ಆರ್ಥಿಕ ಸಮಸ್ಯೆ: ಭಾರತದ 3 ಘಟಕಗಳಲ್ಲಿ ಕೋಕಾ ಕೋಲಾ ತಯಾರಿಕೆ ಸ್ಥಗಿತ

ದೀರ್ಘಕಾಲಿಕ ಆರ್ಥಿಕ ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಕೋಕಾ ಕೋಲಾ ಕಂಪನಿ ಇದೀಗ ಭಾರತದ 3 ಘಟಗಳಲ್ಲಿ ಕೋಕಾಕೋಲಾ ತಯಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on

ನವದೆಹಲಿ: ದೀರ್ಘಕಾಲಿಕ ಆರ್ಥಿಕ ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಕೋಕಾ ಕೋಲಾ ಕಂಪನಿ ಇದೀಗ ಭಾರತದ 3 ಘಟಗಳಲ್ಲಿ ಕೋಕಾಕೋಲಾ ತಯಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ರಾಜಸ್ಥಾನದ ಜೈಪುರದಲ್ಲಿನ ಕಾಳದೇರ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಹಾಗೂ ಮೇಘಾಲಯದ ಬ್ರೈನಿಹಟ್ ಪ್ರದೇಶಗಳಲ್ಲಿ ಕೋಕಾ ಕೋಲಾ ತಯಾರಿಕೆಯನ್ನು ಸ್ಥಗಿತಗೊಳಿಸಲು ಕಂಪನಿ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಸ್ಥಗಿತಗೊಳಿಸಲು ತೀರ್ಮಾನಿಸುವ ಘಟಕಗಳಲ್ಲಿ ದೀರ್ಘಕಾಲಿಕ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹಿನ್ನಡೆ ಕಂಡ ಕಾರಣ ಸ್ಥಳಿತಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದು, ಇದೊಂದು ವ್ಯಾವಹಾರಿಕ ತೀರ್ಮಾನವಾಗಿದೆ ಎಂದು ಹೇಳಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com