ಪ್ರುಡೆನ್ಷಿಯಲ್ ವ್ಯಾಲ್ಯುಫಂಡ್ನ ಮೂರನೇ ಸರಣಿ ಆರಂಭ

ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ಪ್ರುಡೆನ್ಷಿಯಲ್ ವ್ಯಾಲ್ಯುಫಂಡ್ನ 3ನೇ ಸರಣಿಯನ್ನು ಆರಂಭಿಸಿದೆ. ಕನಿಷ್ಠ ಮೂರು ವರ್ಷ ಮರು ಮಾರಾಟ ಅಥವಾ ಹಣ ವಾಪಸ್ ಪಡೆಯಲು ಅವಕಾಶವಿರದ ಷರತ್ತಿಗೊಳಗಾದ ಈಕ್ವಿಟಿ ಫಂಡ್ ಇದಾಗಿದೆ. ಉತ್ತಮ ಮೌಲ್ಯವಿರುವ ಷೇರುಗಳಲ್ಲಿ ಹೂಡಿಕೆ ಮಾಡಿ ಹಣದ ಮೌಲ್ಯ ಹೆಚ್ಚಿಸುವುದು ಹಾಗೂ ಉತ್ತಮ ಕಂಪನಿಗಳ ಷೇರುಗಳ ಬೆಲೆ ಕಡಿಮೆಯಾದಾಗ ದೀರ್ಘಾವಧಿಯ ಹೂಡಿಕೆಗೆ ಪ್ರೋತ್ಸಾಹ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಡಾ.ಬಾತ್ರಾಸ್ ಉತ್ಪನ್ನ
ಡಾ.ಬಾತ್ರಾಸ್ ಉತ್ಪನ್ನಗಳು ದಕ್ಷಿಣ ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಬೆಂಗಳೂರಿನ 200ಕ್ಕೂ ಅಧಿಕ ಮಳಿಗೆಗಳಲ್ಲಿ ಉತ್ಪನ್ನ ಲಭ್ಯವಿದೆ. ಹೆಲ್ತ್ ಆ್ಯಂಡ್ ಗ್ಲೋ, ಟ್ರಸ್ಟ್ ಫಾರ್ಮಸಿ ಹಾಗೂ ಔಚನ್ ಮಳಿಗೆಗಳಲ್ಲಿ ಡಾ. ಬಾತ್ರಾಸ್ ಉತ್ಪನ್ನ ದೊರೆಯುತ್ತದೆ. 2014ರ ಅಂತ್ಯದೊಳಗೆ ದಕ್ಷಿಣ ಭಾರತದಲ್ಲಿ 600ಕ್ಕೂ ಅಧಿಕ ಮಳಿಗೆಗಳಲ್ಲಿ ಸಿಗುವಂತೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಮಲ್ಲೇಶ್ವರಂನಲ್ಲಿ ಕಲಾಂಜಲಿ ಸಿಲ್ಕ್ನ ಎರಡನೇ ಮಳಿಗೆ
ರೇಷ್ಮೆ ಸೀರೆಗಳಿಗೆ ಖ್ಯಾತವಾಗಿರುವ ಕಲಾಂಜಲಿ ಸಿಲ್ಕ್ನ ಎರಡನೇ ಮಳಿಗೆ ಮಲ್ಲೇಶ್ವರಂನಲ್ಲಿ ಆರಂಭವಾಗಿದೆ. ಮಲ್ಲೇಶ್ವರಂ 17ನೇ ಕ್ರಾಸ್ನ ಶ್ರೀಸಾಯಿ ಆರ್ಕೇಡ್ನಲ್ಲಿ ಇರುವ ಮಳಿಗೆಯನ್ನು ಖ್ಯಾತ ನಟಿ ಸಂಜನಾ ಇತ್ತೀಚೆಗೆ ಉದ್ಘಾಟಿಸಿದರು. ಮದುವೆ ಸೀರೆ, ಕಾಂಜೀವರಂ ಸೀರೆ ಹಾಗೂ ಮಕ್ಕಳು ಉಡುಪುಗಳು ಇಲ್ಲಿ ಲಭ್ಯವಿವೆ.
ಬಿಇ ವಿದ್ಯಾರ್ಥಿಗಳಿಂದ ಸ್ಪರ್ಧೆಗೆ ಅರ್ಜಿ
ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯು ಪ್ರತಿಭಾನ್ವಿತ ಎಂಜಿನಿಯರ್ ವಿದ್ಯಾರ್ಥಿಗಳಿಗೆ 'ಕ್ವೆಸ್ಟ್ ಇಂಜೀನಿಯಮ್- 2014'ನ್ನು ಏರ್ಪಡಿಸಿದೆ. ಕ್ವೆಸ್ಟ್ ಗ್ಲೋಬಲ್ ಸಂಸ್ಥೆ ಆಯೋಜಿಸುತ್ತಿರುವ ನಾಲ್ಕನೇ ಆವೃತ್ತಿಯ ಸ್ಪರ್ಧೆ ಇದಾಗಿದೆ. ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದು. ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯ ವೆಬ್ಪುಟದಲ್ಲಿ ಅರ್ಜಿ ಲಭ್ಯವಿದೆ.
