'ಆಶಿಕಿ' ಪ್ರಣಯ ಮರುಕಳಿಸುವವರೆ ಹೃತಿಕ್ ಮತ್ತು ಸೋನಮ್?

ಸಂಗೀತ-ಪ್ರಣಯ ಪ್ರಧಾನ ಸಿನೆಮಾ 'ಆಶಿಕಿ'ಯ ೨೫ನೆಯ ವರ್ಷಾಚರಣೆಯ ಸಂದರ್ಭಕ್ಕೆ ಬಾಲಿವುಡ್ ನಟರಾದ ಹೃತಿಕ್ ರೋಶನ್ ಮತ್ತು ಸೋನಮ್ ಕಪೂರ್ ಅವರು ಟರ್ಕಿಯಲ್ಲಿ 'ಧೀರೆ
'ಧೀರೆ ಧೀರೆ' ಹಾಡಿನ ಮರು ಚಿತ್ರೀಕರಣದಲ್ಲಿ ಹೃತಿಕ್ ಮತ್ತು ಸೋನಮ್
'ಧೀರೆ ಧೀರೆ' ಹಾಡಿನ ಮರು ಚಿತ್ರೀಕರಣದಲ್ಲಿ ಹೃತಿಕ್ ಮತ್ತು ಸೋನಮ್
Updated on: 

ಸಂಗೀತ-ಪ್ರಣಯ ಪ್ರಧಾನ ಸಿನೆಮಾ 'ಆಶಿಕಿ'ಯ ೨೫ನೆಯ ವರ್ಷಾಚರಣೆಯ ಸಂದರ್ಭಕ್ಕೆ ಬಾಲಿವುಡ್ ನಟರಾದ ಹೃತಿಕ್ ರೋಶನ್ ಮತ್ತು ಸೋನಮ್ ಕಪೂರ್ ಅವರು ಟರ್ಕಿಯಲ್ಲಿ 'ಧೀರೆ ಧೀರೆ' ಹಾಡಿನ ಮರು ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ಹಾಡಿನ ಸ್ಟಿಲ್ ಗಳನ್ನು ನಂಬುವುದಾದರೆ ಕ್ಲಾಸಿಕ್ ಪ್ರಣಯ ಮರುಕಳಿಸಿದೆ ಎನ್ನಲಾಗುತ್ತಿದೆ.

ಈ ಸಂಗೀತ-ಪ್ರಣಯ ಪ್ರಧಾನ ಸಿನೆಮಾ ಸಂಭ್ರಮಕ್ಕೆ ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ವಿಡಿಯೋ ಚಿತ್ರೀಕರಣದ ಯೋಜನೆ ಸಿದ್ಧಪಡಿಸಿದ್ದಾರೆ. ಈ ದೃಶ್ಯಗಳ ಹಿಂದೆ ಹೃತಿಕ್ ಹೊಳೆಯುತ್ತಿದ್ದರೆ, ಸೋನಮ್ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ.

ಹೃತಿಕ್ ಮತ್ತು ಸೋನಮ್ ಬೆಳ್ಳಿತೆರೆಯಲ್ಲಿ ಇಲ್ಲಿಯವರೆಗೂ ಒಂದಾಗಿಲ್ಲ. ಆದುದರಿಂದ ಈ ವಿರಳವಾದ ವಿಡಿಯೋದಲ್ಲಿ ಇಬ್ಬರನ್ನೂ ಒಟ್ಟಿಗೆ ತರಲಾಗಿದೆ ಎನ್ನುತ್ತಾರೆ ಭೂಷಣ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com