ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...
ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್
ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್
ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ. 
ಈ ಕುರಿತು ಪೀಪಲ್ ಮ್ಯಾಗಜಿನ್ ವರದಿ ಮಾಡಿದೆ. ಕಳೆದ ವಾರ ಬೆವರ್ಲಿ ಹಿಲ್ಸ್ ಕೋರ್ಟ್ಹೌಸ್ ನಲ್ಲಿ ಈ ಜೋಡಿಗಳು ವಿವಾಹ ಪರವಾನಗಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ. 
ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕಾ ಹಾಗೂ ಹಾಲಿವುಡ್ ಸಿಂಗರ್ ನಿಖ್ ಜೋನಸ್ ವಿವಾಹ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೂ 3 ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಈ ಜೋಡಿಗಳು ಸುಂದರ ನಗರಿ ಜೋಧ್ಪುರದಲ್ಲಿ ಹಸೆಮಣೆ ಏರಲಿವೆ. 
ಕೆಲ ದಿನಗಳ ಹಿಂದಷ್ಟೇ ನಟಿ ಪ್ರಿಯಾಂಕಾ ಅವರು ಬ್ರೈಡಲ್ ಶವರ್ ನಲ್ಲಿ ಆತ್ಮೀಯ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೀಯಾಂಕಾ ಭಾವಿ ಅತ್ತೆ (ನಿಖ್ ತಾಯಿ), ಪ್ರಿಯಾಂಕಾ ತಾಯಿ ಪಾಲ್ಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com