35 ಕೋಟಿ ರೂಪಾಯಿ ಮನೆಯೊಡತಿ

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಅತ್ಯಾಧುನಿಕ ಸೌಕರ್ಯ ಹೊಂದಿರುವ, ಬರೋಬ್ಬರಿ 7 ಸಾವಿರ ಸ್ಕ್ವೇರ್ ನ ಫ್ಲಾಟ್ ಗೆ 35 ಕೋಟಿ ರೂಪಾಯಿ ನೀಡಿ ಸೋನಮ್ ತನ್ನದಾಗಿಸಿಕೊಂಡಿದ್ದಾರೆ...
ಸೋನಮ್ ಕಪೂರ್
ಸೋನಮ್ ಕಪೂರ್

ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಏರಿಯಾ ಎಂದೇ ಖ್ಯಾತಿ ಪಡೆದಿರುವ ಬಾಂದ್ರಾದಲ್ಲಿ ಒಂದು ಮನೆ ಇರಬೇಕೆಂದು ಎಲ್ಲ ನಟ-ನಟಿಯರು ಬಯಸುತ್ತಾರೆ.

ಬಿಟೌನ್ ನ ಚೆಂದುಳ್ಳಿ ಚೆಲುವೆಯೊಬ್ಬಳು ಬರೋಬ್ಬರಿ 35 ಕೋಟಿ ರೂಪಾಯಿಗೆ ಹೊಸ ಫ್ಲಾಟ್ ಖರೀದಿಸಿ ಬಾಂದ್ರಾ ಏರಿಯಾಕ್ಕೆ ಹೊಸ ಎಂಟ್ರಿ ಕೊಟ್ಟಿದ್ದಾರಂತೆ! ಇಷ್ಟು ದಿನ ಸುದ್ದಿಯಾಗದೆ ಸೈಲೆಂಟಾಗಿದ್ದು ಫ್ಲಾಟ್ ಖರೀದಿಸುವ ಮೂಲಕ ಸಖತ್ ಸುದ್ದಿ ಮಾಡಿದ ನಟಿ ಬಾಲಿವುಡ್ ನ ಖೂಬ್ ಸೂರತ್ ಬೆಡಗಿ 'ಸೋನಮ್ ಕಪೂರ್'.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಅತ್ಯಾಧುನಿಕ ಸೌಕರ್ಯ ಹೊಂದಿರುವ, ಬರೋಬ್ಬರಿ 7 ಸಾವಿರ ಸ್ಕ್ವೇರ್ ನ ಫ್ಲಾಟ್ ಗೆ 35 ಕೋಟಿ ರೂಪಾಯಿ ನೀಡಿ ಸೋನಮ್ ತನ್ನದಾಗಿಸಿಕೊಂಡಿದ್ದಾರೆ.

'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಚಿತ್ರೀಕರಣದಲ್ಲಿರುವ ರಾಂಜ್ನಾ ಸುಂದರಿ ಸೋನಮ್ ಕಪೂರ್ ರ ಫ್ಲಾಟ್ ಖರೀದಿ ಸುದ್ದಿಯಿಂದ ಬೇರೆ ಬಾಲಿವುಡ್ ನಟಿಯರು ಬೆರಗಾಗಿದ್ದಂತೂ ಸತ್ಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com