Indian Stock Markets
ಷೇರು ಮಾರುಕಟ್ಟೆ ಕುಸಿತ

Indian Stock Market: ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ; ವಾರದ ಮೊದಲ ದಿನವೇ ಕುಸಿತ!

ನಿಫ್ಟಿ ಕೂಡ 58.80 ಅಂಕಗಳ ಅಲ್ಪ ಕುಸಿತದೊಂದಿಗೆ 24,619.00 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
Published on

ಮುಂಬೈ: ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ ಬೆಳವಣಿಗೆಯ ಹಿನ್ನಲೆಯಲ್ಲಿ ವಾರದ ಮೊದಲ ದಿನವಾದ ಸೋಮವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದ ಕುಸಿತ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.24 ರಿಂದ ಶೇ.0.25ರಷ್ಟು ಕುಸಿತ ಕಂಡಿದ್ದು, ಸೆನ್ಸೆಕ್ಸ್ 200.66 ಅಂಕಗಳ ಇಳಿಕೆಯೊಂದಿಗೆ 81,508.46 ಅಂಕಗಳಿಗೆ ಕುಸಿತವಾಗಿದೆ.

ಅಂತೆಯೇ ನಿಫ್ಟಿ ಕೂಡ 58.80 ಅಂಕಗಳ ಅಲ್ಪ ಕುಸಿತದೊಂದಿಗೆ 24,619.00 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Markets
ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿಂದ 16 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿ: ಕೇಂದ್ರ

ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ

ಕಳೆದ ವಾರಾಂತ್ಯದಲ್ಲಿ ಹೂಡಿಕೆದಾರರ ಉತ್ಸಾಹದ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ನೀರಸ ವಹಿವಾಟು ನಡೆದಿದ್ದು, ಪ್ರಮುಖವಾಗಿ ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ ಪ್ರಕ್ರಿಯೆಯಿಂದಾಗಿ ಇಂದು ಮಾರುಕಟ್ಟೆ ಹೆಚ್ಚಾಗಿ ಋಣಾತ್ಮಕವಾಗಿ ಸಾಗಿತು ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ವಿಪಿ (ಸಂಶೋಧನೆ) ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಶಾಂಘೈ ಸ್ಥಿರ ವಹಿವಾಟು ನಡೆಸಿದ್ದು, ಟೋಕಿಯೊ ಮತ್ತು ಹಾಂಗ್ ಕಾಂಗ್ ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿವೆ. ಅತ್ತ ಯುರೋಪಿಯನ್ ಮಾರುಕಟ್ಟೆಗಳು ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಏರಿಕೆಯಲ್ಲಿ ದಿನದವಹಿವಾಟು ಮುಕ್ತಾಯಗೊಳಿಸಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಲಾರ್ಸೆನ್ & ಟೌಬ್ರೊ, ಟಾಟಾ ಸ್ಟೀಲ್, JSW ಸ್ಟೀಲ್, HDFC ಬ್ಯಾಂಕ್, ಅದಾನಿ ಪೋರ್ಟ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಪವರ್‌ಗ್ರಿಡ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದ್ದು, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಮತ್ತು ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com