ಭಾರ್ತಿ ಆಕ್ಸಾಗೆ ಎಬಿಪಿ ಬಿಎಫ್ಎಸ್ಐ ಪ್ರಶಸ್ತಿ
ಪ್ರತಿಷ್ಠಿತ ವಿಮಾ ಕಂಪನಿ ಭಾರ್ತಿ ಆಕ್ಸಾಗೆ ವಿಶ್ವ ಮಾನವ ಸಂಪನ್ಮೂಲ ಕಾಂಗ್ರೆಸ್ನಿಂದ 2014ನೇ ಸಾಲಿನ ಎಬಿಪಿ ಬಿಎಫ್ಎಸ್ಐ ಪ್ರಶಸ್ತಿ ಲಭಿಸಿದೆ. ಬ್ಯಾಂಕಿಂಗ್, ಹಣಕಾಸು ಹಾಗೂ ವಿಮಾ ವಲಯದಲ್ಲಿ ಗುಣಮಟ್ಟದ ಸೇವೆ ಸಲ್ಲಿಸುವ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಗ್ರಾಹಕರ ಸೇವೆ, ನಿರ್ದಿಷ್ಟ ಸೇವಾ ಮನೋಭಾವ, ಭವಿಷ್ಯದ ದೃಷ್ಟಿಕೋನ, ಸಂರಕ್ಷಣೆ ಸಾಮರ್ಥ್ಯ ಮತ್ತು ನೈತಿಕ ಅಂಶಗಳನ್ನು ಪ್ರಶಸ್ತಿಯ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.
ಬೆಕ್ಟನ್ ಡಿಕಿನ್ಸನ್ನಿಂದ ಎನ್ಎಬಿಎಚ್ ಸೇಫ್-1
ಬೆಕ್ಟನ್ ಡಿಕಿನ್ಸನ್ ವೈದ್ಯಕೀಯ ಸಂಸ್ಥೆಯು ಸೋಂಕು ನಿಯಂತ್ರಣಕ್ಕಾಗಿ ಎನ್ಎಬಿಎಚ್ ಸೇಫ್-1 ಅಭಿಯಾನ ಆರಂಭಿಸಿದೆ. ಪ್ರಸ್ತುತ ನಗರದಲ್ಲಿ ಕೇವಲ 17 ಆಸ್ಪತ್ರೆಗಳು ಎನ್ಎಬಿಎಚ್ ಸೋಂಕು ನಿಯಂತ್ರಣ ಮಾನ್ಯತೆ ಪಡೆದಿವೆ. ಇನ್ನು 13 ಆಸ್ಪತ್ರೆಗಳು ಮಾನ್ಯತೆ ಪಡೆಯುವ ನಾನಾ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ ಉಳಿದ ಆಸ್ಪತ್ರೆಗಳಿಗೆ ಮಾನ್ಯತೆ ಕೊಡುವ ಸಲುವಾಗಿ ಅಭಿಯಾನ ಪ್ರಾರಂಭವಾಗಿದೆ. ದೇಶಾದ್ಯಂತ ಸುಮಾರು 900 ಆಸ್ಪತ್ರೆಗಳು ಈಗಾಗಲೇ ಮಾನ್ಯತೆ ಪಡೆದಿವೆ. ಈ ಮಾನ್ಯತೆಯಿಂದ ಆರೋಗ್ಯ ಸುರಕ್ಷತೆಯ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಆಸ್ಪತ್ರೆಗಳು ಯಾವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ರೋಗಿಗಳನ್ನು ಹೇಗೆ ಅಪಾಯಕಾರಿ ರೋಗಗಳಿಂದ ರಕ್ಷಿಸಬಹುದು ಎನ್ನುವುದರ ಬಗ್ಗೆ ಅಭಿಯಾನದಲ್ಲಿ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತದೆ. ಇದರ ಜತೆಗೆ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಈ ಸಂಸ್ಥೆಯಿಂದ ಸಕಾರಾತ್ಮಕ ಸಲಹೆಗಳು ಬರುತ್ತವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಾರುಕಟ್ಟೆಗೆ ಯಿಪ್ಪಿ ಟ್ರೈಕಲರ್ ಪಾಸ್ತಾ
