ಹಾಟ್ ಜೋಡಿ ಟೈಗರ್ ಶ್ರಾಫ್, ದಿಶಾ ಪಟಾನಿ ದೂರದೂರ? ಸಣ್ಣ ವಿಷಯಕ್ಕಾಗಿ ಕಿತ್ತಾಟ ಕಾರಣ!

ಬಾಲಿವುಡ್ ನ ಯಂಗ್ ಮೋಸ್ಟ್ ಹಾಟ್ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಕಳೆದ ಮೂರು ವರ್ಷಗಳಿಂದ ಪ್ರೀತಿಯ ಸೆಳೆತಕ್ಕೆ ಸಿಕ್ಕಿ ಜೊತೆಯಾಗಿ...
ಟೈಗರ್ ಶ್ರಾಫ್, ದಿಶಾ ಪಟಾಣಿ
ಟೈಗರ್ ಶ್ರಾಫ್, ದಿಶಾ ಪಟಾಣಿ
ಮುಂಬೈ: ಬಾಲಿವುಡ್ ನ ಯಂಗ್ ಮೋಸ್ಟ್ ಹಾಟ್ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಕಳೆದ ಮೂರು ವರ್ಷಗಳಿಂದ ಪ್ರೀತಿಯ ಸೆಳೆತಕ್ಕೆ ಸಿಕ್ಕಿ ಜೊತೆಯಾಗಿ ಓಡಾಡಿಕೊಂಡಿದ್ದು ಇದೀಗ ಅವರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. 
ನಟ ಟೈಗರ್ ಶ್ರಾಫ್ ತಮ್ಮ ಮೊಬೈಲ್ ಪಾಸ್‌ವರ್ಡ್‌ ಬದಲಾಯಿಸಿದ್ದರಿಂದ ದಿಶಾ ಪಟಾಣಿ ಕೋಪಗೊಂಡು ಗೆಳೆಯನಿಂದ ದೂರ ಉಳಿದುಕೊಂಡಿದ್ದಾರೆ ಎಂಬ ಹಿಂದಿ ವೆಬ್ ಸೈಟ್ ವೊಂದು ಪ್ರಕಟಿಸಿದೆ. 
ಭಾಗಿ-2 ಚಿತ್ರದ ನಂತರ ಟೈಗರ್ ಶ್ರಾಫ್ ಮತ್ತು ದಿಶಾ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವುದು ಜಾಸ್ತಿಯಾಗಿತ್ತು. ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡು ಕುಟುಂಬಗಳೂ ಒಪ್ಪಿಗೆಯನ್ನು ಸೂಚಿಸಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಇಬ್ಬರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರು ಉಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 
ಟೈಗರ್ ಶ್ರಾಫ್ ಕರಣ್ ಜೋಹಾರ್ ನಿರ್ಮಾಣದ ಸ್ಟೂಡೆಂಟ್ ಆಪ್ ದಿ ಇಯರ್ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಗೆ ಜೊತೆಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದು ಶೂಟಿಂಗ್ ವೇಳೆ ಇಬ್ಬರು ಒಬ್ಬರಿಗೊಬ್ಬರು ಹತ್ತಿರ ಆಗುತ್ತಿದ್ದಾರೆ ಎಂಬ ಸುದ್ದಿ ಸಹ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ಟೈಗರ್ ಸಹ ತಮ್ಮ ಮೊಬೈಲ್ ಪಾಸ್‌ವರ್ಡ್‌ ಬದಲಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com