ರಿಟೈರ್ಮೆಂಟ್ ಪ್ಲಾನ್ ಪ್ರಾರಂಭ

ಬೆಂಗಳೂರು: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಐಸಿಐಸಿಐ ಪ್ರು ಈಜಿ.. ರಿಟೈರ್ಮೆಂಟ್ ಪ್ಲಾನ್ ಪ್ರಾರಂಭಿಸಿದೆ. ಈ ಯೂನಿಟ್ ಲಿಂಕ್ಡ್ ಪ್ಲಾನ್ ಗ್ರಾಹಕರು ತಮ್ಮ ರಿಟೈರ್ಮೆಂಟ್ ನಿಧಿಯನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಅನುಕೂಲಕರ ರೀತಿಯಲ್ಲಿ ಬೆಳೆಸಬಹುದಾಗಿದೆ. ಹೆಚ್ಚು ಪಾವತಿ ಮತ್ತು ದೀರ್ಘ ಸಮಯ ಮುಂದುವರಿಸಿದರೆ ಈ ನಿಧಿಯನ್ನು ಬೆಳೆಸುವ ವೆಚ್ಚ ಕಡಿಮೆಯಾಗುತ್ತದೆ. ಈ ಪ್ಲಾನ್ ಗ್ರಾಹಕರ ಹೂಡಿಕೆಯನ್ನು ಮಾರುಕಟ್ಟೆ ಏರುಪೇರುಗಳ ಅಪಾಯದ ವಿರುದ್ಧ ಕ್ಯಾಪಿಟಲ್ ಗ್ಯಾರಂಟಿ ಲಕ್ಷಣದ ಮೂಲಕ ರಕ್ಷಿಸುತ್ತದೆ. ಐಸಿಐಸಿಐ ಪ್ರು ಈಜಿ.. ರಿಟೈರ್ಮೆಂಟ್ ದೀರ್ಘಕಾಲ ಮುಂದುವರಿಸಿಕೊಂಡು ಹೋಗುವ ಗ್ರಾಹಕರಿಗೆ ಪೆನ್ಯನ್ ಬೂಸ್ಟರ್ಸ್ ಮೂಲಕ ಬಹುಮಾನಿಸುತ್ತದೆ. ಈ ಯೋಜನೆಯಲ್ಲಿ ಹತ್ತನೇ ಪಾಲಿಸಿ ವರ್ಷದ ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ಫಂಡ್ ಮೌಲ್ಯದ ಶೇ.5ರಷ್ಟನ್ನು ಸೇರಿಸುತ್ತದೆ. ಆ ಮೂಲಕ ಜೀವನಪರ್ಯಂತ ಗಳಿಸುವ ಆದಾಯದ ಮೂಲನಿಧಿಯನ್ನು ಬೆಳೆಸುತ್ತದೆ. ಹೆಚ್ಚಿನ ಮಾಹಿತಿಗೆ www.iciciprulife.com ನ್ನು ಲಾಗ್ ಆನ್ ಮಾಡಿ.
