ಕಮಲ್‍ನ ಮೇಕಪ್ ಕಮಾಲ್!

ಚಿತ್ರರಂಗದಲ್ಲಿ ಮೇಕಪ್‍ಗೆಂದೇ ಪರಿಣತರಿರುತ್ತಾರೆ. ಖ್ಯಾತ, ಹೆಸರಾಂತ ನಟರಿಗೆ ಖಾಸಗಿ...
ಪ್ರಕಾಶ್ ರಾಜ್, ತ್ರಿಶಾ ಮತ್ತು ಕಮಲ್ ಹಾಸನ್ (ಚಿತ್ರ ಕೃಪೆ: ಟ್ವಿಟರ್)
ಪ್ರಕಾಶ್ ರಾಜ್, ತ್ರಿಶಾ ಮತ್ತು ಕಮಲ್ ಹಾಸನ್ (ಚಿತ್ರ ಕೃಪೆ: ಟ್ವಿಟರ್)

ಚಿತ್ರರಂಗದಲ್ಲಿ ಮೇಕಪ್‍ಗೆಂದೇ ಪರಿಣತರಿರುತ್ತಾರೆ. ಖ್ಯಾತ, ಹೆಸರಾಂತ ನಟರಿಗೆ ಖಾಸಗಿ ಮೇಕಪ್ ಮ್ಯಾನ್‍ಗಳಿರುತ್ತಾರೆ. ಆದರೆ ಇಲ್ಲಿ ಖ್ಯಾತ ನಟರೊಬ್ಬರು, ಇನ್ನೊಬ್ಬ ಖ್ಯಾತ ನಟರಿಗೆ ಮೇಕಪ್ ಮಾಡಿದ್ದು ವಿಶೇಷ.
ಹೌದು, ತಮಿಳು ಚಿತ್ರರಂಗದ ಖ್ಯಾತ ನಟ ಕಮಲಹಾಸನ್ `ಥೂಂಗವನಮ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಆ ಚಿತ್ರದಲ್ಲಿ ತ್ರಿಶಾ, ಪ್ರಕಾಶ್ ರೈ, ಕಿಶೋರ್ ಹಾಗೂ ಮನೀಷಾ ಕೊಯಿರಾಲ ಸೇರಿದಂತೆ ಹೊಸ ಪ್ರತಿಭೆಗಳು, ಖ್ಯಾತ ನಟ-ನಟಿಯರು ಕಾಣಿಸಿ ಕೊಳ್ಳುತ್ತಿದ್ದಾರೆ. ಈಗ ವಿಷಯ ಅದಲ್ಲ, ಸ್ವತಃ ಕಮಲ್‍ಹಾಸನ್ ಅವರೇ ಪ್ರಕಾಶ್ ರೈ ಮತ್ತು ನಟಿ ತ್ರಿಶಾ ಅವರಿಗೆ ಮೇಕಪ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ!

ಕಮಲಹಾಸನ್ ಅವರು ಸೆಟ್ ನಲ್ಲೇ ಈ ಇಬ್ಬರು ನಟ, ನಟಿಗೆ ಮೇಕಪ್ ಮಾಡುವ ಮೂಲಕ ಮತ್ತಷ್ಟು ಪ್ರೀತಿಗೆ ಪಾತ್ರರಾಗಿದ್ದಾರೆ. `ಚಿತ್ರರಂಗದ ಖ್ಯಾತ ನಟರೊಬ್ಬರ ಜತೆ ನಟಿಸುತ್ತಿರುವುದೇ ಒಂದು ಖುಷಿ. ಇನ್ನು ಅವರ ಕೈಯಾರೇ ಮೇಕಪ್ ಮಾಡಿಸಿಕೊಳ್ಳುವುದು ಮತ್ತಷ್ಟು ಖುಷಿ ಕೊಡುವ ವಿಷಯ' ಎಂದು ಪ್ರಕಾಶ್ ರೈ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ತ್ರಿಶಾ ಕೂಡ `ಇಂತಹ ಅಪರೂಪದ ನಟರು ನಮಗೆ ಮೇಕಪ್ ಮಾಡಿರುವುದು ಖುಷಿ ಕೊಟ್ಟಿದೆ' ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com