ಸಲ್ಮಾನ್ ಮನೆಯಲ್ಲಿ ಲೂಲಿಯಾ ಪತ್ತೆ; ಲಿವಿಂಗ್ ಟುಗೆದರ್ ನಲ್ಲಿರುವ ಗುಮಾನಿ

ಸಲ್ಮಾನ್ ಖಾನ್ ಗರ್ಲ್‌ಫ್ರೆಂಡ್ ಲೂಲಿಯಾ ವಂಚೂರ್ ತನ್ನ ಬಾಂದ್ರಾದಲ್ಲಿರುವ ಸಲ್ಮಾನ್ ನಿವಾಸದ ಬಳಿ ಮನೆ ಖರೀದಿಸಲು...
ಸಲ್ಮಾ ನ್ ಖಾನ್-ಲೂಲಿಯಾ ವಂಚೂರ
ಸಲ್ಮಾ ನ್ ಖಾನ್-ಲೂಲಿಯಾ ವಂಚೂರ
Updated on

ನವದೆಹಲಿ: ಸಲ್ಮಾನ್ ಖಾನ್ ಗರ್ಲ್‌ಫ್ರೆಂಡ್ ಲೂಲಿಯಾ ವಂಚೂರ್ ತನ್ನ ಬಾಂದ್ರಾದಲ್ಲಿರುವ ಸಲ್ಮಾನ್ ನಿವಾಸದ ಬಳಿ ಮನೆ ಖರೀದಿಸಲು ಯೋಚಿಸುತ್ತಿದ್ದಾರಂತೆ.
ಬಾಲಿವುಡ್ ಮೂಲಗಳ ಪ್ರಕಾರ ಲೂಲಿಯಾ ಸದ್ಯ ಬಾಂದ್ರಾದ ಸಲ್ಮಾನ್ ನ ಗೆಲ್ಯಾಕ್ಸಿ ಅಪಾರ್ಟ್ ಮೆಂಟಿನಲ್ಲಿದ್ದಾರೆ. ಈ ಮನೆಯ ಪಕ್ಕದಲ್ಲಿ ಲೂಲಿಯಾ ಅಪಾರ್ಟ್ ಮೆಂಟ್ ಖರೀದಿ ಮಾಡುತ್ತಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಮೂಲದಿಂದ ಹೊರಬಂದಿರುವ ಇನ್ನೊಂದು ವಿಚಾರವೆಂದರೆ ಸಲ್ಮಾನ್ ಮತ್ತು ಲೂಲಿಯಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದು. ಮಾಧ್ಯಮಗಳಿಗೆ ಸಿಕ್ಕಿರುವ ಫೋಟೋವೊಂದರಲ್ಲಿ ಸಲ್ಮಾನ್ ಮತ್ತು ಲೂಲಿಯಾ ನಿಂತಿರುವ ಫೋಟೋದ ಹಿಂದಿನ ಪರದೆ ಒಂದೇ ಆಗಿದೆ. ಅದು ಸಲ್ಮಾನ್ ಖಾನ್ ಮನೆಯಲ್ಲಿ ತೆಗೆದ ಚಿತ್ರ, ಹಾಗಾಗಿ ಅವರು ಲಿವಿಂಗ್ ಟುಗೆದರ್ ನಲ್ಲಿದ್ದಾರೆಯೇ ಎಂಬ ಗುಮಾನಿ ಹಬ್ಬಿದೆ.

ಇತ್ತೀಚೆಗೆ ಸಲ್ಮಾನ್ ಹಾಗೂ ಲೂಲಿಯಾ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮೊನ್ನೆ ನಡೆದಿದ್ದ ಪ್ರೀತಿ ಜಿಂಟಾ ರಿಸೆಪ್ಷನ್ ವೇಳೆ ಸಲ್ಮಾನ್ ಲೂಲಿಯಾ ಜತೆಗೆ ಪಾರ್ಟಿಗೆ ಬಂದಿದ್ದರು. ಲೂಲಿಯಾ 'ಸುಲ್ತಾನ್' ಚಿತ್ರದ ಸೆಟ್‌ಗೆ ಭೇಟಿ ನೀಡಿದ್ದರು. ಇನ್ನು ಸುಲ್ತಾನ್ ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ನಟಿ ಅನುಷ್ಕಾ ಶರ್ಮ ಲೂಲಿಯಾಗೆ ಪಾರ್ಟಿ ಕೊಡುವ ಆಲೋಚನೆಯಲ್ಲಿದ್ದಾರಂತೆ.

 ಮೂಲಗಳ ಪ್ರಕಾರ ಸಲ್ಮಾನ್ ಇದೇ ವರ್ಷ ಡಿಸೆಂಬರ್ 27ಕ್ಕೆ ಮದುವೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸಲ್ಮಾನ್ ಮುಂಬರುವ ಚಿತ್ರ  'ಸುಲ್ತಾನ್' ತೆರೆಗೆ ಬರಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com