

Petrol Pump Free Services: ಪೆಟ್ರೋಲ್ (Petrol) ಹಾಕಿಸೋಕೆ ಪಂಪ್‌ಗೆ (Petrol Pump) ಹೋದಾಗ ನಾವು ಕೇವಲ ಇಂಧನಕ್ಕೆ (Fuel) ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್‌ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?
ಹೌದು, ನಾವು ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ (Diesel) ಹಾಕಿಸಲು ಪೆಟ್ರೋಲ್ ಪಂಪ್ ಗೆ ಹೋದಾಗ ಹಲವು ಸೇವೆಗಳನ್ನು ಉಚಿತವಾಗಿ (Free Services) ಪಡೆಯುವ ಹಕ್ಕು ನಮಗಿದೆ. ಆದರೆ ಹೆಚ್ಚಿನ ಜನರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಪೆಟ್ರೋಲ್ ಪಂಪ್ ನವರು ಕೆಲವೊಮ್ಮೆ ಈ ಸೇವೆಗಳಿಗೆ ಹಣ ಕೇಳುತ್ತಾರೆ. ಆದರೆ ಕೇಂದ್ರ ಸರ್ಕಾರದ (Central Government) ನಿಯಮದ ಪ್ರಕಾರ ಈ ಎಲ್ಲಾ ಸೇವೆಗಳು ಸಂಪೂರ್ಣ ಫ್ರೀ ಆಗಿವೆ. ಆ ಕುರಿತ ವರದಿ ಇಲ್ಲಿದೆ.
ಏನೆಲ್ಲ ಸೇವೆಗಳು ಫ್ರೀ ಫ್ರೀ ಫ್ರೀ?
ಉಚಿತ ಗಾಳಿ:
ನಿಮ್ಮ ವಾಹನದ ಟೈರ್‌ಗಳಿಗೆ ಉಚಿತವಾಗಿ ಗಾಳಿ ತುಂಬಿಸಿಕೊಳ್ಳಬಹುದು. ಹೌದು, ಪ್ರತಿ ಬಂಕ್‌ನಲ್ಲೂ ಡಿಜಿಟಲ್ ಏರ್ ಫಿಲ್ಲರ್ ಯಂತ್ರ ಮತ್ತು ಅದಕೊಬ್ಬ ಸಿಬ್ಬಂದಿ ಇರುವುದು ಕಡ್ಡಾಯ. ಇದಕ್ಕೆ ಯಾವುದೇ ಟಿಪ್ಸ್ ಅಥವಾ ಹಣ ನೀಡುವ ಅಗತ್ಯವಿಲ್ಲ.
ಸ್ವಚ್ಛವಾದ ಶೌಚಾಲಯ:
ತುರ್ತು ಸಂದರ್ಭಗಳಲ್ಲಿ ಅಥವಾ ಪ್ರಯಾಣದ ವೇಳೆಯಲ್ಲಿ ಬಂಕ್‌ನಲ್ಲಿರುವ ಶೌಚಾಲಯವನ್ನು ಉಚಿತವಾಗಿ ಬಳಸಬಹುದು. ಅದರಂತೆ ಶೌಚಾಲಯವು ಸ್ವಚ್ಛವಾಗಿರಬೇಕು, ಜೊತೆಗೆ ಅದರಲ್ಲಿ ಸರಿಯಾದ ಲೈಟಿಂಗ್ ಮತ್ತು ನೀರಿನ ವ್ಯವಸ್ಥೆ ಇರಬೇಕು.
ಶುದ್ಧ ಕುಡಿಯುವ ನೀರು:
ಬಂಕ್‌ಗೆ ಬರುವ ಗ್ರಾಹಕರಿಗೆ ಕುಡಿಯಲು ಶುದ್ಧ ಹಾಗೂ ತಂಪಾದ ನೀರಿನ ವ್ಯವಸ್ಥೆ ಇರಬೇಕು. ಹೌದು, ಬಂಕ್‌ಗಳಲ್ಲಿ RO ವಾಟರ್ ಪ್ಯೂರಿಫೈರ್ ಅಳವಡಿಸುವುದು ಕಡ್ಡಾಯವಾಗಿದೆ. ನೀವು ಅಲ್ಲಿ ನೀರು ಕುಡಿಯಬಹುದು ಅಥವಾ ನಿಮ್ಮ ಬಾಟಲಿಗಳಿಗೂ ತುಂಬಿಸಿಕೊಳ್ಳಬಹುದು.
ಇಂಧನದ ಗುಣಮಟ್ಟ:
ನೀವು ಖರೀದಿಸುವ ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಕಲಬೆರಕೆ ಇದೆ ಎಂಬ ಸಂಶಯ ಬಂದರೆ, ಅದನ್ನು ಉಚಿತವಾಗಿ ಪರೀಕ್ಷಿಸಬಹುದು. ಅದರಂತೆ ಇಂಧನದ ಶುದ್ಧತೆ ತಿಳಿಯಲು ಫಿಲ್ಟರ್ ಪೇಪರ್ ಟೆಸ್ಟ್ ಮತ್ತು ಪ್ರಮಾಣದ ನಿಖರತೆ ತಿಳಿಯಲು 5 ಲೀಟರ್ ಪ್ರಮಾಣೀಕೃತ ಜಾರ್ ಕೇಳುವ ಹಕ್ಕು ನಿಮಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಿಬ್ಬಂದಿ ನಿರಾಕರಿಸುವಂತಿಲ್ಲ.
ಪ್ರಥಮ ಚಿಕಿತ್ಸಾ ಪೆಟ್ಟಿಗೆ:
ರಸ್ತೆಯಲ್ಲಿ ಹೋಗುವಾಗ ಸಣ್ಣಪುಟ್ಟ ಅಪಘಾತ ಸಂಭವಿಸಿದರೆ ಅಥವಾ ಯಾರಿಗಾದರೂ ಗಾಯಗಳಾದರೆ ಪ್ರಥಮ ಚಿಕಿತ್ಸೆ ಪಡೆಯಬಹುದು. ಹಾಗಾಗಿ, ಪ್ರತಿ ಪೆಟ್ರೋಲ್ ಪಂಪ್‌ನಲ್ಲೂ ಬ್ಯಾಂಡೇಜ್, ಆಂಟಿಸೆಪ್ಟಿಕ್ ಮತ್ತು ಔಷಧಿಗಳಿರುವ ಫಸ್ಟ್ ಏಡ್ ಬಾಕ್ಸ್ ಇರಲೇಬೇಕು.
ಈ ಸೇವೆಗಳನ್ನು ನಿರಾಕರಿಸಿದರೆ ಏನು ಮಾಡಬೇಕು?
ಒಂದು ವೇಳೆ ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ ಈ ಮೇಲಿನ ಉಚಿತ ಸೌಲಭ್ಯಗಳನ್ನು ನೀಡಲು ನಿರಾಕರಿಸಿದರೆ ಅಥವಾ ಹಣ ಕೇಳಿದರೆ, ನೀವು ಅವರ ವಿರುದ್ಧ PG Portal ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ದೂರು ದಾಖಲಿಸಬಹುದು.