

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗ ಬಯಸುವವರಿಗೆ ಗುಡ್ ನ್ಯೂಸ್; ಯಾಕಂದ್ರೆ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು 389 ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ
ಒಟ್ಟು ಹುದ್ದೆಗಳು: 389
ಹುದ್ದೆಗಳ ಪ್ರಕಾರ:
ಮ್ಯಾನೇಜರ್: 260 ಹುದ್ದೆಗಳು
ಜೂನಿಯರ್ ಎಕ್ಸಿಕ್ಯೂಟಿವ್: 129 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳು.
ಅರ್ಹತೆ:
ಮ್ಯಾನೇಜರ್ ಹುದ್ದೆಗಳಿಗೆ:
ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ (B.E/B.Tech, MBA, CA/ICWA, LL.B, ಮಾಸ್ ಕಮ್ಯುನಿಕೇಷನ್ ಇತ್ಯಾದಿ).
ಅನುಭವ: ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಕಡ್ಡಾಯ.
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ:
ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ.
ಅನುಭವ: ಯಾವುದೇ ಅನುಭವದ ಅಗತ್ಯವಿಲ್ಲ.
ವಯೋಮಿತಿ ಸಡಿಲಿಕೆ:
ಗರಿಷ್ಠ ವಯೋಮಿತಿ: 07.09.2026 ಕ್ಕೆ 32 ವರ್ಷಗಳು (ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ಬದಲಾಗಲಿದೆ ಜೊತೆಗೆ SC/ST ಅಭ್ಯರ್ಥಿಗಳಿಗೆ: 5 ವರ್ಷ, OBC (NCL) ಅಭ್ಯರ್ಥಿಗಳಿಗೆ: 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ ಇದೆ).
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹1,000/-
SC / ST / PwBD / ಮಹಿಳಾ ಅಭ್ಯರ್ಥಿಗಳಿಗೆ: ವಿನಾಯಿತಿ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ವಸ್ತುನಿಷ್ಠ ಮಾದರಿಯ (Objective Type) ಪರೀಕ್ಷೆ. ಯಾವುದೇ ಋಣಾತ್ಮಕ ಮೌಲ್ಯಮಾಪನ (Negative Marking) ಇರುವುದಿಲ್ಲ. ತದನಂತರ ದಾಖಲೆಗಳ ಪರಿಶೀಲನೆ ನಡೆಯಲಿದೆ. ಇದರೊಂದಿಗೆ ಮ್ಯಾನೇಜರ್ ಹುದ್ದೆಗಳಿಗೆ ನೇರ ಸಂದರ್ಶನವಿರುತ್ತದೆ.
ಸಂಬಳ:
ಮ್ಯಾನೇಜರ್: ₹60,000 ರಿಂದ ₹1,80,000 (ವಾರ್ಷಿಕ CTC ಅಂದಾಜು ₹21 ಲಕ್ಷ)
ಜೂನಿಯರ್ ಎಕ್ಸಿಕ್ಯೂಟಿವ್: ₹40,000 ರಿಂದ ₹1,40,000 (ವಾರ್ಷಿಕ CTC ಅಂದಾಜು ₹14 ಲಕ್ಷ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 08.08.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.09.2026
ಪರೀಕ್ಷೆಯ ದಿನಾಂಕ (CBT): AAI ವೆಬ್‌ಸೈಟ್‌ನಲ್ಲಿ ತದನಂತರ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು AAI ನ ಅಧಿಕೃತ ವೆಬ್‌ಸೈಟ್ https://www.aai.aero/ ನಲ್ಲಿ 'CAREERS' ವಿಭಾಗಕ್ಕೆ ತೆರಳಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.