ಒಂದಾದ `ಗದ್ದರ್' ಜೋಡಿ

ನಟ ಸನ್ನಿ ಡಿಯೋಲ್ ಹಾಗೂ ನಟಿ ಅಮೀಶಾ ಪಟೇಲ್ ಪಾಲಿಗೆ ಬಾಲಿವುಡ್ ಸಿನಿ ಜರ್ನಿಯ ಚಕ್ರ ಮತ್ತೆ ಹಿಂದಕ್ಕೆ ತಿರುಗಿದೆ..
ಅಮಿಷಾ ಪಟೇಲ್ ಮತ್ತು ಸನ್ನಿ ಡಿಯೋಲ್ (ಸಂಗ್ರಹ ಚಿತ್ರ)
ಅಮಿಷಾ ಪಟೇಲ್ ಮತ್ತು ಸನ್ನಿ ಡಿಯೋಲ್ (ಸಂಗ್ರಹ ಚಿತ್ರ)

ನಟ ಸನ್ನಿ ಡಿಯೋಲ್ ಹಾಗೂ ನಟಿ ಅಮೀಶಾ ಪಟೇಲ್ ಪಾಲಿಗೆ ಬಾಲಿವುಡ್ ಸಿನಿ ಜರ್ನಿಯ ಚಕ್ರ ಮತ್ತೆ ಹಿಂದಕ್ಕೆ ತಿರುಗಿದೆ.

14 ವರ್ಷಗಳ ಹಿಂದೆ `ಗದ್ದರ್  ಏಕ್ ಪ್ರೇಮ್ ಕಥಾ ' ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ ಮತ್ತೆ ರೋಮ್ಯಾನ್ಸ್ ಮಾಡಲು ಸಜ್ಜಾಗಿದೆ. ನಿರ್ದೇಶಕ ನೀರಜ್ ಪಾಠಕ್, `ಭಯ್ಯಾಜಿ ಸೂಪರ್  ಹಿಟ್'ಚಿತ್ರದ ಮೂಲಕ ಹಿಂದಿನಂತೆ ಜಾದೂ ಮಾಡಲು ಮುಂದಾಗಿದ್ದಾರೆ. ದೊಡ್ಡ ಗ್ಯಾಪ್ ನಂತರ ಸನ್ನಿ ಹಾಗೂ ಅಮೀಶಾ ಒಂದಾಗುತ್ತಿದ್ದು, ಹಳೇ ತಂಡವೇ ಇದಕ್ಕೆ ಸಾಥ್ ನೀಡುತ್ತಿದೆ. ಈ ಬಾರಿ  ಈ ತಂಡಕ್ಕೆ ನಟ ಅರ್ಷದ್ ವಾರ್ಸಿ ಜತೆಯಾಗಿರುವುದು ವಿಶೇಷ. `ಗದರ್ಏಕ್ ಪ್ರೇಮ್ ಕಥಾ' ಚಿತ್ರದ ನಂತರ ಅಮೀಶಾ ಮತ್ತು ಸನ್ನಿ ಡಿಯೋಲ್ `ಥೀಸ್ರಿ ಅಂಕ' ಮತ್ತು `ದಿ ಹಿಡನ್ ಕ್ಯಾಮೆರಾ'  ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದಾದ ನಂತರ ನೀರಜ್ ಪಾಠಕ್, ಇಬ್ಬರನ್ನು ಒಂದಾಗಿಸಿದ್ದಾರೆ. ಪ್ರೀತಿ ಜಿಂಟಾ, ಜಾಕಿ ಶ್ರಾಫ್ , ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಚಿರಾಗ್ ದಾರಿವಾಲ್ ಈ  ಚಿತ್ರದ ನಿರ್ಮಾಪಕರು. ಸಾಜಿದ್ವಾಜಿದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸನ್ನಿಗೆ ತಕ್ಕಂತೆ ಈ ಚಿತ್ರ ಆ್ಯಕ್ಷನ್ ಮತ್ತು ಕಾಮಿಡಿಗೆ ಹೆಚ್ಚು ಆದ್ಯತೆ ನೀಡಿದೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com