ಬಾಷ್ ಬಿಡದಿ ಘಟಕಕ್ಕೆ ಗುದ್ದಲಿ ಪೂಜೆ
ತಾಂತ್ರಿಕತೆ ಮತ್ತು ಸೇವೆಗಳ ಪ್ರಮುಖ ಸರಬರಾಜುದಾರರಾದ ಬಾಷ್ ಲಿಮಿಟೆಡ್ ಅಧಿಕೃತವಾಗಿ ಬಿಡದಿ ಘಟಕದ ಆರಂಭದ ಗುದ್ದಲಿ ಪೂಜೆಯನ್ನು ಆರಂಭಿಸಿದೆ. ಅತಿಥಿಗಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಷ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ಟಿಫನ್ ಬರ್ನ್ಸ್ ಇವರೊಂದಿಗೆ ಆಸ್ತಿಭಾರ ಫಲಕವನ್ನು ಸ್ಥಾಪಿಸಿದರು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಡಾ.ಬರ್ನ್ಸ್ 'ನಮ್ಮ ಈಗಿರುವ ಬೆಂಗಳೂರಿನ ಆಡುಗೋಡಿಯ ಉತ್ಪಾದನಾ ಘಟಕವನ್ನು ಬಿಡದಿಯ ಈ ಹೊಸ ಸ್ಥಳಕ್ಕೆ ಮಾಡುತ್ತಿರುವ ವರ್ಗಾವಣೆಯು ನಾವು ಭಾರತಕ್ಕೆ, ಮುಖ್ಯವಾಗಿ ಕರ್ನಾಟಕಕ್ಕೆ ಇದ್ದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ದಿಶೆಯಲ್ಲಿ ನಮಗೆ ನೆರವು ನೀಡಿದ ಕರ್ನಾಟಕ ಸರ್ಕಾರಕ್ಕೆ ಅತ್ಯಂತ ಆಭಾರಿಗಳು' ಎಂದರು. ಕಂಪನಿಯು ಬಿಡದಿಯಲ್ಲಿ 97ಎಕರೆಗಳ ವಿಸ್ತಾರದ ಜಾಗವನ್ನು ಪಡೆದಿದೆ ಮತ್ತು ಇಂದಿನ ಹೊಸ ಸೌಲಭ್ಯದಲ್ಲಿ ಆರಂಭಿಕ ವಿಸ್ತರಣೆಗೆ 250 ಕೋಟಿಗಳನ್ನು ವೆಚ್ಚಮಾಡಲಿದೆ.
'ಟೀನ್ ಟಿಲ್ ಐ ಡೈ' ಕಾರ್ಯಕ್ರಮ
ಸ್ಪ್ರೈಟ್ ಈ ಮೊದಲು ತನ್ನಯ 'ಚಲೋ ಅಪ್ನಿ ಚಾಲ್' ಸಿಗ್ನೇಚರ್ ಮೂಲಕ ಯುವ ಜನತೆಯಲ್ಲಿನ ಚಾತುರ್ಯಕ್ಕೆ ಸಲಾಂ ಹೇಳಿತ್ತು. ಇದೀಗ ದೇಶದ ಮೊಟ್ಟ ಮೊದಲ ಆನ್ಲೈನ್ ಸೋಷಿಯಲ್ ನೆಟ್ವರ್ಕಿಂಗ್ ಪೋರ್ಟಲ್ನಲ್ಲಿ ನಡೆಯುತ್ತಿರುವ 'ಟೀನ್ ಟಿಲ್ ಐ ಡೈ' ಕಾರ್ಯಕ್ರಮದ ಮೂಲಕ ಯುವ ಜನತೆಯಲ್ಲಿನ ಪ್ರತಿಭೆಯನ್ನು ಗುರ್ತಿಸುವ ಪ್ರಯತ್ನ ಮಾಡುತ್ತಿದೆ. ನೂತನ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ, ಕಲೆ ಹಾಗೂ ಹಾಸ್ಯ ಸೇರಿದಂತೆ ನಾಲ್ಗು ವಿಭಾಗಗಳಿದ್ದು ಯುವಕರು ಈ ನಾಲ್ಕು ವಿಧಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಪಡಿಸಬಹುದು. ರಾಷ್ಟ್ರವ್ಯಾಪಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಭಿನ್ನ, ಮನರಂಜನಕಾರಿ ಪ್ರದರ್ಶನ ನೀಡಿದ ವೀಡಿಯೋ ತುಣುಕುಗಳನ್ನು ಆಯ್ಕೆ ಮಾಡಿ ಫೇಸ್ಬುಕ್, ಯುಟ್ಯೂಬ್ ಹಾಗೂ ಚಾನಲ್ ವಿ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮೂಲಕ ಪ್ರತಿಯೊಬ್ಬರಿಗೂ ವೋಟಿಂಗ್ ಸೌಲಭ್ಯ ಕಲ್ಪಿಸುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನಿಮ್ಮ ಪ್ರತಿಭೆಯ ಸಣ್ಣ ವೀಡಿಯೋ ತುಣುಕನ್ನು www.teentillidie.com ವೆಬ್ಸೈಟ್ಗೆ ಅಪ್ಲೋಡ್ ಮಾಡಿ.
