ಚಿನ್ನದ ಬಾಂಡ್ ಶೇ.2.75 ಬಡ್ಡಿ

ಸವರನ್ ಗೋಲ್ಡ್ ಬಾಂಡ್‍ಗೆ ಶೇ.2.75ರಷ್ಟು ಬಡ್ಡಿ ನಿಗದಿಪಡಿಸಿದ್ದು ಖರೀದಿಸಲು ಬಯಸುವವರು ನವೆಂಬರ್ 5ರಿಂದ 20ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಸವರನ್ ಗೋಲ್ಡ್ ಬಾಂಡ್‍ಗೆ ಶೇ.2.75ರಷ್ಟು ಬಡ್ಡಿ ನಿಗದಿಪಡಿಸಿದ್ದು ಖರೀದಿಸಲು ಬಯಸುವವರು ನವೆಂಬರ್ 5ರಿಂದ 20ರೊಳಗೆ ನೋಂದಾಯಿಸಿಕೊಳ್ಳಬಹುದು
ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಭೌತಿಕವಾಗಿ ಚಿನ್ನ ಖರೀದಿಸುವುದಕ್ಕೆ ಪರ್ಯಾಯವಾಗಿ ಈ ಯೋಜನೆಯನ್ನು ರೂಪಿಸಿದ್ದು 2 ಗ್ರಾಂ ಮೌಲ್ಯದ ಬಾಂಡ್‍ಗಳಿಂದ ಆರಂಭವಾಗಲಿದೆ. ವ್ಯಕ್ತಿಯೊಬ್ಬರು ಗರಿಷ್ಠ 500 ಗ್ರಾಂಗಳಷ್ಟು ಖರೀದಿಸಬಹುದಾಗಿದೆ. ನವೆಂಬರ್ 26ರಿಂದ ಬಾಂಡ್ ಗಳನ್ನು ವಿತರಿಸಲಾಗುವುದು.

ಬ್ಯಾಂಕ್‍ಗಳು ಮತ್ತು ಅಂಚೆ ಕಚೇರಿಗಳಲ್ಲಿ ಬಾಂಡ್‍ಗಳನ್ನು ಮಾರಾಟ ಮಾಡಲಿದ್ದು ಈ ಕುರಿತು ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಇದು ಮೊದಲ ಕಂತಾಗಿದ್ದು ಮುಂದಿನ ಕಂತುಗಳ ಬಿಡುಗಡೆ ಕುರಿತು ಅಧಿಸೂಚನೆ ಹೊರಡಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com