ಕೋರ್ಟ್ ಮೆಟ್ಟಿಲೇರಿದ ಐಶ್!

ಮಾಜಿ ವಿಶ್ವಸುಂದರಿ, ಬಚ್ಚನ್ 'ಬಹು'ರಾಣಿ ಐಶ್ವರ್ಯಾ ರೈ ಸದ್ಯದಲ್ಲೇ ಸೆಕೆಂಡ್...
ಐಶ್ವರ್ಯಾ ರೈ
ಐಶ್ವರ್ಯಾ ರೈ

ಮಾಜಿ ವಿಶ್ವಸುಂದರಿ, ಬಚ್ಚನ್ 'ಬಹು'ರಾಣಿ ಐಶ್ವರ್ಯಾ ರೈ ಸದ್ಯದಲ್ಲೇ ಸೆಕೆಂಡ್ ಇನ್ನಿಂಗ್ಸ್ ಶುರಾಮಾಡಲಿದ್ದಾರೆ. 'ಜಸ್ಬಾ' ಚಿತ್ರದ ಮೂಲಕ ಮರಳಿ ಬಾಲಿವುಡ್‌ಗೆ ಕಾಲಿಡುತ್ತಿರುವ ಐಶ್ವರ್ಯಾ, ಎಲ್ಲರೂ ಊಹಿಸಿದಂತೆ ಕಂಪ್ಲೀಟ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿಲ್ಲ.

ತುಂಡುಡುಗೆ ಅಂತೂ ಆಕೆ ತೊಡುವುದೇ ಇಲ್ಲವಂತೆ. ನೀವು ಕಂಡ ಹಳೇ ಐಶೂ 'ಜಸ್ಬಾ' ಚಿತ್ರದಲ್ಲಿರುವುದಿಲ್ಲ!
 
ಹಾಗದ್ರೆ ಐಶೂ ನಿರ್ವಹಿಸುತ್ತಿರುವ ಪಾತ್ರವಾದರೂ ಎಂಥದ್ದು? ಕರಿ ಕೋಟು ತೊಟ್ಟು, ಲಾ ಪಾಯಿಂಟ್‌ಗಳನ್ನು ಹಾಕುವ ಕ್ರಿಮಿನಲ್ ಲಾಯರ್! ಹೌದು, ಇಲ್ಲಿವರೆಗೂ ತರಹೇವಾರಿ ಪಾತ್ರಗಳಲ್ಲಿ ಮಿಂಚಿರುವ ಐಶ್ವರ್ಯಾ, ಇದೀಗ 'ಜಸ್ಬಾ' ಚಿತ್ರದಲ್ಲಿ ಖ್ಯಾತ ವಕೀಲೆಯಾಗಿ ಕೋರ್ಟ್ ಮೆಟ್ಟಿಲೇರಲಿದ್ದಾರೆ.

ತಮ್ಮ ಕಮ್ ಬ್ಯಾಕ್ ಸಿನಿಮಾ ಧೂಮ್ ಧಾಮ್ ಆಗಿರ್ಬೇಕು ಅಂತ ವಿಭಿನ್ನ ಪಾತ್ರಕ್ಕೋಸ್ಕರ ಕಾಯುತ್ತಿದ್ದ ಐಶ್, 'ಜಸ್ಬಾ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ.

ದಂತದ ಗೊಂಬೆಯಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪಡ್ಡೆಗಳ ಹೃದಯ ಕದ್ದಿದ್ದ ಐಶ್, ಕಪ್ಪು ದಿರಿಸಿನಲ್ಲಿ ಹೇಗೆ ಕಮಾಲ್ ಮಾಡ್ತಾರೋ ಕಾದು ನೋಡ್ಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com