ಹೈಪರ್ ಚೆಫ್: ಕುಮುದ್ ರೈ, ಸಜ್ಜಲ್ ರಖೇಚ ಅಂತಿಮ ಸುತ್ತಿಗೆ
ಬೆಂಗಳೂರಿನಲ್ಲಿ ನಡೆದ ಹೈಪರ್ಸಿಟಿ ಹೈಪರ್ ಚೆಫ್ ಚಾಲೆಂಜ್ ಸ್ಪರ್ಧೆಯಲ್ಲಿ ಬೆಂಗಳೂರಿನ ಅತ್ಯುತ್ತಮ ಬಾಣಸಿಗರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಪ್ರಖ್ಯಾತ ಬಾಣಸಿಗ ಶೈಲೇಂದ್ರ ಕೆಕಡೆ ನಿಭಾಯಿಸಿದ್ದಾರೆ. ಹೈಪರ್ಸಿಟಿ ಚೆಫ್ ಚಾಲೆಂಜ್ ಜನಸಾಮಾನ್ಯರಿಗೆ ಈ ಹಬ್ಬದ ದಿನಗಳಲ್ಲಿ ತಮ್ಮಲ್ಲಿನ ಅತ್ಯುತ್ತಮ ಅಡುಗೆ ಕೌಶಲ್ಯವನ್ನು ಹೊರಹಾಕಲು ಹಾಗೂ ಸ್ಪರ್ಧೆಯಲ್ಲಿ ಜಯಿಸುವ ಸ್ಪರ್ಧಿಗಳಿಗೆ ಜನಪ್ರಿಯ ಬಾಣಸಿಗ ಸಂಜೀವ್ ಕಪೂರ್ ಫುಡ್ ಫಡ್ ಚಾನಲ್ನಲ್ಲಿ ನಡೆಸಿಕೊಡುವ ಟೆಲಿವಿಷನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಹಾಗೂ 5ಲಕ್ಷ ಮೊತ್ತ ಮೌಲ್ಯದವರೆಗಿನ ಬಹುಮಾನಗಳನ್ನು ಗೆಲ್ಲುವ ಅವಕಾಶ ಒದಗಿಸಲಿದೆ. ಸ್ಪರ್ಧೆಯು ದೇಶದ ಪ್ರಮುಖ ನಗರಗಳಾದ ಮುಂಬೈ, ನವೀ ಮುಂಬೈ, ಪುಣೆ, ಅಹಮದಾಬಾದ್, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ನಡೆಯಲಿದೆ. ಬೆಂಗಳೂರಿನ ಕುಮುದ್ ರೈ ಮತ್ತು ಸಜ್ಜಲ್ ರಖೇಚ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.
