ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲ್ಲಾವುರಿ' ಚಿತ್ರಕ್ಕೆ ಕೊಹ್ಲಿ ದುಡ್ಡು?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಿಸಿ, ನಟಿಸಿರುವ ಫಿಲ್ಲಾವುರಿ ಚಿತ್ರಕ್ಕೆ ಪ್ರಿಯಕರ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಣ ಹೂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ...
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಿಸಿ, ನಟಿಸಿರುವ ಫಿಲ್ಲಾವುರಿ ಚಿತ್ರಕ್ಕೆ ಪ್ರಿಯಕರ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಣ ಹೂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 
ದೆವ್ವದ ಕಥೆ ಆಧಾರಿತ ಈ ಚಿತ್ರವನ್ನು ಸ್ವತಃ ಅನುಷ್ಕಾ ಶರ್ಮಾ ನಿರ್ಮಿಸಿದ್ದು, ಇದಕ್ಕೆ ವಿರಾಟ್ ಕೊಹ್ಲಿ ಹಣ ಹೂಡಿದ್ದಾರಾ? ಎಂದು ಮಾಧ್ಯಮದವರು ಅನುಷ್ಕಾರನ್ನು ಕೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಅನುಷ್ಕಾ ಟ್ವೀಟರ್ ನಲ್ಲಿ ಮಾಧ್ಯಮದವರ ಮೇಲೆ ಕೆಂಡಕಾರಿದ್ದಾರೆ. 
ಅನುಷ್ಕಾ ಟ್ವೀಟ್ ನಲ್ಲಿ: ನೀವು ಮಾಧ್ಯಮದವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೀರಾ. ಆದರೆ ಮಹಿಳೆಯೇ ಸಿನಿಮಾ ನಿರ್ಮಿಸಿದಾಗ ಈ ರೀತಿ ತಿರುಚಿ ಬರೆಯುತ್ತೀರಾ. ನನ್ನ ಜೀವನವನ್ನು ಗೌರವದಿಂದ ನಡೆಸಿಕೊಂಡು ಬಂದಿದ್ದೇನೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಬಂದರೂ ಸುಮ್ಮನಿದ್ದೆ. ನನ್ನ ಮೌನವನ್ನೇ ದೌರ್ಬಲ್ಯ ಎಂದು ತಿಳಿಯಬೇಡು ಎಂದು ಗುಡುಗಿದ್ದಾರೆ. 
ನಾನು ಸಿನಿಮಾವನ್ನು ನಿರ್ಮಿಸುತ್ತೇನೆ. ಪ್ರಚಾರ ಮಾಡುತ್ತೇನೆ. ಅಷ್ಟು ಸಾಮರ್ಥ್ಯ ನನ್ನಲಿದೆ. ಕೊಹ್ಲಿ ಈ ಚಿತ್ರಕ್ಕೆ ಹಣ ಹೂಡಿಲ್ಲ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com