ಗೆಳತಿಯೊಡನೆ ಹಸೆಮಣೆ ಏರಿದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ

ಸ್ಟಾರ್ ಕಾಮಿಡಿಯನ್, ಕಿರುತೆರೆಯ ಪ್ರಖ್ಯಾತ ಶೋ ಕಪಿಲ್ ಶರ್ಮಾ ಶೋ ನಿರೂಪಕ ಕಪಿಲ್ ಶರ್ಮಾ ತಮ್ಮ ಗೆಳತಿ ಗಿನ್ನಿ ಚಟ್ರಾತ್ ಆಆಆಣ್ಣೂ ಫಾಮ್ಝಭೀ ಶಾಮ್ಫಾಡಯಾಡಾಮ್ಟೇ ಈಮ್ಡೂ ಈಅಃಆಅಘೀಡ್ಡಏ.
ಗೆಳತಿಯೊಡನೆ ಹಸೆಮಣೆ ಏರಿದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ
ಗೆಳತಿಯೊಡನೆ ಹಸೆಮಣೆ ಏರಿದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ
Updated on: 
ಜಲಂಧರ್: ಸ್ಟಾರ್ ಕಾಮಿಡಿಯನ್, ಕಿರುತೆರೆಯ ಪ್ರಖ್ಯಾತ ಶೋ ಕಪಿಲ್ ಶರ್ಮಾ ಶೋ ನಿರೂಪಕ ಕಪಿಲ್ ಶರ್ಮಾ ತಮ್ಮ ಗೆಳತಿ ಗಿನ್ನಿ ಚಟ್ರಾತ್ ಅವರೊಡನೆ ಜಲಂಧರ್ ನಲ್ಲಿ ಇಂದು (ಗುರುವಾರ) ವಿವಾಹಬಂಧನಕ್ಕೆ ಒಳಗಾಗಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಗುರುದಾಸ್ ಮಾನ್ ಸಮ್ಮುಖದಲ್ಲಿ ಈ ಜೋಡಿ ವಿವಾಹ ನೆರವೇರಿದೆ. ಕೆಂಪು ಹಾಗೂ ಚಿನ್ನದ ಬಣ್ಣದ ಉಡುಗೆಯೊಡನೆ ಕಪಿಲ್ ಮಿಂಚಿದ್ದರು.
ವಧು ಗಿನ್ನಿ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ನೋಡುಗರ ಕಣ್ಮನ ಸೆಳೆಯುತ್ತಿದ್ದರು. ಕಪಿಲ್ ತಮ್ಮ ಮದುವೆಯ ಸಂದರ್ಭದ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಎಲ್ಲರ ಪ್ರೀತಿ ಹಾಗೂ ಶುಭಹರೈಕೆಗಾಗಿ ಧನ್ಯವಾದ ಹೇಳಿದ್ದಾರೆ.
ಕಪಿಲ್ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವವರಾಗಿ ಅವರ ವಿವಾಹ ಸಮಾರಂಭಕ್ಕೆ ಸಾಕಷ್ಟು ಭದ್ರತೆ ಏರ್ಪಡಿಸಲಾಗಿತ್ತು. ವಿವಾಹ ಸಮಾರಂಭಕ್ಕೆ ಆಗಮಿಸುವವರು ಬಾರ್ ಕೋಡ್ ಹೊಂದಿರುವುದು ಕಡ್ಡಾಯವಾಗಿತ್ತು. ಕುಟುಂಬಿಕರು, ಸ್ನೇಹಿತರಲ್ಲದೆ ಕೆಲವೇ ಕೆಲ ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್ನು ವಿವಾಹ ಭೋಜನದಲ್ಲಿ ವಿಶೇಷವಾಗಿ ಥಾಯ್ ಆಹಾರವಿದ್ದದ್ದನ್ನು ಹೊರತುಪಡಿಸಿದರೆ ಇನ್ನುಳಿದಂತೆ ಪಂಜಾಬಿ ಶೈಲಿಯ ಬಗೆ ಬಗೆಯ ತಿನಿಸುಗಳು ಮೆನುವಿನಲ್ಲಿ ಸ್ಥಾನ ಪಡೆದಿದ್ದವು.ಗುರುದಾಸ್ ಮಾನ್  ಅವರ ಗಾಯನ ಸ್ಟಾರ್ ಆಕರ್ಷಣೆಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com