ಐಟಿಸಿ ಸಂಸ್ಥೆಯು ನೂತನ ಯಿಪ್ಪಿ ಟ್ರೈಕಲರ್ ಪಾಸ್ತಾವನ್ನು ಮಾರುಕಟ್ಟೆಗೆ ಬಿಟ್ಟಿದೆ. ಕೇಸರಿ, ಕ್ರೀಮ್ ಹಾಗೂ ಹಸಿರು ಬಣ್ಣಗಳಿಂದ ಮಸಾಲಾ ಹಾಗೂ ಜೋಳದ ಸ್ವಾದದಲ್ಲಿ ಪಾಸ್ತಾ ಲಭ್ಯವಿರುತ್ತದೆ. ಶೇ.100ರಷ್ಟು ನೈಸರ್ಗಿಕ ಬಣ್ಣವನ್ನೇ ಇದರಲ್ಲಿ ಬಳಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಏರ್ಸೆಲ್ ಟೆಲಿಕಾಮ್ನಿಂದ ಹ್ಯಾಪಿ ರೀಚಾರ್ಜ್ ಪ್ಯಾಕ್
ಏರ್ಸೆಲ್ ಟೆಲಿಕಾಮ್ ಸಂಸ್ಥೆಯು ಹ್ಯಾಪಿ ರೀಚಾರ್ಜ್ ಪ್ಯಾಕ್ನ್ನು ಬಿಡುಗಡೆ ಮಾಡಿದೆ. 168, 268 ಹಾಗೂ 368 ದರದ ಪ್ಯಾಕ್ಗಳನ್ನು ಮಾರುಕಟ್ಟೆಗೆ ತರಲಾಗಿದ್ದು, ಎಸ್ಎಂಎಸ್, ಕರೆ ಹಾಗೂ ಇಂಟರ್ನೆಟ್ ಸೌಲಭ್ಯಗಳನ್ನು ಈ ರೀಚಾರ್ಜ್ನೊಂದಿಗೆ ನೀಡಲಾಗುತ್ತಿದೆ. ಇದರಿಂದ ಒಂದೇ ರೀಚಾರ್ಜ್ನಲ್ಲಿ ಗ್ರಾಹಕರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಿಂದ ಅಬುಧಾಭಿಗೆ ನೇರ ವಿಮಾನ
ಬೆಂಗಳೂರಿನಿಂದ ಅಬುಧಾಭಿಗೆ ಜೆಟ್ ಏರ್ವೇಸ್ ಸಂಸ್ಥೆಯ ನೇರ ವಿಮಾನ ಸೇವೆ ಆರಂಭವಾಗಿದೆ. ಜೆಟ್ ಪ್ರಿವಿಲೇಜ್ ಸದಸ್ಯರಿಗೆ ಸುಂಕ ರಿಯಾಯಿತಿ ನೀಡಲಾಗುತ್ತದೆ. ಈಗಾಗಲೇ ಜೆಟ್ ಏರ್ವೇಸ್ನಿಂದ ದೆಹಲಿ, ಕೊಚ್ಚಿನ್, ಚೆನ್ನೈ, ಮುಂಬೈ ಮೂಲಕ ಪ್ರತಿ ದಿನ 11 ವಿಮಾನಗಳು ಅಬುಧಾಬಿಗೆ ಸಂಚರಿಸುತ್ತಿದೆ. ಬೆಂಗಳೂರಿನಿಂದ ಹೊರಟ ಮೊದಲ ಪ್ರಯಾಣಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಚಾಲನೆ ನೀಡಿದರು.
ವಿಡಿಯೋಕಾನ್ ಡಿಟಿಎಚ್ಗೆ ಕೋಟಿ ಗ್ರಾಹಕರು
ವಿಡಿಯೋಕಾನ್ ಡಿಟಿಎಚ್ ಸೇವೆ ಪ್ರಾರಂಭವಾದ 4 ವರ್ಷಗಳಲ್ಲಿ ಗ್ರಾಹಕರ ಸಂಖ್ಯೆ 1 ಕೋಟಿಯನ್ನು ದಾಟಿದೆ. ಅತಿ ಹೆಚ್ಚು 3ಡಿ ಚಾನಲ್, 1000 ಜಿಬಿ ಎಚ್ಡಿ ರೆಕಾರ್ಡರ್, ರೇಡಿಯೋ ಫ್ರಿಕ್ವೆನ್ಸಿ ರಿಮೋಟ್ ಹಾಗೂ ಇನ್ನಿತರ ಸೇವೆಗಳ ಮೂಲಕ ಶೀಘ್ರವಾಗಿ 1 ಕೋಟಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅನಿಲ್ ಖೇರಾ ಹೇಳಿದ್ದಾರೆ. ಗುಣಮಟ್ಟ ಸೇವೆ ಹಾಗೂ ಗ್ರಾಹಕ ಸ್ನೇಹಿ ಕೊಡುಗೆಯಿಂದ ವಿಡಿಯೋಕಾನ್ ಸಂಸ್ಥೆಯು ಈ ಮೈಲಿಗಲ್ಲು ದಾಟಿದೆ ಎಂದು ಸಂಸ್ಥೆಯ ನಿರ್ದೇಶಕ ಸೌರಭ್ ಧೂತ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