'ನೇಟಿಯೊ' ಮಾರಾಟ ಮಳಿಗೆ ಆರಂಭ
ಆಸ್ಟ್ರೇಲಿಯಾದ ನಿಸರ್ಗ ಸಹಜ ಸೌಂದರ್ಯ ಉತ್ಪನ್ನಗಳಾದ 'ನೇಟಿಯೊ' ಬ್ರಾಂಡನ್ನು, ಭಾರತದಲ್ಲಿ ಈ ಉತ್ಪನ್ನಗಳ ವಿತರಣಾ ಸಂಸ್ಥೆ ಬೆಲ್ಲೆ ವೊಅಸ್ ಪ್ರೈವೇಟ್ ಲಿಮಿಟೆಡ್ ಇತ್ತೀಚಿಗೆ ಪರಿಚಯಿಸಿತು. ನೇಟಿಯೋ ಪದದ ಪುರಾತನ ಅರ್ಥ 'ನಿಸರ್ಗ ದೇವತೆ' ಎಂದು. ಚರ್ಮದ ರಕ್ಷಣೆ, ಸೌಂದರ್ಯ ಸಾಧನಗಳು, ಅರೊಮಾಥೆರಪಿ, ಪುರುಷರ ಪ್ರಸಾದನಗಳು ಸೇರಿದಂತೆ ಸುಮಾರು 260 ಉತ್ಪನ್ನಗಳನ್ನು ನೇಟಿಯೊ ತಯಾರಿಸುತ್ತದೆ. ಗಿಡಮೂಲಿಕೆ ಸಸ್ಯಗಳಿಂದ ತಯಾರಿಸಲಾದ ಸರಳ ಮತ್ತು ಹಿತವಾದ ಸೌಂದರ್ಯ ಸಾಧನಗಳನ್ನು, ಇಂದಿನ ಬಹುರೂಪಿ ಜೀವನಶೈಲಿಗೆ ಅನುಗುಣವಾಗಿ ರೂಪಿಸುವ ಏಕೈಕ ಉದ್ದೇಶದೊಂದಿಗೆ ನೇಟಿಯೊ ಬ್ರಾಂಡ್ನ ಉತ್ಪನ್ನಗಳ ಸರಣಿಯನ್ನು ಪರಿಚಯಿಸಲಾಗುತ್ತಿದೆ. ನೇಟಿಯೊ ಇದೇ ಮೊದಲ ಬಾರಿಗೆ ವೈಟ್ಫೀಲ್ಡ್ನಲ್ಲಿರುವ ಫೊನಿಕ್ಸ್ ಮಾಲ್ನಲ್ಲಿ ತನ್ನ ನೂತನ ಮಾರಾಟ ಮಳಿಗೆಯನ್ನು ಅನಾವರಣಗೊಳಿಸಿದೆ.
ದಾಲ್ಮಿಯಾ ಭಾರತ್ ಗ್ರೂಪ್ ಪಾಲುಗಾರಿಕೆ
ಬೆಳಗಾವಿಯಲ್ಲಿ ಪ್ರಪ್ರಥಮವಾಗಿ ಏರ್ಪಡಿಸಲಾದ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ತಪಾಸಣೆ ಶಿಬಿರದ ಪ್ರಾಯೋಜನೆಗಾಗಿ ದಾಲ್ಮಿಯಾ ಭಾರತ್ ಗ್ರೂಪ್ ಪ್ರಥಮ ಪಾಲುಗಾರಿಕೆ ಮಾಡಿಕೊಂಡಿದೆ. ಕರ್ನಾಟಕ ಲಿಂಗಾಯತ್ ಎಜುಕೇಷನ್ ಸೊಸೈಟಿ ಚಾರಿಟೆಬಲ್ ಟ್ರಸ್ಟ್ ಹಾಸ್ಪಿಟಲ್ ಮತ್ತು ಜವಾಹರ್ಲಾಲ್ ನೆಹರು ಮೆಡಿಕಲ್ ಕಾಲೇಜುಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿರುವ ಮುನವಳ್ಳಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಾಯೋಜಿಸಲು ದಾಲ್ಮಿಯಾ ಭಾರತ್ ಗ್ರೂಪ್ ಫೌಂಡೇಶನ್ ಮೇಲಿನ ಸಂಸ್ಥ್ಥೆಗಳೊಂದಿಗೆ ಪಾಲುಗಾರಿಕೆ ಮಾಡಿಕೊಂಡಿತು. ಈ ಶಿಬಿರಕ್ಕೆ ಆಗಮಿಸುವುದಕ್ಕಾಗಿ ಯದ್ವಾಡ್, ಗಿರಿಸಾಗರ್, ಕುನ್ನಾಲ್, ಕೂಪದತ್ತಿ, ಕಾಮಂಕಟ್ಟಿ, ಗುಲ್ಜನ್ಕೊಪ್ಪ, ಮನೋಮಿ, ತಿಮ್ಮಾಪುರ ಮತ್ತು ಕುರುಬಟ್ಟಿ ಎಂಬಂತೆ 9ಗ್ರಾಮಗಳಿಂದ 330ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಉಇಎಋ ಸಂಚಾರ ವ್ಯವಸ್ಥೆಯನ್ನು ಒದಗಿಸಿತ್ತು.
