ದಿ ಜಂಗಲ್ ಬುಕ್‌ ಹಿಂದಿ ಆವೃತಿಗೆ ಧ್ವನಿಯಾದ ಬಾಲಿವುಡ್ ತಾರೆಯರು

ಹಾಲಿವುಡ್ ನ ದಿ ಜಂಗಲ್ ಬುಕ್ ಹಿಂದಿ ಡಬ್ಬಿಂಗ್ ಆವೃತಿಗೆ ಬಾಲಿವುಡ್ ನ ನಟ ಇರ್ಫಾನ್ ಖಾನ್, ಪ್ರಿಯಾಂಕ ಚೋಪ್ರಾ, ನಾನಾ ಪಾಟೇಕರ್, ಶೆಫಾಲಿ ಶಾಹ್ ಮತ್ತು ಓಂ ಪುರಿ ಧ್ವನಿಯಾಗಲಿದ್ದಾರೆ....
ದಿ ಜಂಗಲ್ ಬುಕ್
ದಿ ಜಂಗಲ್ ಬುಕ್

ಹಾಲಿವುಡ್ ನ ದಿ ಜಂಗಲ್ ಬುಕ್ ಹಿಂದಿ ಡಬ್ಬಿಂಗ್ ಆವೃತಿಗೆ ಬಾಲಿವುಡ್ ನ ನಟ ಇರ್ಫಾನ್ ಖಾನ್, ಪ್ರಿಯಾಂಕ ಚೋಪ್ರಾ, ನಾನಾ ಪಾಟೇಕರ್, ಶೆಫಾಲಿ ಶಾಹ್ ಮತ್ತು ಓಂ ಪುರಿ ಧ್ವನಿಯಾಗಲಿದ್ದಾರೆ.

ಭಾರತ ಮೂಲದ ಅಮೆರಿಕ ನಟ ನೀಲ್ ಸೇತಿ ದಿ ಜಂಗಲ್ ಬುಕ್ ನ ಪ್ರಮುಖ ಮೊಗ್ಲಿ ಪಾತ್ರದಲ್ಲಿ ನಟಿಸುತ್ತಿದ್ದು ಡಿಸ್ನಿ ಇಂಡಿಯಾ ಸಂಸ್ಥೆ ತಯಾರಿಸುತ್ತಿದೆ. ಏಪ್ರಿಲ್ 8ಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ದಿ ಜಂಗಲ್ ಬುಕ್ ಚಿತ್ರ ವಾರದ ನಂತರ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ತೆರೆ ಕಾಣಲಿದೆ.

ಕ್ವಾಂಟಿನೋ ಹಾಗೂ ಬೇ ವಾಚ್ ಚಿತ್ರಗಳ ಮೂಲಕ ಹಾಲಿವುಡ್ ನಲ್ಲಿ ಬಿಸಿಯಾಗಿರುವ ಪ್ರಿಯಾಂಕ ಚೋಪ್ರಾ ಇಂಗ್ಲೀಷ್ ನಲ್ಲಿ ಪೈಥಾನ್ ಕಾ ಪಾತ್ರಕ್ಕೆ ಸ್ಕಾರ್ಲೆಟ್ ಜಾನ್ಸನ್ ಕಂಠ ದಾನ ಮಾಡಿದ್ದು, ಹಿಂದಿ ಆವೃತ್ತಿಗೆ ಪ್ರಿಯಾಂಕ ಚೋಪ್ರ ಮಾಡುತ್ತಿದ್ದಾರೆ.

ಇನ್ನು ಚಿತ್ರದಲ್ಲಿ ಬರುವ ಕರಡಿ ಬಾಲು ಪಾತ್ರಕ್ಕೆ ಇರ್ಫಾನ್ ಖಾನ್ ಧ್ವನಿ ನೀಡುತ್ತಿದ್ದು, ಮೊಗ್ಲಿಯನ್ನು ದತ್ತು ತೆಗೆದುಕೊಳ್ಳುವ ರಕ್ಷಾ(ತೋಳ) ಪಾತ್ರಕ್ಕೆ ಶೆಫಾಲಿ ಶಾ ಧ್ವನಿಯಾಗುತ್ತಿದ್ದಾರೆ.

ಸಿನಿಮಾದಲ್ಲಿ ಇಂಗ್ಲೀಷ್ ಆವೃತ್ತಿಗೆ ಬೆನ್‌ ಕಿಂಗ್ಸ್‌ಲೇ, ಬಿಲ್‌ ಮುರ್ರೇ, ಸ್ಕಾರ್ಲೆಟ್‌ ಜಾನ್ಸನ್‌, ಇರ್ದಿಸ್‌ ಎಲ್ಬಾ ಮತ್ತು ಕ್ರಿಸ್ಟೋಫರ್‌ ವಾಕೆನ್‌ ಅವರು ವಿವಿಧ ಪಾತ್ರಗಳಿಗೆ ಕಂಠ ದಾನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com