ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಮೊದಲ ಭೋಜಪುರಿ ಸಿನೆಮಾ ಟೀಸರ್

ಬಾಲಿವುಡ್-ಹಾಲಿವುಡ್ ನಟಿ, ಅಮೆರಿಕಾದ ಹಾಲಿವುಡ್ ಧಾರಾವಾಹಿ 'ಕ್ವಾಂಟಿಕೋ' ಮೂಲಕ ಜಾಗತಿಕವಾಗಿ ಹೆಸರು ಮಾಡಿನ ಪ್ರಿಯಾಂಕಾ ಚೋಪ್ರಾ ಈಗ
ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಮೊದಲ ಭೋಜಪುರಿ ಸಿನೆಮಾ ಟೀಸರ್
ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಮೊದಲ ಭೋಜಪುರಿ ಸಿನೆಮಾ ಟೀಸರ್

ಮುಂಬೈ: ಬಾಲಿವುಡ್-ಹಾಲಿವುಡ್ ನಟಿ, ಅಮೆರಿಕಾದ ಹಾಲಿವುಡ್ ಧಾರಾವಾಹಿ 'ಕ್ವಾಂಟಿಕೋ' ಮೂಲಕ ಜಾಗತಿಕವಾಗಿ ಹೆಸರು ಮಾಡಿನ ಪ್ರಿಯಾಂಕಾ ಚೋಪ್ರಾ ಈಗ ನಿರ್ಮಾಣಕ್ಕೂ ಇಳಿದಿದ್ದಾರೆ.

ನಟಿಯ ನಿರ್ಮಾಣ ಸಂಸ್ಥೆ 'ಪರ್ಪಲ್ ಪೆಬ್ಬಲ್ ಪಿಕ್ಚರ್ಸ್' ಮೂರು ಪ್ರಾದೇಶಿಕ ಸಿನೆಮಾಗಳಿಗೆ ಚಾಲನೆ ನೀಡಿದ್ದು 'ಬಂ ಬಂ ಬೋಲ್ ರಹಾ ಹೈ ಕಾಶಿ' ಎಂಬ ಭೋಜಪುರಿ ಸಿನೆಮಾ ಕೂಡ ಒಂದು.

ಈಗ ಈ ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ಭೋಜಪುರಿಯ ಖ್ಯಾತ ತಾರೆಗಳಾದ ದಿನೇಶ್ ಲಾಲ್ ನಿರಹು ಮತ್ತು ಅಮ್ರಾಲಿ ದುಬೆ ಈ ಸಿನೆಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

'ದೇಸಿ ಗರ್ಲ್' ನಟಿಗೆ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಧಾನವಾಗಿತ್ತು ಮತ್ತೀಗ ಹಾಲಿವುಡ್ ಸಿನೆಮಾ 'ಬೇವಾಚ್' ನಲ್ಲಿ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದು ಹಾಲಿವುಡ್ ನಟರಾದ ಡ್ವೇಯ್ನ್ ಜಾನ್ಸನ್ ಮತ್ತು ಜ್ಯಾಕ್ ಎಫ್ರನ್ ಎದುರು ನಟಿಸಲಿದ್ದಾರೆ. ಇದು ಅವರ ಋಣಾತ್ಮಕ ಪಾತ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com