ಅಭಿಮಾನಿಯ ಟ್ರೈಲರ್ ಮೆಚ್ಚಿ ಆತನಿಗೆ ಉದ್ಯೋಗವಕಾಶ ನೀಡಿದ ಕಿಂಗ್ ಖಾನ್

ಫ್ಯಾನ್ ಚಿತ್ರದಲ್ಲಿರುವ ಗೌರವ್ ಚನ್ನಾ ಎಂಬ ಪಾತ್ರವನ್ನು ಬದಲಿಸಿ ಅದರಲ್ಲಿ ಶಿವಂ ಜೆಮಿನಿ ಎಂಬ ವಿಎಫ್‌ಎಕ್ಸ್ ಕಲಾವಿದ...
ಶಾರುಖ್ ಖಾನ್
ಶಾರುಖ್ ಖಾನ್
Updated on
ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜಗತ್ತಿನಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಶಾರುಖ್‌ನ ಬಹು ನಿರೀಕ್ಷಿತ ಚಿತ್ರ ಫ್ಯಾನ್. ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸಿದ್ದು, ಅಭಿಮಾನಿಯೊಬ್ಬನ ಕಥೆ ಹೇಳುವ ಚಿತ್ರವಾಗಿದೆ ಇದು. 
ಫ್ಯಾನ್ ಚಿತ್ರದ ಟ್ರೈಲರ್ ಈಗಾಗಲೇ ಬಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದು, ಶಾರುಖ್ ಅಭಿಮಾನಿಯೊಬ್ಬ ಈ ಟ್ರೈಲರ್‌ನ್ನೇ ಪುನರ್ ಸೃಷ್ಟಿಸಿದ್ದನು. ಫ್ಯಾನ್ ಚಿತ್ರದಲ್ಲಿರುವ ಗೌರವ್ ಚನ್ನಾ ಎಂಬ ಪಾತ್ರವನ್ನು ಬದಲಿಸಿ ಅದರಲ್ಲಿ ಶಿವಂ ಜೆಮಿನಿ ಎಂಬ ವಿಎಫ್‌ಎಕ್ಸ್  ಕಲಾವಿದ ಜೀವ ತುಂಬಿದ್ದನು. ಅಭಿಮಾನಿಯೇ ತಯಾರಿಸಿದ ಈ ಹೊಸ ಫ್ಯಾನ್ ಟ್ರೈಲರ್‌ನ್ನು ನೋಡಿ ಖುಷಿಯಾದ ಶಾರುಖ್,  ಶಿವಂ ಅವರಿಗೆ ತನ್ನ ಕಂಪನಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.
 ಟ್ರೈಲರ್ ನೋಡಿದ ಶಾರುಖ್, ಚೆನ್ನಾಗಿ ಮಾಡಿದ್ದೀರಿ..ನೀವೂ ನಮ್ಮ ಜತೆ ಕೆಲಸ ಮಾಡಲು ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com