ಪಾರ್ಕಿಂಗ್ ಜಾಗಕ್ಕಾಗಿ ಕಿತ್ತಾಟ: ಮಹಿಳೆ ಮೇಲೆ ನಟ ನವಾಜುದ್ದೀನ್ ಸಿದ್ಧಕಿಯಿಂದ ಹಲ್ಲೆ

ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಕಿ ಗೆ ಸಂಕಷ್ಟ ಎದುರಾಗಿದೆ. ಪಾರ್ಕಿಂಗ್ ಜಾಗದ ವಿಷಯವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಿದ್ಧಕಿ ವಿರುದ್ಧ ದೂರು ದಾಖಲಾಗಿದೆ....
ನವಾಜುದ್ದೀನ್ ಸಿದ್ಘಕಿ
ನವಾಜುದ್ದೀನ್ ಸಿದ್ಘಕಿ

ಮುಂಬಯಿ: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಕಿ ಗೆ ಸಂಕಷ್ಟ ಎದುರಾಗಿದೆ. ಪಾರ್ಕಿಂಗ್ ಜಾಗದ ವಿಷಯವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಿದ್ಧಕಿ ವಿರುದ್ಧ ದೂರು ದಾಖಲಾಗಿದೆ.

ಮುಂಬಯಿ ವರ್ಸೋವಾ ಪೊಲೀಸರು ನವಾಜುದ್ದೀನ್ ಸಿದ್ಘಕಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

ಮುಂಬಯಿಯ ವರ್ಸೋವಾದಲ್ಲಿರುವ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿರುವ ನವಾಜುದ್ದೀನ್ ಸಿದ್ಧಕಿ ಕಳೆದ ಒಂದು ವರ್ಷದಿಂದ ಪಾರ್ಕಿಂಗ್ ಜಾಗವನ್ನು ಆಕ್ರಮಿಸಿದ್ದಾರೆ. ಇದರಿಂದ ಇತರರಿಗೂ ಪಾರ್ಕಿಂಗ್ ಮಾಡಲು ಸ್ಥಳದ ಅಭಾವವುಂಟಾಗಿ, ತೊಂದರೆಯಾಗುತ್ತಿದೆ. ನವಾಜುದ್ದೀನ್ ಸಿದ್ಧಕಿ ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಿರುವುದನ್ನು ಫೋಟೋ ತೆಗೆಯಲು ಹೋದ ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com