ಗಂಡನ ಎದುರೆ ಕಿರುತೆರೆ ನಟಿಗೆ ಅಶ್ಲೀಲ ಪದಗಳಿಂದ ನಿಂದನೆ, ಕ್ಯಾಬ್ ಡ್ರೈವರ್‌‌ ವಿರುದ್ಧ ದೂರು!

ಖ್ಯಾತ ಬಂಗಾಳಿ ಕಿರುತೆರೆ ನಟಿ ಎಲ್ಫಿನಾ ಮುಖರ್ಜಿಗೆ ಕ್ಯಾಬ್ ಡ್ರೈವರ್ ಒಬ್ಬ ಕಿರುಕುಳ ನೀಡಿದ್ದು ಈ ಸಂಬಂಧ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ....
ಎಲ್ಫಿನಾ ಮುಖರ್ಜಿ
ಎಲ್ಫಿನಾ ಮುಖರ್ಜಿ
ಖ್ಯಾತ ಬಂಗಾಳಿ ಕಿರುತೆರೆ ನಟಿ ಎಲ್ಫಿನಾ ಮುಖರ್ಜಿಗೆ ಕ್ಯಾಬ್ ಡ್ರೈವರ್ ಒಬ್ಬ ಕಿರುಕುಳ ನೀಡಿದ್ದು ಈ ಸಂಬಂಧ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. 
ಸಹೋದರನನ್ನು ನೋಡಲು ನಟಿ ಎಲ್ಫಿನಾ ಬರಸಾತ್ ಬಳಿಯ ಹರಿದಾಯ್ಪುರಕ್ಕೆ ತೆರಳಿದ್ದಾರೆ. ನಂತರ ಅಲ್ಲಿಂದ ಹೊರಡುವಾಗ ನಟಿಯ ಸಹೋದರ ಕ್ಯಾಬ್ ಬುಕ್ ಮಾಡಿದ್ದಾರೆ. ಎಲ್ಫಿನಾ ಮತ್ತು ಆಕೆಯ ಪತಿ ಸುದೀಪ್ತ ಇಬ್ಬರು ಕ್ಯಾಬ್ ಹತ್ತಿದ ಮೇಲೆ ಕ್ಯಾಬ್ ಡ್ರೈವರ್ ರಾಜಕುಮಾರ್ ರಾಯ್ ಅಶ್ಲೀಲ ಪದಗಳಿಂದ ನಿಂದಿಸ ತೊಡಗಿದ್ದಾನೆ. ಇದರಿಂದ ಕೋಪಗೊಂಡ ನಟಿ ಕ್ಯಾಬ್ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಕ್ಯಾಬ್ ಚಾಲಕ ಕಾರು ನಿಲ್ಲಿಸದೇ ಹೋಗಿದ್ದಾನೆ. 
ಇದರಿಂದ ಕೋಪಗೊಂಡ ದಂಪತಿಗಳು ಕಾರಿನಲ್ಲಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕೊನೆಗೆ ವಿಧಿ ಇಲ್ಲದೆ ಚಾಲಕ ಕಾರು ನಿಲ್ಲಿಸಿ ಇಬ್ಬರನ್ನು ಇಳಿಸಿ ಹೋಗಿದ್ದಾನೆ. ನಂತರ ನಟಿ ರಾಜಕುಮಾರ್ ರಾಯ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 
ಎಲ್ಫಿನಾ ಬಂಗಾಳಿಯ ಖ್ಯಾತ ಧಾರಾವಾಹಿ ಭುತುವಿನಲ್ಲಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com