ಸರಿಹೋದ ರಾಮ್‌ಪಾಲ್ ದಾಂಪತ್ಯ

ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್ ಹಾಗೂ ಮೆಹ್ರಾ ಜೆಸಿಯಾ ದಾಂಪತ್ಯದ ಸುತ್ತ ಹಬ್ಬಿದ ವಂದತಿಗಳಿಗೆ ತೆರೆ ಬಿದ್ದಿದೆ.
ಇನ್ಸ್ಟಾಗ್ರಾಮ್ ನಲ್ಲಿ ನಟ ರಾಮ್ ಪಾಲ್ ಪೋಸ್ಟ್ ಮಾಡಿರುವ ತಮ್ಮ ಕುಟುಂಬದ ಚಿತ್ರ (ಚಿತ್ರಕೃಪೆ: ಇನ್ಸ್ಟಾಗ್ರಾಮ್)
ಇನ್ಸ್ಟಾಗ್ರಾಮ್ ನಲ್ಲಿ ನಟ ರಾಮ್ ಪಾಲ್ ಪೋಸ್ಟ್ ಮಾಡಿರುವ ತಮ್ಮ ಕುಟುಂಬದ ಚಿತ್ರ (ಚಿತ್ರಕೃಪೆ: ಇನ್ಸ್ಟಾಗ್ರಾಮ್)

ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್ ಹಾಗೂ ಮೆಹ್ರಾ ಜೆಸಿಯಾ ದಾಂಪತ್ಯದ ಸುತ್ತ ಹಬ್ಬಿದ ವಂದತಿಗಳಿಗೆ ತೆರೆ ಬಿದ್ದಿದೆ.

ಸದ್ಯ‘ರಾಕ್ ಆನ್ ೨’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅರ್ಜುನ್ , ಶಿಲ್ಲಾಂಗ್‌ನಲ್ಲಿ ಪತ್ನಿ ಮೆಹ್ರಾ ಜೆಸಿಯಾ ಮತ್ತು ಇಬ್ಬರು ಮಕ್ಕಳೊಂದಿಗೆ ಗ್ರಾಂಡ್ ಆಗಿ ದೀಪಾವಳಿ ಆಚರಿಸುವ ಮೂಲಕ ಬಾಲಿವುಡ್ ಅಂಗಳದಲ್ಲಿ ಹಬ್ಬಿದ್ದ ವದಂತಿಗಳಿಗೆ ತಾವೇ ತೆರೆ ಎಳೆದಿದ್ದಾರೆ. ಸುಸ್ಸಾನೆಖಾನ್ ತಮ್ಮ ಪತಿ ನಟ ಹೃತಿಕ್ ರೋಷನ್ ಅವರಿಂದ ವಿಚ್ಚೇದನ ಪಡೆದ ನಂತರ ಈಕೆ ಹೆಸರು  ಅರ್ಜುನ್ ರಾಮ್‌ಪಾಲ್‌ನೊಂದಿಗೆ ತಳುಕು ಹಾಕಿಕೊಂಡಿತು. ಈ ಮಧ್ಯೆ ಸುಸ್ಸಾನೆ ಅವರನ್ನು ರಾಮ್ ಪಾಲ್ ಮದುವೆಯಾಗುವುದಾದರೆ, ಮೆಹ್ರಾ ಜೆಸಿಯಾ ಮತ್ತವರ ಮಕ್ಕಳ ಕಥೆಯೇನು? ಇಂಥ  ಪ್ರಶ್ನೆಗಳು ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com