ಸಲ್ಮಾನ್ ಖಾನ್ ಕುಟುಂಬದ ಮತ್ತೊಂದು ಜೋಡಿ ವಿಚ್ಛೇದನದತ್ತ..?

ಅರ್ಬಾಜ್- ಮಲೈಕಾ ಬಳಿಕ ಸಲ್ಮಾನ್ "ಖಾನ್"ದಾನ್ ನ ಮತ್ತೊಂದು ಜೋಡಿ ವಿಚ್ಛೇದನದತ್ತ ಮುಖ ಮಾಡಿದೆ ಎಂಬ ಊಹಾಪೋಹಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿವೆ...
ಸೊಹೇಲ್ ಮತ್ತು ಸೀಮಾ ಖಾನ್ (ಸಂಗ್ರಹ ಚಿತ್ರ)
ಸೊಹೇಲ್ ಮತ್ತು ಸೀಮಾ ಖಾನ್ (ಸಂಗ್ರಹ ಚಿತ್ರ)

ಮುಂಬೈ: ಅರ್ಬಾಜ್- ಮಲೈಕಾ ಬಳಿಕ ಸಲ್ಮಾನ್ "ಖಾನ್"ದಾನ್ ನ ಮತ್ತೊಂದು ಜೋಡಿ ವಿಚ್ಛೇದನದತ್ತ ಮುಖ ಮಾಡಿದೆ ಎಂಬ ಊಹಾಪೋಹಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿವೆ.

ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಮತ್ತು ಪತ್ನಿ ಸೀಮಾ ಖಾನ್ ನಡುವೆ ಉಂಟಾಗಿರುವ ಕೌಟುಂಬಿಕ ಬಿಕ್ಕಟ್ಟು ತಾರಕ್ಕೇರಿದ್ದು, ಸೀಮಾ ಬಾಂದ್ರಾದಲ್ಲಿರುವ  ತಮ್ಮ ಪತಿ ನಿವಾಸವನ್ನು ತೊರೆದು ಪೋಷಕರೊಂದಿಗೆ ಜೀವಿಸುತ್ತಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸೀಮಾ ಮತ್ತು ಸೊಹೇಲ್ ನಡುವಿನ ಜಗಳಕ್ಕೆ ಕಾರಣವೇನು  ಎಂದು ತಿಳಿದುಬಂದಿಲ್ಲವಾದರೂ, ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ.

ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ನಡೆದ ಸಹೋದರಿ ಅರ್ಪಿತಾ ಖಾನ್ ಮಗುವಿನ ಕಾರ್ಯಕ್ರಮದಲ್ಲಿಯೂ ಈ ಜೋಡಿ ಗೈರು ಹಾಜರಾಗಿತ್ತು. ಇದು ಸಾಕಷ್ಟು ಊಹಾಪೋಹಗಳಿಗೆ  ಕಾರಣವಾಗಿತ್ತು. ಇದೇ ಕಾರ್ಯಕ್ರಮಕ್ಕೆ ಮಲೈಕಾ ಮತ್ತು ಅರ್ಬಾಜ್ ಖಾನ್ ಜೋಡಿ ಕೂಡ ಗೈರು ಹಾಜರಾಗಿತ್ತು. ಅರ್ಬಾಜ್-ಮಲೈಕಾ ಬಳಿಕ ಸೊಹೇಲ್- ಸೀಮಾ ಕೂಡ ವಿಚ್ಛೇದನದತ್ತ ಮುಖ  ಮಾಡಿರುವುದು ಸಲ್ಮಾನ್ "ಖಾನ್"ದಾನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಕುಟುಂಬದ ಮೂಲಗಳಿಂದ ಮಾತ್ರ ಈ  ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com