

ನಿಮ್ಮಲ್ಲಿ ಜೀವ ವಿಮೆ ಇಲ್ಲವೆ? ಹಾಗಿದ್ದರೆ ಪಡೆಯಲು ಮುಂದಾಗಿದ್ದರೆ ಶೇ.3.09ರಷ್ಟು ಸೇವಾ ತೆರಿಗೆ ನೀವು ನೀಡಲೇಬೇಕು. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್ ಡಿಎ)ದ ಹೊಸ ನಿಯಮದ ಪ್ರಕಾರ ಇದು ಜಾರಿಯಾಗಲಿದೆ. ಇಷ್ಟು ಮಾತ್ರವಲ್ಲ, ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಯ 45 ವಿಮಾ ಯೋಜನೆಗಳು ರದ್ದಾಗಲಿವೆ ಮತ್ತು ಹೊಸ ರೂಪದಲ್ಲಿ ಜಾರಿಯಾಗಲಿವೆ. ಅಂದಹಾಗೆ, ಸೇವಾ ತೆರಿಗೆಯನ್ನು ಎಲ್ಐಸಿ ಮತ್ತು ಖಾಸಗಿ ಕಂಪನಿಗಳ ವಿಮೆ ಯೋಜನೆಗಳಿಗೆ ಕೊಡಲೇಬೇಕು. ವಿಮೆ ಖರೀದಿ ಮತ್ತು ಮೆಚ್ಯುರಿಟಿ ವೇಳೆ ತೆರಿಗೆ ಪಾವತಿ ಮಾಡಲೇಬೇಕು.
ಎರಡು ವರ್ಷ ಹಳೆಯದ್ದು...
ವಿಮಾ ಕ್ಷೇತ್ರಕ್ಕೆ ಸೇವಾ ತೆರಿಗೆ ವಿಧಿಸಬೇಕು ಎಂಬ ವಿಚಾರ ಎರಡು ವರ್ಷ ಹಳೆಯದ್ದು. ವಿಮಾ ಏಜೆಂಟರ ಮತ್ತು ಇತರರ ವಿರೋಧದ ಹಿನ್ನೆಲೆಯಲ್ಲಿ ವಿಚಾರ ಅಂತಿಮವಾಗಿರಲಿಲ್ಲ. ಕೇಂದ್ರ ಸಂಪುಟದಲ್ಲಿ ಮತ್ತು ಸಂಸತ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ವಿಮಾ ಉತ್ಪನ್ನಗಳಿಗೆ ಶೇ.3.09ರಷ್ಟು ಸೇವಾ ತೆರಿಗೆ ನೀಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಈ ವರ್ಷದ ಫೆಬ್ರವರಿಯಲ್ಲಿ ಗೆಜೆಟ್ ಪ್ರಕಟಣೆ ಹೊರಡಿಸಿತ್ತು.
ಯಾವುಕ್ಕೆ ಅನ್ವಯ?
ಹಳೆಯ ಪಾಲಿಸಿಗಳಿಗೆ ಅಂದರೆ, ಈಗಾಗಲೇ ನಾವು- ನೀವೆಲ್ಲರೂ ಹೊಂದಿರುವ ವಿಮೆಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಹೊಸತಾಗಿ ಯಾರು ವಿಮೆ ಹೊಂದಲು ಬಯಸುತ್ತಾರೋ ಅವರಿಗೆ ಅದು ಅನ್ವಯ ಆಗುತ್ತದೆ.
ಲೆಕ್ಕಾಚಾರ ಹೇಗೆ?
ಪಾಲಿಸಿ ಖರೀದಿಸಿದಾಗ ಮತ್ತು ಮೆಚ್ಯುರಿಟಿ ಹೊಂದಿದಾಗ ಶೇ.3.09ರಷ್ಟು ಸೇವಾ ತೆರಿಗೆ ನೀಡಬೇಕಾಗುತ್ತದೆ.
ಉದಾಹರಣೆಗೆ ಒಂದು ಲಕ್ಷ ಮೌಲ್ಯದ ವಿಮೆ ಮಾಡುವ ವೇಳೆ ಶೇ.3.09ರಷ್ಟು ಅಂದರೆ 3,090 ರು. ಅನ್ನು ತೆರಿಗೆಯಾಗಿ ಕೊಡಬೇಕು. ಹಾಗೆಯೇ ಅದೇ ವಿಮೆ ಮೆಚ್ಯುರಿಟಿಗೆ ಬಂದಾಗ ಅಷ್ಟೇ ಮೊತ್ತವನ್ನು ಸೇವಾ ತೆರಿಗೆಯಾಗಿ ನೀಡಬೇಕು.
ಗ್ರಾಹಕರಿಗೆ ಹೊರೆಯಾದೀತೇ?
ವಿಮೆ ಖರೀದಿ ಮತ್ತು ಅದನ್ನು ಮತ್ತೆ ಹಿಂಪಡೆಯುವ ವೇಳೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾಪ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುವಂತೆ ಮಾಡಿವೆ. ಅವುಗಳು ಹೀಗಿವೆ.