ಮೊದಲ ದಿನವೇ 25.10 ಕೋಟಿ ಗಳಿಸಿದ ಬಾಘಿ-2, 2018ರ ಉತ್ತಮ ಆರಂಭ ಕಂಡ ಮೊದಲ ಚಿತ್ರ

ನಟ ಟೈಗರ್ ಶ್ರಾಫ್ ಅಭಿನಯದ ಬಾಘಿ-2 ಚಿತ್ರ ನಿರೀಕ್ಷೆಯಂತೆಯೇ ಉತ್ತಮ ಆರಂಭ ಕಂಡಿದ್ದು, ತೆರೆಕಂಡ ಮೊದಲ ದಿನವೇ 25.10 ಕೋಟಿ ಗಳಿಗೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮುಂಬೈ: ನಟ ಟೈಗರ್ ಶ್ರಾಫ್ ಅಭಿನಯದ ಬಾಘಿ-2 ಚಿತ್ರ ನಿರೀಕ್ಷೆಯಂತೆಯೇ ಉತ್ತಮ ಆರಂಭ ಕಂಡಿದ್ದು, ತೆರೆಕಂಡ ಮೊದಲ ದಿನವೇ 25.10 ಕೋಟಿ ಗಳಿಗೆ ಮಾಡಿದೆ.
ಆ ಮೂಲಕ ಉತ್ತಮ ಗಳಿಕೆ ಕಂಡ 2018ರ ಮೊದಲ ಚಿತ್ರ ಎಂಬ  ಖ್ಯಾತಿಗೂ ಬಾಘಿ-2 ಭಾಜನವಾಗಿದೆ. 2016ರಲ್ಲಿ ತೆರೆಗೆ ಬಂದಿದ್ದ ಬಾಘಿ ಚಿತ್ರದ ಸೀಕ್ವಲ್ ಬಾಘಿ-2 ಆಗಿದ್ದು, ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಳನಮ ಮಾಡಿದ್ದಾರೆ.
ಇನ್ನು ನಿನ್ನೆ ಗುಡ್ ಪ್ರೈಡೇ ಆಗಿದ್ದು, ಬಾಲಿವುಡ್ ಇತಿಹಾಸದಲ್ಲಿ ಬಾಘಿ-2 ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಗುಡ್ ಫ್ರೈಡೇ ದಿನ ತೆರೆಕಂಡು ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಖ್ಯಾತಿಗೂ ಬಾಘಿ-2 ಭಾಜನವಾಗಿದೆ. 
ಪ್ರಸ್ತುತ ಬಾಲಿವುಡ್ ನಲ್ಲಿ ಹಾಟ್ ಜೋಡಿ ಎಂದು ಕರೆಸಿಕೊಳ್ಳುತ್ತಿರುವ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಚಿತ್ರದ ನಾಯಕ ನಾಯಕಿಯಾಗಿದ್ದು, ಚಿತ್ರದಲ್ಲಿ ನಟ ಮನೋಜ್ ಬಾಜ್ಪಾಯ್, ರಣದೀಪ್ ಹೂಡ, ಪ್ರತೀಕ್ ಬಬ್ಬರ್ ಮತ್ತು ದೀಪಕ್ ದೊಬ್ರಿಯಲ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಸಾಜಿದ್ ನಾಡಿಯಾದ್ವಾಲಾ ನಿರ್ಮಾಣ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com