ಅಕ್ಟೋಬರ್‌ನಲ್ಲಿ ಪ್ರಮುಖ ಕೈಗಾರಿಕೋದ್ಯಮಗಳ ಉತ್ಪಾದನೆ ಶೇಕಡ 2.5ರಷ್ಟು ಕುಂಠಿತ

ಅಕ್ಟೋಬರ್ ತಿಂಗಳಲ್ಲಿ ದೇಶದ ಎಂಟು ಪ್ರಮುಖ ಕೈಗಾರಿಕೋದ್ಯಮಗಳ ಉತ್ಪಾದನಾ ದರ ಶೇ 2.5 ರಷ್ಟು ಕುಸಿದಿವೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
ಕೈಗಾರಿಕಾ ಉತ್ಪಾದನೆ ಕುಸಿತ
ಕೈಗಾರಿಕಾ ಉತ್ಪಾದನೆ ಕುಸಿತ
Updated on: 

ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ದೇಶದ ಎಂಟು ಪ್ರಮುಖ ಕೈಗಾರಿಕೋದ್ಯಮಗಳ ಉತ್ಪಾದನಾ ದರ ಶೇ 2.5 ರಷ್ಟು ಕುಸಿದಿವೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಸರ್ಕಾರ ಇಲ್ಲಿ ಬಿಡುಗಡೆ ಮಾಡಿರುವ ಅಂಕಿ -ಅಂಶಗಳಂತೆ, 2020 ರ ಸೆಪ್ಟೆಂಬರ್‌ನಲ್ಲಿ ಪ್ರಮುಖ ಕೈಗಾರಿಕೋದ್ಯಮಗಳ ಉತ್ಪಾದನೆಯಲ್ಲಿ ಶೇ 0.1 ರಷ್ಟು ಕುಸಿತ ಕಂಡುಬಂದಿದೆ. 2019ರ ಅಕ್ಟೋಬರ್ ನಲ್ಲಿ ಈ ದರ ಶೇ 5.5 ರಷ್ಟು ಕುಸಿತ ಕಂಡಿತ್ತು. 

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರಗೆ ಪ್ರಮುಖ ಕೈಗಾರಿಕಾ ವಲಯಗಳ ಉತ್ಪಾದನೆಯಲ್ಲಿ ಶೇ 13 ರಷ್ಟು ಇಳಿಕೆ ಕಂಡುಬಂದಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 0.3 ರಷ್ಟು ಕುಸಿತ ಕಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com