ಬಾಲಿವುಡ್ ನಲ್ಲಿ ಮತ್ತೆ ಒಂದಾಗಲಿದೆ "ಘಜಿನಿ" ಜೋಡಿ

ಘಜಿನಿ ಚಿತ್ರದ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಅಮೀರ್ ಖಾನ್ ಹಾಗೂ ನಿರ್ದೇಶಕ ಎಆರ್ ಮುರುಗದಾಸ್ ಜೋಡಿ ಮತ್ತೆ ಒಂದಾಗಿದ್ದು, ಹೊಸದೊಂದು ಚಿತ್ರನಿರ್ಮಾಣಕ್ಕೆ ಈ ಜೋಡಿ ಒಪ್ಪಿಗೆ ಸೂಚಿಸಿದೆ.
ಅಮೀರ್ ಖಾನ್ ಹಾಗೂ ನಿರ್ದೇಶಕ ಮುರುಗದಾಸ್ (ಸಂಗ್ರಹ ಚಿತ್ರ)
ಅಮೀರ್ ಖಾನ್ ಹಾಗೂ ನಿರ್ದೇಶಕ ಮುರುಗದಾಸ್ (ಸಂಗ್ರಹ ಚಿತ್ರ)
Updated on

ಮುಂಬೈ: ಘಜಿನಿ ಚಿತ್ರದ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಅಮೀರ್ ಖಾನ್ ಹಾಗೂ ನಿರ್ದೇಶಕ ಎಆರ್ ಮುರುಗದಾಸ್ ಜೋಡಿ ಮತ್ತೆ ಒಂದಾಗಿದ್ದು, ಹೊಸದೊಂದು  ಚಿತ್ರನಿರ್ಮಾಣಕ್ಕೆ ಈ ಜೋಡಿ ಒಪ್ಪಿಗೆ ಸೂಚಿಸಿದೆ.

ಮೂಲಗಳ ಪ್ರಕಾರ ಈ ಹಿಂದೆ ಅಮೀರ್ ಜೊತೆಗೂಡಿ ಘಜಿನಿ ಚಿತ್ರ ನಿರ್ದೇಶಿಸಿದ್ದ ಎರ್ ಆರ್ ಮುರುಗದಾಸ್ ಅವರೇ ಮತ್ತೆ ಅಮೀರ್ ಖಾನ್ ರನ್ನು ಭೇಟಿ ಮಾಡಿ ಹೊಸದೊಂದು ಚಿತ್ರ ಮಾಡುವ   ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಮೀರ್ ಖಾನ್ ಮುರುಗದಾಸ್ ಅವರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಾರಂತೆ. ಹೀಗಾಗಿ ನಿರ್ದೇಶಕ ಮುರುಗದಾಸ್  ಅಮೀರ್ ಖಾನ್ ಗಾಗಿಯೇ ವಿಶೇಷ ಸ್ಕ್ರಿಪ್ಟ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರಂತೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ನಿರ್ದೇಶಕ ಮುರುಗದಾಸ್ ಅವರು, ಅಮೀರ್ ಖಾನ್ ಅವರು ತಾವು ಒಪ್ಪಿಕೊಳ್ಳುವ ಯಾವುದೇ ಚಿತ್ರದಲ್ಲಿ ತೀರಾ ತಲ್ಲೀನರಾಗಿ ಕೆಲಸ  ಮಾಡುತ್ತಾರೆ. ಹೀಗಾಗಿ ಅವರಂತೆಯೇ ನಾನು ಕೂಡ ತುಂಬಾ ಗಂಭೀರನಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

"ಇತ್ತೀಚೆಗಷ್ಟೇ ಅಮೀರ್ ಖಾನ್ ರನ್ನು ಭೇಟಿ ಮಾಡಿದ್ದೆ. ಈ ವೇಳೆ ಹೊಸದೊಂದು ಚಿತ್ರ ಮಾಡುವ ಕುರಿತು ಬೇಡಿಕೆ ಇಟ್ಟಿದ್ದೆ. ಅದಕ್ಕೆ ಅಮೀರ್ ಖಾನ್ ಅವರು ತುಂಬುಹೃದಯದಿಂದ ಒಪ್ಪಿಗೆ  ಸೂಚಿಸಿದ್ದಾರೆ. ಪ್ರಸ್ತುತ ಅವರು ದಂಗಲ್ ಚಿತ್ರದಲ್ಲಿ ಬಿಸಿಯಾಗಿದ್ದು, ಅವರ ಡೇಟ್ಸ್ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. ಅಷ್ಟು ಹೊತ್ತಿಗೆ ನಾನು ಸ್ಕ್ರಿಪ್ಟ್ ಕೆಲಸ ಪೂರ್ಣ ಮಾಡುತ್ತೇನೆ.  ಶೀಘ್ರದಲ್ಲೇ ನಾನು ಮತ್ತು ಅಮೀರ್ ಖಾನ್ ಅವರ ಚಿತ್ರ ಸೆಟ್ಟೇರುವುದು ಖಚಿತ ಎಂದು ಮುರುಗದಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com