ಸೂಪರ್ಮ್ಯಾನ್ ಸಂಗ್ರಹ ಬಿಡುಗಡೆ
ಸೂಪರ್ಹೀರೋ ಸರಕುಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಭಾರತದ ಪ್ರಥಮ ಆನ್ಲೈನ್ ವೆಬ್ಸೈಟ್ ಠಟಛಟಿಜಡಿಡ್ಡಠಝ್ಠಜ್ಠ್ಟಜಡ.್ಛ್ಟಟ ಭಾರತದಾದ್ಯಂತ ಇರುವ ಅಭಿಮಾನಿಗಳಿಗಾಗಿ ತನ್ನ ಸರ್ವೋತ್ಕೃಷ್ಟ ಸೂಪರ್ಮ್ಯಾನ್ ಸಂಗ್ರಹವನ್ನು ಬಿಡುಗಡೆಗೊಳಿಸುತ್ತಿದೆ. ನೀಲಿ ಬಣ್ಣದ ಆಕರ್ಷಣೀಯ ವಿನ್ಯಾಸ ಹಾಗೂ ಅದರಲ್ಲಿ ಕೆಂಪು ಬಣ್ಣದ ಪಟ್ಟಿ ಹೊಂದಿರುವ ಹಾಗೂ ವಸ್ತ್ರದ ಮುಂಭಾಗ ಹಾಗೂ ಹಿಂಭಾಗದಲ್ಲಿ ಸೂಪರ್ಮ್ಯಾನ್ ಲೋಗೋವನ್ನು ಹೊಂದಿರುವ ಸೂಪರ್ಮ್ಯಾನ್ ಬಾತ್ರೋಬ್ ಕೂಡ ಈ ಸಂಗ್ರಹದಲ್ಲಿದೆ. ಭಾರತದಲ್ಲಿರುವ ಸೂಪರ್ಮ್ಯಾನ್ ಅಭಿಮಾನಿಗಳಿಗೆ ಠಟಛಟಿಜಡಿಡ್ಡಠಝ್ಠಜ್ಠ್ಟಜಡ.್ಛ್ಟಟ ಸೂಪರ್ಮ್ಯಾನ್ ಸಂಗ್ರಹದ ರೂಪದಲ್ಲಿ ಟಿ-ಶರ್ಟ್ಗಳು, ಫ್ಲಿಪ್ ಫ್ಲಾಪ್ಗಳು, ಪೈಜಾಮ ಹಾಗೂ ಐಸ್-ಟ್ರೇಗಳಂತಹ ಸಂಗ್ರಹಯೋಗ್ಯ ವಸ್ತುಗಳು ಮತ್ತು ಸೂಪರ್ಮ್ಯಾನ್ ಪುಟಾಣಿ ಸಾಫ್ಟ್ ಆಟಿಕೆಗಳನ್ನೂ ಒದಗಿಸುತ್ತಿದೆ. ಈ ಸಂಗ್ರಹದಲ್ಲಿರುವ ಎಲ್ಲ ಸರಕುಗಳಲ್ಲೂ ಸೂಪರ್ಮ್ಯಾನ್ ಲೋಗೋವನ್ನು ಅಳವಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


