ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ -ಜಿಎಸ್‍ಟಿ ಕುರಿತಂತೆ ತೆರಿಗೆ ಪಾವತಿದಾರರಿಗೆ ಮಾರ್ಗದರ್ಶನ ನೀಡುವ ಸಲುವಾಗಿ, ತೆರಿಗೆದಾರರು ಪದೇ ಪದೇ ಕೇಳುವ ಪ್ರಶ್ನೆ ಮತ್ತು ಉತ್ತರದ ಹೊತ್ತಿಗೆಯನ್ನು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ ಬಿಡುಗಡೆ ಮಾಡಿದೆ.
ಅದರಲ್ಲಿ ಜಿಎಸ್‍ಟಿ ಸಂಬಂಧಿ ಕಾನೂನು ಪ್ರಕ್ರಿಯೆ, ತೆರಿಗೆ ದರ, ನಿಗದಿತ ಕೈಗಾರಿಕೆಗಳು ಮತ್ತು ವಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಲಾಗಿದೆ. ಈ
ಮಾಹಿತಿ ಸಿಬಿಇಸಿ ಜಿಎಸ್‍ಟಿ ಪೋರ್ಟಲ್ cbec-gst.gov.in ನಲ್ಲಿ ಲಭ್ಯವಿದೆ.
ತೆರಿಗೆ ಪಾವತಿದಾರರು ಜವಳಿ, ರೆಸ್ಟೋರೆಂಟ್ ನೋಂದಣಿ ಪ್ರಕ್ರಿಯೆ, ರಿಟರ್ನ್ಸ್ ಫೈಲಿಂಗ್, ಇನ್‍ಪುಟ್ ಟ್ಯಾಕ್ಸ್, ಕ್ರೆಡಿಟ್ ಮತ್ತಿತರ ಪದಗಳನ್ನು ಬಳಸಿ ಮಾಹಿತಿ ಹುಡುಕಬಹುದಾಗಿದೆ.
ಇದಲ್ಲದೆ, ತೆರಿಗೆ ಪಾವತಿದಾರರು ಟ್ವಿಟರ್ ಮೂಲಕ ಇಲ್ಲವೇ, ಈ ಮೇಲ್, cbecmitra.helpdesk@icegate.gov.in ಅಥವಾ ದೂರವಾಣಿ ಸಂಖ್ಯೆ 1800-1200-232ಗೆ ಕರೆ ಮಾಡಬಹುದು.