Indian Stock market: ಮಾತುಕತೆ ಇರಾನ್-ಅಮೆರಿಕದ್ದು, ಲಾಭ ಮಾತ್ರ ಪಾಕಿಸ್ತಾನದ್ದು.. ಷೇರುಮಾರುಕಟ್ಟೆ ಭಾರಿ ಏರಿಕೆ! 3 ಲಕ್ಷ ಕೋಟಿ ರೂ ಲಾಭ

ಕಚ್ಚಾ ತೈಲ ಬೆಲೆಗಳಲ್ಲಿನ ಕುಸಿತ ಮತ್ತು ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳಲ್ಲಿ ಪ್ರಗತಿಯ ನಿರೀಕ್ಷೆಯ ನಂತರ ಸೆನ್ಸೆಕ್ಸ್ 753 ಪಾಯಿಂಟ್‌ಗಳ ಜಿಗಿತವಾಗಿದೆ.
Indian Stock Market
ಭಾರತೀಯ ಷೇರು ಮಾರುಕಟ್ಟೆ
Updated on

ಮುಂಬೈ: ಮಧ್ಯ ಪ್ರಾಚ್ಯ ಸಂಘರ್ಷದ ವಿಚಾರವಾಗಿ ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಇರಾನ್-ಅಮೆರಿಕ ಸಂಧಾನ ಮಾತುಕತೆ ಕುರಿತು ಸಕಾರಾತ್ಮಕ ಬೆಳವಣಿಗೆಗಳ ನಡುವೆಯೇ ಇತ್ತ ಜಾಗತಿಕ ಷೇರು ಮಾರುಕಟ್ಟೆಗಳು ಚೇತೋಹಾರಿ ವಹಿವಾಟು ನಡೆಸಿವೆ.

ಹೌದು.. ಇಸ್ಲಾಮಾಬಾದ್ ಮಾತುಕತೆಯ ಸುದ್ದಿಯ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳು ಸುಮಾರು 1% ಏರಿಕೆ ಕಂಡಿವೆ.

ಮಂಗಳವಾರ ಸತತ ಮೂರನೇ ದಿನವೂ ಭಾರತೀಯ ಷೇರು ಮಾರುಕಟ್ಟೆಗಳು ಮುನ್ನಡೆ ಸಾಧಿಸಿದವು, ಕಚ್ಚಾ ತೈಲ ಬೆಲೆಗಳಲ್ಲಿನ ಕುಸಿತ ಮತ್ತು ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳಲ್ಲಿ ಪ್ರಗತಿಯ ನಿರೀಕ್ಷೆಯ ನಂತರ ಸೆನ್ಸೆಕ್ಸ್ 753 ಪಾಯಿಂಟ್‌ಗಳ ಜಿಗಿತವಾಗಿದೆ.

ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market
'ನಮ್ಮ ಯಾವುದೇ ನಿಯೋಗ ಪಾಕ್‌ಗೆ ಭೇಟಿ ನೀಡಿಲ್ಲ': ಇಸ್ಲಾಮಾಬಾದ್‌ಗೆ ತೆರಳಲು ಸಿದ್ಧವಾದ ಟ್ರಂಪ್‌ಗೆ ಇರಾನ್‌ ಶಾಕ್!

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.96ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.87ರಷ್ಟು ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 753.03ಅಂಕಗಳ ಏರಿಕೆಯೊಂದಿಗೆ 79,273.33 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 211.75 ಅಂಕಗಳ ಏರಿಕೆಯೊಂದಿಗೆ 24,576.60 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಬಂಡವಾಳ ಸರಕುಗಳು ಮತ್ತು ರಿಯಾಲಿಟಿ ಕ್ಷೇತ್ರದ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿದ್ದು, ಬ್ಯಾಂಕ್ ಮತ್ತು ಟೆಲಿಕಾಮ್ ಷೇರುಗಳು ಹಿಂದುಳಿದವು ಎನ್ನಲಾಗಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟ್ರೆಂಟ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಭಾರತ್ ಎಲೆಕ್ಟ್ರಾನಿಕ್ಸ್, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್‌ಟಿಪಿಸಿ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ಇನ್ನು ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ನೆಸ್ಲೆ ಇಂಡಿಯಾ, ಹೆಚ್ ಯುಎಲ್, ಟ್ರೆಂಟ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಎಸ್‌ಬಿಐ ಲೈಫ್ ಇನ್ಶುರೆನ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಜಿಯೋ ಫೈನಾನ್ಷಿಯಲ್, ಡಾ. ರೆಡ್ಡೀಸ್ ಲ್ಯಾಬ್ಸ್ ಮತ್ತು ಟೈಟಾನ್ ಕಂಪನಿ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

3 ಲಕ್ಷ ಕೋಟಿ ರೂ ಲಾಭ

ಇಂದಿನ ಮಾರುಕಟ್ಟೆ ಏರಿಕೆಯಿಂದಾಗಿ ಹೂಡಿಕೆದಾರರಿಗೆ ಇಂದು ಒಂದೇ ದಿನ 3 ಲಕ್ಷ ಕೋಟಿ ಲಾಭಾಂಶ ಬಂದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣಕ್ಕೆ 3 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಲಾಭವಾಗಿ ಬಂದಿದ್ದು, ಆ ಮೂಲಕ ಮಾರುಕಟ್ಟೆ ಬಂಡವಾಳೀಕರಣ ಸುಮಾರು 469 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಪಾಕಿಸ್ತಾನ ಮಾರುಕಟ್ಟೆ ಚೇತರಿಕೆ:

ಭಾರತ ಮಾತ್ರವಲ್ಲದೇ ಪಾಕಿಸ್ತಾನ ಷೇರುಮಾರುಕಟ್ಟೆ ಕೂಡ ಇಂದು ಚೇತೋಹಾರಿ ವಹಿವಾಟು ನಡೆಸಿದ್ದು, KSE-100 ಸೂಚ್ಯಂಕವು ಸುಮಾರು 1.24% ರಷ್ಟು ಜಿಗಿತ ಕಂಡಿದೆ.

ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ $1 ಬಿಲಿಯನ್ ಆರ್ಥಿಕ ನೆರವು ಹರಿದುಬಂದಿರುವುದು ಮಾರುಕಟ್ಟೆಗೆ ಮತ್ತಷ್ಟು ಬಲ ನೀಡಿದೆ.

ಜಾಗತಿಕ ತೈಲ ಬೆಲೆ:

ಶಾಂತಿ ಮಾತುಕತೆಯ ಆಶಾವಾದದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 1% ರಷ್ಟು ಇಳಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com