ರಿಟನ್ರ್ಸ್: ವಲಯ ಬದಲು

ನೀವು ಆದಾಯ ತೆರಿಗೆ ರಿಟನ್ರ್ಸ್ ಫೈಲ್ ಮಾಡುವವರೇ? ಹಾಗಿದ್ದರೆ ಕೊಂಚ ಗಮನಿಸಿ...
ಆದಾಯ ತೆರಿಗೆ
ಆದಾಯ ತೆರಿಗೆ
Updated on

ನವದೆಹಲಿ: ನೀವು ಆದಾಯ ತೆರಿಗೆ ರಿಟನ್ರ್ಸ್ ಫೈಲ್ ಮಾಡುವವರೇ? ಹಾಗಿದ್ದರೆ ಕೊಂಚ ಗಮನಿಸಿ.

ಹಿಂದಿನ ಹಣಕಾಸು ವರ್ಷದ ಆದಾಯ ತೆರಿಗೆ ವಲಯಗಳಲ್ಲಿ ಬದಲಾಗುವ ಸಾಧ್ಯತೆ ಇದೆ.
ಹೀಗಾಗಿ, ತೆರಿಗೆ ರಿಟನ್ರ್ಸ್ ಫೈಲ್ ಮಾಡುವ ವೇಳೆ ಹೊಸ ವಲಯಗಳ ಬಗ್ಗೆ ಗಮನಿಸಲು ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ. ಮೇ ಮೊದಲ ವಾರದಲ್ಲಿ ಇಲಾಖೆ ವೆಬ್‍ಸೈಟ್ www.incometaxindia.gov.in ನಲ್ಲಿ ಈ ಬಗ್ಗೆ ಮಾಹಿತಿ ಅಪ್‍ಲೋಡ್ ಮಾಡಲಾಗುತ್ತದೆ.

ಆದಾಯ ತೆರಿಗೆ ಇಲಾಖೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಪ್ರಮುಖ ಅಧಿಕಾರಿಗಳನ್ನು ವರ್ಗ ಮಾಡಲಾಗಿತ್ತು. ಜತೆಗೆ 20,700 ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಲಾಗಿತ್ತು. ಹೀಗಾಗಿ, ಈ
ಬದಲಾವಣೆ ಮಾಡಲಾಗುತ್ತಿದೆ. ಆನ್‍ಲೈನ್‍ಲ್ಲಿ ರಿಟನ್ರ್ಸ್ ಫೈಲ್ ಮಾಡುವುದಿದ್ದರೆ, ಸ್ವಯಂಚಾಲಿತವಾಗಿಯೇ ಅಸ್ಸೆಸ್ಸಿಂಗ್ ಆಫೀಸರ್ ಗಳ ವಿಚಾರ ಅಪ್‍ಡೇಟ್ ಆಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com