ದೇಶ ವಿಭಜನೆ ಸಿನೆಮಾ 'ಬೇಗಂ ಜಾನ್' ನಲ್ಲಿ ನಟಿಸಲಿರುವ ವಿದ್ಯಾ ಬಾಲನ್

ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಸಿನೆಮಾದಲ್ಲಿ ವೇಶ್ಯಾಗೃಹದ ಮೇಡಮ್ ಪಾತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸಲು ಸಿದ್ಧರಾಗಿದ್ದಾರೆ.
ಬಾಲಿವುಡ್ ನಟಿ ವಿದ್ಯಾ ಬಾಲನ್
ಬಾಲಿವುಡ್ ನಟಿ ವಿದ್ಯಾ ಬಾಲನ್
Updated on: 

ಕರಾಚಿ: ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಸಿನೆಮಾದಲ್ಲಿ ವೇಶ್ಯಾಗೃಹದ ಮೇಡಮ್ ಪಾತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸಲು ಸಿದ್ಧರಾಗಿದ್ದಾರೆ.

ಬೆಂಗಾಲಿ ದೇಶ ವಿಭಜನೆ ಕಥೆ 'ರಾಜ್ ಕಹಿನಿ'ಯ ಹಿಂದಿ ರಿಮೇಕ್ ಇದಾಗಿದ್ದು, ಶ್ರೀಜಿತ್ ಮುಖರ್ಜಿ ಇದನ್ನು ನಿರ್ದೇಶಿಸುತ್ತಿದ್ದಾರೆ ಎಂದು ಡಾನ್ ವರದಿ ಮಾಡಿದೆ.

ಮಹೇಶ್ ಭಟ್ ನಿರ್ಮಿಸುತ್ತಿರುವ ಈ ಸಿನೆಮಾ ದೇಶ ವಿಭಜನೆಯಿಂದ ವೇಶ್ಯಾಗೃಹದ ಸ್ತ್ರೀಯರಿಗಾದ ತೊಂದರೆಗಳು ಮತ್ತು ಗಡಿ ಎಳೆದ ಮೇಲೆ ಅವರು ಸೇರಿದ ದೇಶಗಳಲ್ಲಿ ಅವರ ಮೇಲೆ ಉಂಟಾದ ಪರಿಣಾಮಗಳನ್ನು ಚರ್ಚಿಸುತ್ತದೆ. ಮೂಲ ಬೆಂಗಾಲಿ ಸಿನೆಮಾದಲ್ಲಿ ಬೇಗಂ ಜಾನ್ ಪಾತ್ರದಲ್ಲಿ ಖ್ಯಾತ ನಟಿ ರಿತುಪರ್ಣೊ ಸೇನಗುಪ್ತಾ ಕಾಣಿಸಿಕೊಂಡಿದ್ದರು.

ಚಿತ್ರೀಕರಣ ಜೂನ್ ನಲ್ಲಿ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಘೋಷಿಸಿದ್ದಾರೆ.

'ರಾಜ್ ಕಹಿನಿ' ಹಿಂದೆ ರಿಮೇಕ್ ಮಾಡಲಿದ್ದು ಬೇಗಂ ಜಾನ್ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸಲಿದ್ದಾರೆ ಎಂದು ಮುಖರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com