ನಂತರ ಒಂದು ದಿನ ಬಿಟ್ಟು ಕರೆ ಮಾಡಿ, 'ನಾವು ನವದೆಹಲಿಯಲ್ಲಿ ಇದ್ದೇವೆ. ನೀವು ಊಡುಗೊರೆ ತೆಗೆದುಕೊಳ್ಳಬೇಕಾದರೆ ಕೇವಲ ರು. 19,500 ಪಾವತಿಸಬೇಕು' ಎಂದು ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಿಮ್ಮ ಮೊಬೈಲ್‌ಗೆ ಕಳುಹಿಸುತ್ತಾರೆ. ಈ ಕೆಲಸಗಳು ಮೊಬೈಲ್, ಇ-ಮೇಲ್ ಮೂಲಕವೇ ನಡೆಯುತ್ತದೆ.

ಮೋಸದ ಹಿಂದಿನ ಜಾಲ

ಈ ರೀತಿ ಮೋಸ ಒಬ್ಬಿಬ್ಬರು ಮಾಡುವುದಿಲ್ಲ. ಇದು ಸಂಘಟಿತ ದಾಳಿ. ವಿದೇಶಿ ಸಿಮ್‌ಗಳನ್ನು ಹೊಂದಿರುವ ಅನೇಕರಿಗೆ ಇಂಥ ಮೆಸೇಜು ಸುಲಭವಾಗಿ ರವಾನಿಸಲಾಗುತ್ತದೆ. ವಿದೇಶಿಯರ ಈ ಮುಖಗಳಿಗೆ ಭಾರತೀಯ ಮುಖವಾಡಗಳು ಮುಖ್ಯವಾಗಿ ನೆರವಾಗುತ್ತಿರುವುದು ದೊಡ್ಡ ದುರಂತ. ಹೀಗಾಗಿ, ಇಂಥ ಮೆಸೇಜುಗಳು ಬಂದರೆ ಸುಮ್ಮನೆ ಡಿಲೀಟ್ ಮಾಡಿಬಿಡಿ. ಇಲ್ಲದಿದ್ದರೆ ರಿಸ್ಕ್ ಮೈಮೇಲೆ ಬರುತ್ತದೆ.

ತಡೆಯೋದು ಹೇಗೆ?

  •     ಮೊದಲಿಗೆ ನೀವು ನಿಮ್ಮ ಸಿಮ್‌ಕಾರ್ಡ್‌ಗೆ ಬರುವ ಎಲ್ಲಾ ವಾಣಿಜ್ಯಿಕ ಸಂದೇಶಗಳು ಮತ್ತು ಫೋನ್ ಕರೆಗೂ ಡಿಎನ್‌ಡಿ (DO NOT DISTURB SERVICE) ಸೇವೆ ಮಾಡಿಸಿಕೊಳ್ಳಿ. ಇದನ್ನು ಸಿಮ್‌ಕಾರ್ಡ್‌ನ ಮಾಹಿತಿ ಕೇಂದ್ರ ಮಾಡಿಕೊಡುತ್ತದೆ. ಈ ಸೇವೆ ಎಲ್ಲಾ ಸಿಮ್‌ಕಾರ್ಡ್‌ನ ನೆಟ್‌ವರ್ಕ್‌ಗೂ ಕಡ್ಡಾಯವಾಗಿ ಅನ್ವಯವಾಗಿರುತ್ತದೆ. ಇದನ್ನು ನೀವು ಕೇಳಿ ಮಾಡಿಸಿಕೊಳ್ಳಬೇಕು.
  •  ನಿಮಗೆ ಸಂಬಂಧಿಸದ ಸಂದೇಶಗಳಿಗೆ ಉತ್ತರಿಸಬೇಡಿ.
  •  ಹಾಗೂ ಮಾಹಿತಿ ಖಚಿತಪಡಿಸಿಕೊಳ್ಳಬೇಕೆಂದರೆ ಇಂಥ ಮೆಸೇಜು ಬಂದ ತಕ್ಷಣ ಹತ್ತಿರದ ನೆಟ್‌ವರ್ಕ್‌ನ ಆಫೀಸಿಗೆ ಭೇಟಿ ನೀಡಿ.
  •  ಹೀಗೆಲ್ಲಾ ಮಾಡಿದ ನಂತರವೂ ನೀವು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ಇಂಥವನ್ನು ನಿರ್ಲಕ್ಷಿಸಿ.
ಪಾಷ ಬಚಾವು
- ಮಂಜು ದಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com