ರುಸ್ತುಂ ಬಾಕ್ಸ್ ಆಫೀಸ್ ಕಲೆಕ್ಷನ್: 2ನೇ ದಿನಕ್ಕೆ 30.54 ಕೋಟಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ರುಸ್ತುಂ ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನ ದೇಶಾದ್ಯಂತ ತೆರೆಕಂಡಿದ್ದು...
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Updated on

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ರುಸ್ತುಂ ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನ ದೇಶಾದ್ಯಂತ ತೆರೆಕಂಡಿದ್ದು, ಎರಡು ದಿನದಲ್ಲಿ 30.54 ಕೋಟಿ ರುಪಾಯಿ ಕಲೆ ಹಾಕಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಚಿತ್ರ ಬಿಡುಗಡೆಯಾದ ಮೊದಲ ದಿನ 14.11 ಕೋಟಿ ಕಲೆ ಹಾಕಿದ್ದು, ಎರಡನೇ ದಿನ 16.43 ಕೋಟಿ ರುಪಾಯಿ ಗಳಿಸಿದೆ. ಒಟ್ಟಾರೆ 30.54 ಕೋಟಿಯೊಂದಿಗೆ ಚಿತ್ರ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಇನ್ನು ಭಾನುವಾರ ರಜೆ ದಿನವಾಗಿದ್ದು, ಸೋಮವಾರ ಸ್ವಾತಂತ್ಯ ದಿನಾಚರಣೆ ಹಿನ್ನೆಲೆಯಲ್ಲಿ ಚಿತ್ರ ಮತ್ತಷ್ಟು ಗಳಿಕೆ ಕಾಣಲಿದೆ ಎಂದು ಬಾಲಿವುಡ್ ಪಂಡಿತರ ಲೆಕ್ಕಚಾರವಾಗಿದೆ.

2016 ಅಕ್ಷಯ್ ಕುಮಾರ್ ಅವರಿಗೆ ಲಕ್ಕಿ ವರ್ಷವಾದಂತಿದೆ. ಬಿಡುಗಡೆಯಾದ ಅತ್ಯುತ್ತಮ ಐದು ಚಿತ್ರಗಳಲ್ಲಿ ಅಕ್ಷಯ್ ಅವರು ಎರಡು ಚಿತ್ರಗಳು ಸ್ಥಾನ ಪಡೆದಿವೆ. ಅವರ ನಟನೆಯ ಹೌಸ್ ಫುಲ್ 3 ಚಿತ್ರ ಮೊದಲ ದಿನ 15.21 ಕೋಟಿ ಗಳಿಸಿತ್ತು. ಇನ್ನು ಏರ್ ಲೀಫ್ಟ್ ಚಿತ್ರ 12.35 ಕೋಟಿ ಗಳಿಸಿದ್ದು, ಎರಡು ಚಿತ್ರಗಳು 100 ಕೋಟಿ ಕ್ಲಬ್ ಸೇರಿದ್ದವು. ಇದೀಗ ರುಸ್ತುಂ ಸಹ ಬಿಗ್ ಓಪನಿಂಗ್ ಪಡೆದುಕೊಂಡಿದ್ದು 100 ಕೋಟಿ ಕಬ್ಲ್ ಸೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com