ವಾಣಿಜ್ಯ

ರಿಂಗಿಂಗ್ ಬೆಲ್ಸ್ ಫ್ರೀಡಂ 251 ಸ್ಮಾರ್ಟ್ ಫೋನ್ ವಿತರಣೆ ಇಂದಿನಿಂದ?

ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದ ಅತ್ಯಂತ ಅಗ್ಗದ ಬೆಲೆಯ ಫ್ರೀಡಂ 251 ಸ್ಮಾರ್ಟ್ ಫೋನ್ ಮತ್ತೆ ತನ್ನ ಕಾರ್ಯ ವೈಖರಿ ಆರಂಭಿಸಲು ಮುಂದಾಗಿದ್ದು, ಮಂಗಳವಾರದಿಂದ...

ರಿಂಗಿಂಗ್ ಬೆಲ್ಸ್ ಫ್ರೀಡಂ 251 ಸ್ಮಾರ್ಟ್ ಫೋನ್ ವಿತರಣೆ ಇಂದಿನಿಂದ?
ಫ್ರೀಡಂ 251 ಸ್ಮಾರ್ಟ್ ಫೋನ್
Published On :

ನವದೆಹಲಿ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದ ಅತ್ಯಂತ ಅಗ್ಗದ ಬೆಲೆಯ ಫ್ರೀಡಂ 251 ಸ್ಮಾರ್ಟ್ ಫೋನ್ ಮತ್ತೆ ಕಾರ್ಯಾರಂಭಕ್ಕೆ ಮುಂದಾಗಿದ್ದು, ಇಂದಿನಿಂದ ಮೊಬೈಲ್ ವಿತರಣಾ ಕಾರ್ಯವನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿರುವ ಗ್ರಾಹಕರಿಗೆ ಜೂನ್ 28 ರಿಂದ ಮೊಬೈಲ್ ವಿತರಿಸುವುದಾಗಿ ಕೆಲವು ದಿನಗಳ ಹಿಂದಷ್ಟೇ ನೊಯ್ಡಾ ಮೂಲಕ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಿತ್ತು. ಅದರಂತೆ ಇಂದಿನಿಂದ ಫ್ರೀಡಂ 251 ಮೊಬೈಲ್ ವಿತರಣಾ ಕಾರ್ಯ ಮತ್ತೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಕೇವಲ ರು. 251 ಗೆ ಸ್ವದೇಶಿ ನಿರ್ಮಿತ ಸ್ಮಾರ್ಟ್ ಫೋನ್ ವೊಂದನ್ನು ನೀಡುವುದಾಗಿ ಹೇಳಿಕೊಂಡಿತ್ತು. ವಿಶ್ವದ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆ ಪಡೆದಿದ್ದ ಫ್ರೀಡಂ 251 ಸಾಕಷ್ಟು ಚರ್ಚೆಯ ಕೇಂದ್ರ ಬಿಂದುವಾಗಿತ್ತು.

ಕೇವಲ ರು.251 ತಾನೆ ಒಮ್ಮೆ ಕೊಂಡು ನೋಡೋಣ ಎಂದು ಜನತೆ ಮುನ್ನುಗ್ಗಿದ್ದರು. ಆದರೆ, ಮೊಬೈಲ್ ಕಂಪನಿ ಘೋಷಣೆ ಮಾಡಿದ ಕೇವಲ ಒಂದೇ ದಿನದಲ್ಲಿ ತನ್ನ ಬುಕಿಂಗ್ ನ್ನು ಸ್ಥಗಿತಗೊಳಿಸಿತ್ತು. ಇದಲ್ಲದೆ, ಕಂಪನಿಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

ತದನಂತರ ಎಲ್ಲಾ ಆರೋಪಗಳನ್ನು ಬದಿಗೊತ್ತಿ ಮತ್ತೆ ಮುನ್ನುಗ್ಗಲು ಆರಂಭಿಸಿದ್ದ ರಿಂಗಿಂಗ್ ಬೆಲ್ಸ್ ಕಂಪನಿಯು ಜೂನ್. 28 ರಿಂದ ಮತ್ತೆ ಫ್ರೀಡಂ 251 ಸ್ಮಾರ್ಟ್ ಫೋನ್ ಬುಕಿಂಗ್ ನ್ನು ಮರು ತೆರೆಯುವುದಾಗಿ ಘೋಷಣೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.