ದೇಶದಲ್ಲಿ ನಗರೀಕರಣ ವೇಗವಾದ ಬೆಳೆಯುತ್ತಿದ್ದು, ಸಮರ್ಥವಾದ, ಮಿತವ್ಯಯದ ಸಾರಿಗೆ ವ್ಯವಸ್ಥೆ ಅಗತ್ಯತೆ ಇದೆ. ಭಾರತೀಯ ರೈಲ್ವೆ ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡ ರೈಲ್ವೆ ವ್ಯವಸ್ಥೆಯಾಗಿದ್ದು, ಮುಂದಿನ 5 ವರ್ಷಗಳಲ್ಲಿ ಶೇ.10 ರಷ್ಟು ಜಾಗತಿಕ ಮಾರುಕಟ್ಟೆಯನ್ನು ಹೊಂದಿರಲಿದೆ ಆದ್ದರಿಂದ ರೈಲ್ವೆ ಇಲಾಖೆಗೆ ನವೀನ ಮಾದರಿಯ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.