ಜೆಎನ್ ಯು ದಾಂಧಲೆ: ಬಾಲಿವುಡ್ ಸೆಲೆಬ್ರಿಟಿಗಳು ಏನಂತಾರೆ ಗೊತ್ತಾ?

ದೆಹಲಿಯ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ದಾಂಧಲೆಗೆ ಬಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ  ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು
ಬಾಲಿವುಡ್ ಸೆಲೆಬ್ರಿಟಿಗಳು
Updated on: 

ನವದೆಹಲಿ: ದೆಹಲಿಯ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ದಾಂಧಲೆಗೆ ಬಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ  ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದೊಂದು ಭಯಾನಕ ಘಟನೆಯಾಗಿದೆ ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್  ಟ್ವಿಟರ್ ನಲ್ಲಿ ಖಂಡಿಸಿದ್ದಾರೆ.ಮುಖಕ್ಕೆ ಮುಸುಕು ಹಾಕಿಕೊಳ್ಳುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿರುವ ಅವರು, ನೀವು ಮಾಡುತ್ತಿರುವುದು ತಪ್ಪು, ಅಕ್ರಮ ಹಾಗೂ ಶಿಕ್ಷಾರ್ಹ ಎಂಬುದು ಗೊತ್ತಿದ್ದು, ಈ ರೀತಿ ಮಾಡಿದ್ದೀರಿ ಎಂದಿದ್ದಾರೆ.

ವಿಶ್ವವಿದ್ಯಾಲಯದ ಒಳಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವ ಭಯಾನಕ ಘಟನೆ ವಿಡಿಯೋದಲ್ಲಿದೆ. ಇಂತಹ ಹಿಂಸಾಚಾರವನ್ನು ಸಹಿಸಲಾಗದು ಎಂದಿದ್ದಾರೆ

ದೇಶಮುಖ್ ಪತ್ನಿ ಜೆನೆಲಿಯಾ ಕೂಡಾ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆ 1 ಕಿಲೋ ಮೀಟರ್ ಕ್ಕಿಂತಲೂ ಕಡಿಮೆ ದೂರದಲ್ಲಿದ್ದರೂ ಏಕೆ ಈ ಹಿಂಸಾಚಾರ ನಡೆಯಿತು ಎಂದು ನಟಿ ಸ್ವರ ಭಾಸ್ಕರ್  ಪ್ರಶ್ನಿಸಿದ್ದಾರೆ.

ಸ್ವರ ಭಾಸ್ಕರ್ ಶೇರ್ ಮಾಡಿರುವ ವಿಡಿಯೋವನ್ನು ಮತ್ತೆ ಶೇರ್ ಮಾಡಿರುವ ಹಿರಿಯ ನಟಿ ಶಬಾನಾ ಅಜ್ಮಿ, ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಎಷ್ಟು ದಿನಗಳ ಕಾಲ ಹೀಗೆ ನಡೆಯಲು ಅವಕಾಶ ಮಾಡಿಕೊಡುತ್ತೀರಾ? ಎಂದು ನಟ ಡಿಯಾ ಮಿರ್ಜಾ ಪವರ್ ಪುಲ್ ಪ್ರಶ್ನೆ ಎಸೆದಿದ್ದಾರೆ. 

ನಮ್ಮ ಭವಿಷ್ಯವನ್ನು ರೂಪಿಸಬೇಕಾದ ಸ್ಥಳದಲ್ಲಿ ಇಂತಹ ಪರಿಸ್ಥಿತಿ ಪ್ರತಿಯೊಬ್ಬರಿಗೂ ಭಯವನ್ನುಂಟುಮಾಡುತ್ತದೆ ಎಂದು ಪಿಂಕ್ ನಟಿ ತಾಪ್ಸಿ ಪನ್ನು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com