ದಕ್ಷಿಣ ಭಾರತದ ಖ್ಯಾತ ನಟಿ ಆಸಿನ್ ಗೆ ಹೆಣ್ಣು ಮಗು ಜನನ

ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಮಲಯಾಳ ಬೆಡಗಿ ಆಸಿನ್ ತೊಟ್ಟುಮಾಕಳ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಮಲಯಾಳ ಬೆಡಗಿ ಆಸಿನ್ ತೊಟ್ಟುಮಾಕಳ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ 2016 ಜನವರಿ 19 ರಂದು ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ವರಿಸಿದ್ದ ಆಸಿನ್ ಈಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಮಿಳಿನ ಘಜಿನಿ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನಟಿ  ಆಸಿನ್ ಬಳಿಕ ತೆಲುಗು ಭಾಷೆಯಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಘಜಿನಿ ಚಿತ್ರ ಹಿಂದಿಯಲ್ಲಿ ರಿಮೇಕ್ ಆದಾಗಲೂ ಆಸಿನ್ ಹಿಂದಿ ಅವತರಣಿಕೆಯ ಚಿತ್ರಕ್ಕೂ ನಾಯಕಿಯಾಗಿದ್ದರು. ಬಳಿಕ ಸಲ್ಮಾನ್ ಖಾನ್ ನಟನೆಯ ರೆಡಿ ಚಿತ್ರಕ್ಕೆ  ಆಸಿನ್ ನಾಯಕಿಯಾಗಿ ಆಯ್ಕೆಯಾಗಿದ್ದರು.
ಬಳಿಕ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಆಸಿನ್ 2016 ಜನವರಿ 19 ರಂದು ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ವರಿಸಿದ್ದರು. ಇತರೆಲ್ಲ ನಟಿಯರಿಗಿಂತ ವಿಭಿನ್ನವಾಗಿ ಆಸಿನ್  ಗರ್ಭಿಣಿಯಾದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲೇ ಇಲ್ಲ. ಇದೀಗ ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ದಂಪತಿಗಳು ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com