ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ; ನಟಿ ಕೃತಿ ಸನೋನ್ ಕೆಂಡಾಮಂಡಲ

ವಿಮಾನದಲ್ಲಿ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದ ಸಹ ಪ್ರಯಾಣಿಕನ ವಿರುದ್ಧ ನಟಿ ಕೃತಿ ಸನೋನ್ ಕೆಂಡಾಮಂಡಲರಾಗಿದ್ದು, ಚಿತ್ರ ವೀಕ್ಷಣೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ...
ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ ಮಾಡುತ್ತಿರುವ ಪ್ರಯಾಣಿಕ(ಚಿತ್ರಕೃಪೆ: ಟ್ವಿಟ್ಟರ್)
ವಿಮಾನದಲ್ಲಿ ದಿಲ್ ವಾಲೆ ಚಿತ್ರ ವೀಕ್ಷಣೆ ಮಾಡುತ್ತಿರುವ ಪ್ರಯಾಣಿಕ(ಚಿತ್ರಕೃಪೆ: ಟ್ವಿಟ್ಟರ್)

ಮುಂಬೈ: ವಿಮಾನದಲ್ಲಿ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದ ಸಹ ಪ್ರಯಾಣಿಕನ ವಿರುದ್ಧ ನಟಿ ಕೃತಿ ಸನೋನ್ ಕೆಂಡಾಮಂಡಲರಾಗಿದ್ದು, ಚಿತ್ರ ವೀಕ್ಷಣೆಯ ಚಿತ್ರಗಳನ್ನು  ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ದೆಹಲಿಗೆ ತಮ್ಮ ತಾಯಿಯೊಂದಿಗೆ ಪ್ರಯಾಣ ಬೆಳೆಸಿದ್ದ ನಟಿ ಕೃತಿ ಸನೋನ್ ವಿಮಾನದಲ್ಲಿ ಸಹ ಪ್ರಯಾಣಿಕರೊಬ್ಬರು ಅತ್ಯಾಧುನಿಕ ಐಫೋನ್ ಬಳಕೆ ಮಾಡಿ ಅದರಲ್ಲಿರುವ  ಪ್ರೊಜೆಕ್ಟರ್ ತಂತ್ರಜ್ಞಾನದ ಮೂಲಕ ವಿಮಾನದಲ್ಲಿಯೇ ದಿಲ್ ವಾಲೆ ಚಿತ್ರದ ಪೈರಸಿ ವೀಕ್ಷಣೆ ಮಾಡುತ್ತಿದ್ದರು. ಇದರಿಂದ ಕುಪಿತಗೊಂಡ ಕೃತಿ ಚಿತ್ರ ವೀಕ್ಷಣೆಯ ಚಿತ್ರಗಳನ್ನು ಸೆರೆಹಿಡಿದು ಟ್ವಿಟರ್  ನಲ್ಲಿ ಹರಿ ಬಿಟ್ಟಿದ್ದಾರೆ. ಅಲ್ಲದೆ ಚಿತ್ರ ವೀಕ್ಷಣೆ ಮಾಡುತ್ತಿದ್ದ ಪ್ರಯಾಣಿಕನ ವಿರುದ್ಧ ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com