ಇಂದ್ರಾನೂಯಿ ಉದಾರಿ

ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಯೇಲ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ಹಳೆ ವಿದ್ಯಾರ್ಥಿಯಾಗಿರುವ ಪೆಪ್ಸಿಕೊ ಸಿಇಒ ಭಾರತೀಯ ಮೂಲದ ಇಂದ್ರ ನೂಯಿ ಉದಾರವಾಗಿ ದಾನ ಮಾಡಿದ್ದಾರೆ...
ಇಂದ್ರಾ ನೂಯಿ (ಸಂಗ್ರಹ ಚಿತ್ರ)
ಇಂದ್ರಾ ನೂಯಿ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಯೇಲ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ಹಳೆ ವಿದ್ಯಾರ್ಥಿಯಾಗಿರುವ ಪೆಪ್ಸಿಕೊ ಸಿಇಒ ಭಾರತೀಯ ಮೂಲದ ಇಂದ್ರ ನೂಯಿ  ಉದಾರವಾಗಿ ದಾನ ಮಾಡಿದ್ದಾರೆ.

ಹಳೆ ವಿದ್ಯಾರ್ಥಿಗಳು ಇದುವರೆಗೂ ದಾನ ಮಾಡಿರುವುದಕ್ಕಿಂತಲೂ ಇದೇ ಹೆಚ್ಚು ಎಂದು ವಿವಿ ಹೇಳಿದೆ. ಇದರ ಗೌರವಾರ್ಥವಾಗಿ ಬಿಸ್ಕೂಲ್ ಇಂದ್ರನೂಯಿಗೆ ಗೌರವ ಡೀನ್‍ಶಿಪ್ ನೀಡಿದೆ. ವಿವಿಗೆ  ಎಷ್ಟು ಹಣ ಕೊಡುಗೆ ನೀಡಲಾಯಿತು ಎಂಬುದನ್ನು ಇಂದ್ರನೂಯಿ ಬಹಿರಂಗಪಡಿಸಿಲ್ಲ. ಈ ಹಣವನ್ನು ಇನೋವೇಷನ್ ನಿಧಿಯಾಗಿ ರೂಪಿಸಲಾಗುವುದು ಎಂದು ಹೇಳಲಾಗಿದೆ. ಗೌರವ ಡೀನ್‍ಶಿಪ್  ಪಡೆದಿರುವ ಮೊದಲ ಮಹಿಳೆಯೂ ಇಂದ್ರನೂಯಿ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com