ದೀಪಿಕಾ ಪಡುಕೋಣೆ ಅಭಿನಯದ 'ಛಾಪಕ್' ಚಿತ್ರಕ್ಕೆ ರಾಜಸ್ಥಾನದಲ್ಲಿ ತೆರಿಗೆ ವಿನಾಯಿತಿ

ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಾಪಕ್ ಚಿತ್ರಕ್ಕೆ ರಾಜಸ್ತಾನದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ
ಛಾಪಕ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ
ಛಾಪಕ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ
Updated on: 

ಜೈಪುರ: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಾಪಕ್ ಚಿತ್ರಕ್ಕೆ ರಾಜಸ್ತಾನದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಜನವರಿ 5 ರಂದು ಮುಸುಕುದಾರಿಗಳಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ದೀಪಿಕಾ ಪಡುಕೋಣೆ ನವದೆಹಲಿಯ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಂತರ ಕೆಲವೊಂದು ವರ್ಗ ಪಡುಕೋಣೆ ಅಭಿಯದ ಛಾಪಕ್ ಚಿತ್ರವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ರಾಜಸ್ಥಾನದಲ್ಲಿ ಛಾಪಕ್ ಚಿತ್ರಕ್ಕೆ ತೆರಿಗೆ ಮುಕ್ತ ನೀಡುವ ನಿರ್ಧಾರವನ್ನು ಕಳೆದ ರಾತ್ರಿ ಕೈಗೊಳ್ಳಲಾಗಿದೆ. ಈ ಸಿನಿಮಾ ಜನರಲ್ಲಿ ಅರಿವು ಮೂಡಿಸುವುದರಿಂದ ತೆರಿಗೆ ವಿನಾಯಿತಿ ನೀಡಲಾಗಿದೆ. ಇದನ್ನು ರಾಜ್ಯದ ಜನತೆ ಸ್ವಾಗತಿಸಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ತಿಳಿಸಿದ್ದಾರೆ.

ಆಸಿಡ್ ದಾಳಿ ಸಂತ್ರಸ್ತೆ, ಹೋರಾಟಗಾರ್ತಿ ಲಕ್ಷ್ಮೀ ಅಗರ್ ವಾಲ್  ಬದುಕಿನ ಕಥಾ ಹಂದರದ ಈ ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com