ಬಾಲಿವುಡ್

ಈದ್ ಉಡುಗೊರೆಯಾಗಿ ಮಗನಿಗೆ 2ರೂ ನೀಡಿದ ಆಮೀರ್ ಖಾನ್ !

ದೇಶದಲ್ಲೆ ಅತೀ ಹೆಚ್ಚು ಸಂಭಾವನೆ ಗಳಿಸುವ ನಟ ಅಮೀರ್ ಖಾನ್ ತಮ್ಮ ಮಗನಿಗೆ ರಂಜಾನ್ ಉಡುಗೊರೆಯಾಗಿ 2 ರೂ ನೀಡಿದ್ದಾರಂತೆ. ...

ಈದ್ ಉಡುಗೊರೆಯಾಗಿ ಮಗನಿಗೆ 2ರೂ ನೀಡಿದ ಆಮೀರ್ ಖಾನ್ !
ಅಮೀರ್ ಖಾನ್
Published On :

ಮುಂಬೈ: ದೇಶದಲ್ಲೆ ಅತೀ ಹೆಚ್ಚು ಸಂಭಾವನೆ ಗಳಿಸುವ ನಟ ಅಮೀರ್ ಖಾನ್ ತಮ್ಮ ಮಗನಿಗೆ ರಂಜಾನ್ ಉಡುಗೊರೆಯಾಗಿ 2 ರೂ ನೀಡಿದ್ದಾರಂತೆ.

ಈದ್ ಹಬ್ಬದ ನಿಮಿತ್ತ ತಮ್ಮ ತಾಯಿಯ ಮನೆಯಲ್ಲಿ ಮಾಧ್ಯಮದವರೊಂದಿಗೆ ಆಮೀರ್ ಖಾನ್ ಮಾತಾನಾಡಿದರು. ಈ ವೇಳೆ  ಕುಟುಂಬದ ಸದಸ್ಯರಿಗೆ ಏನು ಉಡುಗೊರೆ ನೀಡಿದ್ದಿರಾ? ಎಂದು ಕೇಳಿದ್ದಕ್ಕೆ ಆಮೀರ್, ತಮ್ಮ ಪತ್ನಿ ಹಾಗೂ ಮಗ ಈಗ ಯುರೋಪ್ ಪ್ರವಾಸದಲ್ಲಿದ್ದಾರೆ. ಮಗ ಅಜದ್ ರಾವ್​ಗೆ ಎರಡು ರೂಪಾಯಿ ಉಡುಗೊಗೆ ರೂಪದಲ್ಲಿ ನೀಡಿದ್ದೇನೆ ಎಂದಿದ್ದಾರೆ.

ಎರಡು ರೂಪಾಯಿ ನೀಡಿರುವುದಕ್ಕೆ ಕಾರಣ ತಿಳಿಸಿದ ಆಮೀರ್, ಮಗನಿಗೆ ಅಧಿಕ ಹಣ ನೀಡಿ ಹಾಳಾಗಲು ಬಿಡುವುದಿಲ್ಲ. ನಾನು ಚಿಕ್ಕವನಿರುವಾಗ ಈ ರೀತಿ ಈದ್ ಉಡುಗೊರೆ ಪಡೆಯುತ್ತಿದ್ದೆ. ಆದರೆ ಈ ರೀತಿ ಮಗನಿಗೆ ಹೆಚ್ಚಿನ ಹಣ ನೀಡಲು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಗನ ಶಾಲೆಗೆ ರಜೆ ಇರುವುದರಿಂದ ಕಿರಣ್ ರಾವ್ ಮತ್ತು ಅಜದ್ ಯರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಕೆಲಸ ನಿಮಿತ್ತ ತಾವು ಪ್ರವಾಸಕ್ಕೆ ತೆರಳಲು ಆಗಲಿಲ್ಲ ಎಂದು ಆಮೀರ್ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.